Kannada Serial: ಉತ್ತಮ ಪಾತ್ರ, ಟಾಪ್ ಧಾರಾವಾಹಿ ಭಾಗ್ಯಲಕ್ಷ್ಮಿಯನ್ನು ನಟಿ ಗೌತಮಿ ಬಿಟ್ಟು ಹೋಗಲು ದಿಡೀರ್ ನಿರ್ಧಾರ. ಏನಾಗಿದೆ ಎಂದು ಫ್ಯಾನ್ಸ್ ಫುಲ್ ಚರ್ಚೆ. ನಿಜಕ್ಕೂ ಏನಾಗುತ್ತಿದೆ ಗೊತ್ತೇ?

Kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿಗೆ ದೊಡ್ಡ ಫ್ಯಾನ್ ಫಾಲೋವರ್ಸ್ ಇದ್ದಾರೆ. ಅಕ್ಕ ತಂಗಿಯರ ಬಾಂಧವ್ಯವನ್ನು ಬಿತ್ತರಿಸುವ ಭಾಗ್ಯಲಕ್ಷ್ಮಿ ಧಾರಾವಾಹಿ ಈಗಾಗಲೇ ಕನ್ನಡಿಗರ ಮನ ಗೆದ್ದಿದೆ.

ಭಾಗ್ಯಲಕ್ಷ್ಮಿ ಧಾರವಾಹಿ ಭಾಗ್ಯಲಕ್ಷ್ಮಿ ಹಾಗೂ ಲಕ್ಷ್ಮೀ ಬಾರಮ್ಮ 2 ಸ್ಲಾಟ್ ಗಳಲ್ಲಿ ಪ್ರಸಾರವಾಗುತ್ತದೆ. ಭಾಗ್ಯ ಹಾಗೂ ಲಕ್ಷ್ಮಿ ಎನ್ನುವ ಅಕ್ಕ ತಂಗಿಯರು ಕಷ್ಟಗಳನ್ನು ಎದುರಿಸಿ ಪ್ರೀತಿಯಿಂದ ಇರುವ ಕಥೆ ಹೊಂದಿರುವ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎರಡು ರೀತಿಯ ಪಾತ್ರಗಳು ಜನರ ಗಮನ ಸೆಳೆದೆವೆ.

ಭಾಗ್ಯ ಗಂಡ ತಾಂಡವ ನ ಗರ್ಲ್ ಫ್ರೆಂಡ್ ಪಾತ್ರದಲ್ಲಿ ಗೌತಮಿ ಗೌಡ ಅಭಿನಯಿಸುತ್ತಿದ್ದರು. ಭಾಗ್ಯಳಿಗೆ ತೊಂದರೆ ಕೊಡುವ ಶ್ರೇಷ್ಠ ಎನ್ನುವ ಕ್ಯಾರೆಕ್ಟರ್ ಮಾಡುತ್ತಿದ್ದ ಗೌತಮಿ ಗೌಡ ಇದೀಗ ಈ ಪಾತ್ರದಿಂದ ಹೊರಡದಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ಅವರೇ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಗೌತಮಿ ಗೌಡ ಹೇಳಿದ್ದೇನು!

ಭಾಗ್ಯಳಿಗೆ ತೊಂದರೆ ಕೊಡುವ ಪಾತ್ರದಲ್ಲಿ ನಾನು ಅಭಿನಯಿಸುತ್ತಿದೆ ಇದು ನೆಗೆಟಿವ್ ಶೇಡ್ ಆಗಿದ್ದರು ನಿಮ್ಮೆಲ್ಲರ ಪ್ರೀತಿ ಹಾರೈಕೆ ನನಗೆ ಸಿಕ್ಕಿತ್ತು. ಆದರೆ ಈಗ ಅನಿವಾರ್ಯ ಕಾರಣದಿಂದ ಈ ಧಾರಾವಾಹಿಯಿಂದ ಹೊರ ನಡೆದಿದ್ದೇನೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮುಂದೆ ಹೀಗೆ ಇರಲಿ ಸದ್ಯದಲ್ಲಿಯೇ ಇದಕ್ಕೆ ಕಾರಣ ತಿಳಿಸುತ್ತೇನೆ ಬೇರೆ ಯಾವ ಕಾರಣವೂ ಇಲ್ಲ” ಎಂದು ಗೌತಮಿ ಗೌಡ ಪೋಸ್ಟ್ ಹಾಕಿಕೊಂಡಿದ್ದಾರೆ. ಗೌತಮಿ ಯವರ ಈ ಪೋಸ್ಟ್ ಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ ಅಂದರೆ ಗುಡ್ ನ್ಯೂಸ್ ಇದ್ಯಾ ಎಂದು ಕೇಳುತ್ತಿದ್ದಾರೆ ಮದುವೆ ಸಿಹಿ ಸುದ್ದಿಯನ್ನು ನಿರೀಕ್ಷೆ ಮಾಡುತ್ತಿದ್ದಾರೆ.

ಶ್ರೇಷ್ಠ ಅವರ ಪಾತ್ರಕ್ಕೆ ಈಗಾಗಲೇ ಇನ್ನೊಬ್ಬ ಪಾತ್ರಧಾರಿ ಆಗಮನವಾಗಿದೆ ಇವರನ್ನು ಕೂಡ ಗೌತಮಿ ಗೌಡ ಅವರಿಗೆ ನೀಡಿದಷ್ಟು ಪ್ರೀತಿ ಜನರು ನೀಡುತ್ತಾರಾ? ಇವರನ್ನು ಕೂಡ ಹಾರೈಸುತ್ತಾರಾ ಕಾದು ನೋಡಬೇಕು.

bhagyalakshmicastgoutami gowdaKannada serial