Kannada Recipe: ಮೊಸರು ಇಲ್ಲದೆ, ಕೇವಲ 10 ನಿಮಿಷದಲ್ಲಿ ದಿಡೀರ್ ಎಂದು ಸಾಫ್ಟ್ ಇಡ್ಲಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ದಿಡೀರ್ ಸಾಫ್ಟ್ ರವೆ ಇಡ್ಲಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಈ ರೀತಿಯಲ್ಲಿ ಇಡ್ಲಿ ಮಾಡಲು ಮೊಸರಿನ ಅವಶ್ಯಕತೆ ಇರುವುದಿಲ್ಲ.

ದಿಡೀರ್ ರವೆ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು: ರುಚಿಗೆ ತಕಷ್ಟು ಉಪ್ಪು, 1 ಗ್ಲಾಸ್ ರವೆ, ಅರ್ಧ ಬಟ್ಟಲು ಅವಲಕ್ಕಿ, ಕಾಲು ಚಮಚ ಅಡುಗೆ ಸೋಡಾ.

ದಿಡೀರ್ ರವೆ ಇಡ್ಲಿ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲಿಗೆ ಅವಲಕ್ಕಿ ಹಾಗೂ ನೀರನ್ನು ಹಾಕಿ 2 – 3 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಮತ್ತೆ ನೀರನ್ನು ಹಾಕಿ ಅವಲಕ್ಕಿ ನೆನಯಲು ಬಿಡಿ. ಅವಲಕ್ಕಿ ನೆನೆದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಅದೇ ಬಟ್ಟಲಿಗೆ ಒಂದು ಲೋಟ ರವೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಮತ್ತೆ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಮತ್ತೆ ನೀರನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಾಲು ಚಮಚದಷ್ಟು ಬೇಕಿಂಗ್ ಸೋಡಾ ವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇಡ್ಲಿ ಪ್ಲೇಟಿಗೆ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿ ಬೇಯಿಸಿಕೊಂಡರೆ ದಿಡೀರ್ ಸಾಫ್ಟ್ ರವೆ ಇಡ್ಲಿ ಸವಿಯಲು ಸಿದ್ಧ.