Film News: ಮೊದಲ ಬಾರಿಗೆ ಲಿಪ್ ಲಾಕ್ ಗೆ ಒಪ್ಪಿದ ಕೀರ್ತಿ ಸುರೇಶ್: ಆದರೆ ಒಮ್ಮೆಲೇ ತೆಲುಗಿನಿಂದ ಬ್ಯಾನ್ ಆಗುತ್ತಾರಾ?? ಏನಾಗಿದೆ ಗೊತ್ತೇ?

Film News: ನಟಿ ಕೀರ್ತಿ ಸುರೇಶ್ ಅವರು ಉತ್ತಮ ಪಾತ್ರಗಳಲ್ಲಿ ನಟಿಸುವ ಮೂಲಕ ಸಿನಿಪ್ರಿಯರ ಮನಸ್ಸು ಗೆದ್ದವರು. ಮಹಾನಟಿ ಅಂತಹ ಗ್ರೇಟ್ ಸಿನಿಮಾದಲ್ಲಿ ನಟಿಸಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡರು. ಕೀರ್ತಿ ಸುರೇಶ್ ಅವರನ್ನು ನೋಡಿದ ತಕ್ಷಣ ಆ ಮಹಾನಟಿ ಸಿನಿಮಾ ಜ್ಞಾಪಕಕ್ಕೆ ಬರುತ್ತದೆ. ಅಷ್ಟರ ಮಟ್ಟಿಗೆ ಆ ಸಿನಿಮಾ ಕೀರ್ತಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಕೀರ್ತಿ ಸುರೇಶ್ ಅವರ ಇಷ್ಟು ವರ್ಷಗಳ ಸಿನಿಜರ್ನಿ ನೋಡಿದರೆ, ಎಲ್ಲವೂ ಡೀಸೆಂಟ್ ಆದಂತಹ ಪಾತ್ರಗಳು ಹಾಗೆಯೇ ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ಹೆಚ್ಚು ನಟಿಸಿದ್ದಾರೆ.

ಕೀರ್ತಿ ಸುರೇಶ್ ಅವರ ಸಿನಿಮಾಗಳನ್ನು ಗಮನಿಸಿದರೆ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಗ್ಲಾಮರ್ ಎಕ್ಸ್ಪೋಸಿಂಗ್ ಇರುತ್ತಿರಲಿಲ್ಲ, ಬಹಳ ಒಳ್ಳೆಯ ಪಕ್ಕದ ಮನೆ ಹುಡುಗಿ ಫೀಲ್ ಕೊಡುವ ಪಾತ್ರಗಳನ್ನೇ ಆಯ್ಕೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಗ್ಲಾಮರಸ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಕೀರ್ತಿ ಅವರು ತೆಲುಗಿನಲ್ಲಿ ದಸರಾ ಮತ್ತು ಭೋಲಾಶಂಕರ್ ಸಿನಿಮಾದಲ್ಲಿ ನಟಿಸಿದ್ದು, ತಮಿಳಿನಲ್ಲಿ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್ ಅವರ ಸಿನಿಮಾಗಳಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ ಅವರು ಇದುವರೆಗೂ ಯಾವುದೇ ಸಿನಿಮಾದಲ್ಲೂ ಲಿಪ್ ಲಾಕ್ ಮಾಡಿಲ್ಲ.

ಆದರೆ ಈಗ ತಮಿಳಿನಲ್ಲಿ ಒಬ್ಬ ಸ್ಟಾರ್ ಹೀರೋ ಜೊತೆಗೆ ಲಿಪ್ ಲಾಕ್ ಮಾಡುವುದಕ್ಕೆ ಕೀರ್ತಿ ಸುರೇಶ್ ಅವರು ಓಕೆ ಹೇಳಿದ್ದಾರಂತೆ. ಈಗಾಗಲೇ ಅದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ವಿಚಾರ ಹೊರಬರುತ್ತಿದ್ದ ಹಾಗೆ ತೆಲುಗಿನ ನಿರ್ಮಾಪಕರು ಕೀರ್ತಿ ಸುರೇಶ್ ಅವರ ಮೇಲೆ ಕೋಪಗೊಂಡಿದ್ದಾರೆ. ತೆಲುಗಿನಲ್ಲಿ ಎಷ್ಟು ಸಾರಿ ಕೇಳಿಕೊಂಡರು ಲಿಪ್ ಲಾಕ್ ಗೆ ಒಪ್ಪಲಿಲ್ಲ, ಈಗ ತಮಿಳು ಸಿನಿಮಾಗೆ ಒಪ್ಪಿಕೊಂಡಿದ್ದಾರೆ, ಅವರಿಗೆ ಹೆಚ್ಚು ಅವಕಾಶಗಳು ತೆಲುಗಿನಲ್ಲಿ ಸಿಕ್ಕವು, ಆದರೆ ತೆಲುಗು ಹೀರೋಗಳ ಜೊತೆಗೆ ಲಿಪ್ ಲಾಕ್ ಮಾಡಲಿಲ್ಲ ಎಂದು ಕೀರ್ತಿ ಸುರೇಶ್ ಅವರನನ್ನು ತೆಲುಗಿನಿಂದ ಬ್ಯಾನ್ ಮಾಡಬೇಕು ಎಂದುಕೊಳ್ಳುತ್ತಿದ್ದಾರಂತೆ.

Fiolm newsHeroineKeetritelugu film industry