Kichha Sudeep: ಮೊಸರಲ್ಲೂ ಕಲ್ಲು ಹುಡುಕುವ ಕೆಲಸ ಮಾಡಬಾರದು; ಹೀಗಂತ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು ಯಾರಿಗೆ ಗೊತ್ತಾ ?

Kichha Sudeep: ಸ್ಯಾಂಡಲ್ ವುಡ್ (Sandalwood) ಅತಿ ಹೆಚ್ಚು ಅಭಿಮಾನಿ (Fans)ಗಳನ್ನು ಹೊಂದಿರುವ ನಟರಲ್ಲಿ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಕೂಡ ಒಬ್ಬರು. ಇವರಿಗೆ ಕನ್ನಡ ನಾಡಿನಲ್ಲಿ ಅಷ್ಟೇ ಅಲ್ಲ, ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಎಲ್ಲ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ಅದ್ಬುತ ಅಭಿನಯ ಹಾಗೂ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಾರೆ. ಸುದೀಪ್ (Sudeep) ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಆ ಕಾರ್ಯಕ್ರಮದ ಕುರಿತಾಗಿ ಅಷ್ಟೇ ಮಾತನಾಡುತ್ತಾರೆ. ಪತ್ರಕರ್ತರು (Journalist)  ಕೇಳಿದರೂ ಅಷ್ಟೇ ನಾಜೂಕಾಗಿ ಉತ್ತರ ನೀಡುತ್ತಾರೆ. ಇದೀಗ ಕಿಚ್ಚ ಸುದೀಪ್ ಅವರು ಹೇಳಿದ ಮಾತು ಸಾಕಷ್ಟು ವೈರಲ್ ಆಗಿದೆ.

Kichha Sudeep: ಮೊಸರಲ್ಲೂ ಕಲ್ಲು ಹುಡುಕುವ ಕೆಲಸ ಮಾಡಬಾರದು; ಹೀಗಂತ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು ಯಾರಿಗೆ ಗೊತ್ತಾ ? https://sihikahinews.com/amp/kiccha-sudeep-visited-theatre-opning-programme/

ಕಿಚ್ಚ ಸುದೀಪ್ ಅವರು ಬೆಂಗಳೂರಿನ ಬ್ರಿಗೇಡ್ ರಸ್ತೆ (Brigade Road) ಯಲ್ಲಿ ನಿರ್ಮಿಸಲಾದ ರೆಕ್ಸ್ ಪಿವಿಆರ್ ಥಿಯೇಟರ್ (Theatre) ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಥಿಯೇಟರ್ನಲ್ಲಿ ಬಾಲಿವುಡ್ (Bollywood)  ಹಾಗೂ ಹಾಲಿವುಡ್ (Hollywood) ನಿರ್ದೇಶಕರು, ನಟರ ಫೋಟೋಗಳನ್ನಷ್ಟೇ ಹಾಕಿದ್ದರು. ಹಾಗಾಗಿ ಪತ್ರಕರ್ತರು ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಆಗ ಕಿಚ್ಚ ಸುದೀಪ್ ಅವರು ಯಾವುದೇ ರೀತಿಯ ಬೇಸರ, ಸಿಟ್ಟು ಮಾಡಿಕೊಳ್ಳದೆ ತಾಳ್ಮೆಯಿಂದಲೇ ಪತ್ರಕರ್ತರಿಗೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ: Cricket news: ಕೆ ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಮದುವೆಗೆ ಸಾಕ್ಷಿಯಾಗಲಿದೆ ಕ್ರಿಕೆಟ್ ಲೋಕ; ಮದುವೆ ಯಾವಾಗ ಗೊತ್ತೆ!?

ನಾವು ಯಾವಾಗಲೂ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಇಲ್ಲಿ ಸುಸಜ್ಜಿತ ಥಿಯೇಟರ್ ನಿರ್ಮಾಣವಾಗಿದೆ. ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡುತ್ತಾರೆ ಎಂದು ಹೇಳಿದ್ದಾರೆ. ಟಿಕೆಟ್ ದರ ಕೂಡ ಕೈಗೆಟುಕುವ ದರದಲ್ಲಿ ಇದೆ ಎಂದು ತಿಳಿಸಿದ್ದಾರೆ. ಇಲ್ಲಿ ಇನ್ನೂ ಕೆಲಸಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಬಹುದು. ನಾವು ಕಾಯಬೇಕು ಎಂದು ಕಿಚ್ಚ ಸುದೀಪ್ ಅವರು ಉತ್ತರ ನೀಡಿದ್ದಾರೆ.

ಈ ಹಿಂದೆ ರೆಕ್ಸ್ ಚಿತ್ರಮಂದಿರ ಇರುವಾಗ ಇಲ್ಲಿ ಲಯನ್ ಕಿಂಗ್ ಎನ್ನುವ ಸಿನೆಮಾ ಬಿಡುಗಡೆಯಾಗಿತ್ತು. ಆ ಸಿನೆಮಾವನ್ನು ನಾನು ಇಲ್ಲಿಯೇ ನೋಡಿದ್ದೇನೆ. ಕಾಲೇಜು ದಿನಗಳಲ್ಲೂ ಹಲವಾರು ಸಿನೆಮಾಗಳನ್ನು ಈ ಚಿತ್ರಮಂದಿರದಲ್ಲೇ ನೋಡಿದ್ದೇನೆ. ಆದರೆ ಈಗ ಚಿತ್ರ ನೋಡುವುದಕ್ಕಿಂತಲೂ ಮಾಡುವುದರಲ್ಲಿಯೇ ಹೆಚ್ಚು ಖುಷಿ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: Kannada News: ಮೊದಲ ಬಾರಿಗೆ ರಿಸ್ಕ್ ತೆಗೆದುಕೊಳ್ಳುವ ಪಾತ್ರ ಒಪ್ಪಿಕೊಂಡ ನಟಿ ತ್ರಿಷಾ: ಎಲ್ಲ ಕೇವಲ ಆ ನಟನಿಗಾಗಿ ಮಾತ್ರ.

ಕನ್ನಡದಲ್ಲಿ ಈಗ ಒಳ್ಳೆಯ ಸಿನೆಮಾಗಳು ಬರುತ್ತಿವೆ. ಜನರು ಸಹ ಖುಷಿಯಿಂದ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಹಾಗಾಗಿ ಕರೋನಾ ಯಾವುದೇ ರೀತಿಯಲ್ಲಿ ನಮ್ಮ ಸ್ಯಾಂಡಲ್ವುಡ್ಗೆ ಎಫೆಕ್ಟ್ ಮಾಡಿಲ್ಲ ಎಂದು ಸುದೀಪ್ ಅವರು ಅಭಿಪ್ರಾಯ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.

bigg boss kannada season 9Kannada FilmKichha Sudeepಕಿಚ್ಚ ಸುದೀಪ್