Kerala: ಕೇರಳದಿಂದ ಸೈನಿಕರ ಕೈ ಸೇರಿತ್ತು ಆ ಪತ್ರ; ಆ ಪತ್ರದಲ್ಲೇನಿತ್ತು? ಅದನ್ನ ನೋಡಿ ಸೈನಿಕರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಅಬ್ಬಾ ಇಂಥವರೂ ಇರ್ತಾರಾ?

Kerala: ಒಬ್ಬ ವ್ಯಕ್ತಿ (person)ಗೆ ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಎರಡು ಜೀವಗಳನ್ನು ಪ್ರೀತಿಯಲ್ಲಿ ಒಂದು ಮಾಡುವ ದಿನವೇ ಮದುವೆ (Marriage). ಹಾಗಾಗಿ ನಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ನಮ್ಮ ಅಭಿರುಚಿಗೆ ಹೊಂದಿಕೆ ಆಗುತ್ತದೆಯೇ ಎಂದು ನೋಡಬೇಕು. ಇಬ್ಬರ ಅಭಿರುಚಿಗಳು ಒಂದೇ ಇದ್ದಾಗ ಜೀವನ ಸುಗಮವಾಗುತ್ತದೆ. ಕೇರಳ (Kerala)ದ ಒಂದು ಜೋಡಿಯು ತಮ್ಮ ಮದುವೆಗೆ ಭಾರತೀಯ ಸೈನಿಕರನ್ನು ಆಹ್ವಾನಿಸಿದ್ದು, ಇದೀಗ ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ.

ಮದುವೆಗೆ ನಮ್ಮ ಬಂಧು-ಬಳಗವನ್ನು, ಸ್ನೇಹಿತರ (Friends)ನ್ನು ಪ್ರಾಥಮಿಕ ಶಾಲೆಯಿಂದ ಹಿಡಿದು ಇಲ್ಲಿಯವರೆಗಿನ ಎಲ್ಲ ಸ್ನೇಹಿತರನ್ನು, ಶಿಕ್ಷಕ (Teachers)ರನ್ನು ಆಹ್ವಾನಿಸುವುದು ಕಾಮನ್. ಆದರೆ ಕೇರಳದ ಜೋಡಿಯು ಭಾರತೀಯ ಸೈನಿಕರ ಮೇಲಿರುವ ಪ್ರೀತಿ, ಅಭಿಮಾನದಿಂದ ಸೈನಿಕ (soldiers) ರನ್ನು ತಮ್ಮ ಮದುವೆ ಆಹ್ವಾನಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರೀಯೇಟ್ ಮಾಡಿದೆ. ನೆಟ್ಟಿಗರು ಈ ಜೋಡಿಯ ದೇಶಪ್ರೇಮಕ್ಕೆ ಶಬ್ಬಾಶ್ ಎಂದಿದ್ದಾರೆ.

Kerala: ಕೇರಳದಿಂದ ಸೈನಿಕರ ಕೈ ಸೇರಿತ್ತು ಆ ಪತ್ರ; ಆ ಪತ್ರದಲ್ಲೇನಿತ್ತು? ಅದನ್ನ ನೋಡಿ ಸೈನಿಕರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಅಬ್ಬಾ ಇಂಥವರೂ ಇರ್ತಾರಾ? https://sihikahinews.com/amp/kerala-couple-invite-soldiers-to-their-marriage/

ಕೇರಳದ ರಾಹುಲ್ (Rahul) ಹಾಗೂ ಕಾರ್ತಿಕಾ (Kartika) ಎನ್ನುವ ಜೋಡಿಯೇ ಸೈನಿಕರಿಗೆ ಆಹ್ವಾನ ನೀಡಿದವರಾಗಿದ್ದಾರೆ. ಇವರು ಸೈನಿಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರ (Letter)ದಲ್ಲಿ, ಪ್ರೀತಿಯ ವೀರರೆ, ನವೆಂಬರ್ ೧೦ ರಂದು ನಾವು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ದೇಶದ ಬಗ್ಗೆ ಪ್ರೀತಿ, ದೃಢತೆ ಮತ್ತು ದೇಶಭಕ್ತಿಗೆ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ. ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕೆ ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ನಿಮ್ಮಿಂದಾಗಿ ನಾವು ನಮ್ಮ ಮನೆಯಲ್ಲಿ ಶಾಂತಿಯಿಂದ ಮಲಗಿದ್ದೇವೆ. ನಮ್ಮ ಪ್ರೀತಿ ಪಾತ್ರರ ಜೊತೆ ದಿನಕಳೆಯಲು ಅನುವು ಮಾಡಿಕೊಟ್ಟಿದ್ದಕ್ಕೆ ಕೃತಜ್ಞತೆಗಳು. ನಿಮ್ಮಿಂದಾಗಿ ನಾವು ಸುಖವಾಗಿ ಮದುವೆ ಆಗುತ್ತಿದ್ದೇವೆ. ನಮ್ಮ ಈ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ನಮಗೆ ತುಂಬಾ ಸಂತೋಷವೆನಿಸುತ್ತದೆ. ನಿಮ್ಮ ಉಪಸ್ಥಿತಿ ಹಾಗೂ ಆಶೀರ್ವಾದ ನಮಗೆ ಬೇಕು ಎಂದು ಅವರು ಬರೆದಿದ್ದರು.

ಇದನ್ನೂ ಓದಿ: Tollywood News: ಟಾಲಿವುಡ್ ನಲ್ಲಿ ಇನ್ಮೇಲೆ ಡಬ್ಬಿಂಗ್ ಸಿನಿಮಾಕ್ಕೆ ಅವಕಾಶ ಸಿಗೋದೇ ಡೌಟ್; ಕಾಂತಾರ ಸಿನಿಮಾ ಸಕ್ಸೆಸ್ ಗೆ ನಲುಗಿದ ಟಾಲಿವುಡ್ ನ ಹೊಸ ನಿರ್ಧಾರ!

ಈ ಮದುವೆಯ ಆಮಂತ್ರಣ ಪತ್ರವನ್ನು ಭಾರತೀಯ ಸೈನ್ಯ (Indian Army)ದ ಅಧಿಕೃತ ಇನ್ಸ್ಟ್ರಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರ ಜೊತೆ ಅದಕ್ಕೆ ಉತ್ತರವನ್ನು ಬರೆಯಲಾಗಿದೆ. ಇಂಡಿಯನ್ ಆರ್ಮಿ ಮದುವೆ ಆಮಂತ್ರಣಕ್ಕಾಗಿ ರಾಹುಲ್ ಹಾಗೂ ಕಾರ್ತಿಕಾ ಅವರಿಗೆ ಧನ್ಯವಾದಗಳು. ದಂಪತಿಗಳು ತುಂಬಾ ಸಂತೋಷದಾಯಕ ಹಾಗೂ ಆನಂದದಾಯಕ ಜೀವನವನ್ನು ನಡೆಸಲಿ ಎಂದು ಹಾರೈಸಿದ್ದಾರೆ. ಸೈನ್ಯದಿಂದ ಬಂದ ಈ ಉತ್ತರ ನೋಡಿ ನವಜೋಡಿಗಳು ಥ್ರಿಲ್ ಆಗಿದ್ದಾರೆ.