Kisan Credit Loan: ರಾಜ್ಯ ರೈತರಿಗೆ ಗುಡ್ ನ್ಯೂಸ್; ಕೃಷಿ ಇಲಾಖೆಯಿಂದ ಪಡೆಯಿರಿ ಭರ್ಜರಿ ರಿಯಾಯಿತಿ ಸಾಲ; ಈಗಲೇ ಅರ್ಜಿ ಸಲ್ಲಿಸಿ!

Kisan Credit Loan: ಕೃಷಿ ಸಂಬಂಧಪಟ್ಟಂತಹ ವಸ್ತುಗಳನ್ನು ಖರೀದಿಸುವ ಕಾರಣಕ್ಕಾಗಿ ಇನ್ನು ಮುಂದೆ ರೈತರು ಕಷ್ಟ ಪಡಬೇಕಾದ ಅಗತ್ಯವಿಲ್ಲ ಏಕೆಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿಗಳವರೆಗೂ ಕೂಡ ಸಾಲ ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಕೃಷಿ ಇಲಾಖೆ ಮಾಡಲು ಹೊರಟಿದೆ. ಈ ಯೋಜನೆ ಎಲ್ಲಾ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೂಡ ಲಭ್ಯ ಇದ್ದು ರೈತರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಇದು ಮಾಡಲಿದೆ. ಈ ಯೋಜನೆಯ ಮೂಲಕ ಸರ್ಕಾರ ಕೇವಲ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದು ಮಾತ್ರವಲ್ಲದೆ ಕೆಲವೊಂದು ಸಾಲಗಳನ್ನು ಬಡ್ಡಿ ರಹಿತವಾಗಿ ಕೂಡ ರೈತರಿಗೆ ನೀಡುವಂತಹ ಕೆಲಸವನ್ನು ಮಾಡಲು ಹೊರಟಿದೆ.

ಪ್ರಧಾನ ಮಂತ್ರಿ ಕೆಸಿಸಿ ಯೋಜನೆ!

ದೇಶದಲ್ಲಿರುವಂತಹ ಸಣ್ಣ ರೈತರಿಗೆ ಬದುಕು ಕಟ್ಟಿಕೊಳ್ಳುವ ಕಾರಣಕ್ಕಾಗಿ ಈ ಸಲ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಬ್ಯಾಂಕು ಅಥವಾ ಸಹಕಾರಿ ಬ್ಯಾಂಕುಗಳಲ್ಲಿ ಈ ಯೋಜನೆ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳವರೆಗು ಕೂಡ ಸಾಲ ಸೌಲಭ್ಯವನ್ನು ರೈತರು ಪಡೆದುಕೊಂಡು ತಮ್ಮ ಕೃಷಿ ಕೆಲಸಗಳಿಗಾಗಿ ಇದನ್ನು ಬಳಸಿಕೊಳ್ಳಬಹುದಾಗಿದೆ.

ಅರ್ಹತೆಗಳು ಹಾಗೂ ಡಾಕ್ಯುಮೆಂಟ್ಸ್ ಗಳು!

  • ಕೃಷಿ ಭೂಮಿಯನ್ನು ಹೊಂದಿರಬೇಕು ಹಾಗೂ ಕೃಷಿ ಚಟುವಟಿಕೆಯನ್ನು ಮಾಡುತ್ತಿರಬೇಕು.
  • ಒಂದು ನಿರ್ದಿಷ್ಟವಾದ ಮಾಸಿಕ ಆದಾಯವನ್ನು ಹೊಂದಿರಬೇಕು.
  • ಒಂದು ಎಕರೆ ಅಥವಾ ಮ್ಯಾಕ್ಸಿಮಮ್ ಹತ್ತು ಹೆಕ್ಟೇರ್ ಕೃಷಿ ಯೋಗ್ಯ ಭೂಮಿಯನ್ನು ಹೊಂದಿರಬೇಕು.
  • 18 ರಿಂದ 70 ವರ್ಷದ ರೈತರಿಗೂ ಕೂಡ ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  • ಜಮೀನಿನ ಪಹಣಿ ಪತ್ರ
  • ಇನ್ಕಮ್ ಸರ್ಟಿಫಿಕೇಟ್
  • ಆಧಾರ್ ಕಾರ್ಡ್
  • ಅಡ್ರೆಸ್ ಪ್ರೂಫ್ ಗಾಗಿ ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ ಕಾರ್ಡ್ ಅನ್ನು ನೀಡಬೇಕಾಗಿರುತ್ತದೆ.

ಪಡೆದುಕೊಳ್ಳಬಹುದಾದಂತಹ ಸಾಲದ ವಿಧಗಳು!

  • ಕೃಷಿ ಕೆಲಸಗಳಿಗಾಗಿ ಮೂರು ವರ್ಷಗಳ ಸಮಯಾವಧಿಯ ಸಾಲವನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ಮೀನು ಸಾಕಾಣಿಕೆ ಪ್ರೀತಿಯ ಉಪಕಸುಬುಗಳಿಗೆ ಮೂರರಿಂದ ಐದು ವರ್ಷಗಳ ವರೆಗಿನ ಎರಡನೇ ಅವಧಿಯ ಸಾಲವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
  • ಎರಡನೇ ವಿಧಾನದಲ್ಲಿ ನಾಲ್ಕು ಪ್ರತಿಶತ ಬಡ್ಡಿದರವನ್ನು ಹೊಂದಿರುವ ಸಾಲವನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.

ಕೆಪಿಸಿ ಯೋಜನೆ ಅಡಿಯಲ್ಲಿ ಯಾವೆಲ್ಲ ಬ್ಯಾಂಕುಗಳು ಸಾಲವನ್ನು ನೀಡುತ್ತವೆ ಹಾಗೂ ಅವುಗಳ ಬಡ್ಡಿ ದರಗಳು!

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೈತರು ಕೆಸಿಸಿ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿ ಸಾಲವನ್ನು ಐದು ವರ್ಷಗಳವರೆಗೆ ಪಡೆದುಕೊಳ್ಳಬಹುದಾಗಿದ್ದು ಕೇವಲ ಎರಡು ಪ್ರತಿಶತ ಬಡ್ಡಿದರ ಇರುತ್ತದೆ.
  • ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನಾಲ್ಕರಿಂದ ಐದು ವರ್ಷಗಳವರೆಗೆ ಸಾಲವನ್ನು ಮರುಪಾವತಿ ಮಾಡಬಹುದಾಗಿದ್ದು 9 ಪ್ರತಿಶತದಿಂದ ಬಡ್ಡಿ ಪ್ರಾರಂಭವಾಗುತ್ತೆ.
  • ಆಕ್ಸಿಸ್ ಬ್ಯಾಂಕ್ ನಲ್ಲಿ 2.5 ಲಕ್ಷ ರೂಪಾಯಿಗಳ ಸಾಲವನ್ನು ನೀವು ಐದು ವರ್ಷಗಳ ಅವಧಿಗೆ ಪಡೆದುಕೊಳ್ಳಬಹುದಾಗಿದ್ದು 8.55% ದಿಂದ ಬಡ್ಡಿ ಪ್ರಾರಂಭವಾಗುತ್ತೆ. 50,000ಗಳ ಇನ್ಸೂರೆನ್ಸ್ ಸುರಕ್ಷತೆ ಕೂಡ ಇರುತ್ತೆ.
  • ಬ್ಯಾಂಕ್ ಆಫ್ ಇಂಡಿಯಾದಲ್ಲಿ ಐವತ್ತು ಸಾವಿರ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ಸಾಲವನ್ನ ರೈತರು ಇಲ್ಲಿ ಪಡೆದುಕೊಳ್ಳಬಹುದಾಗಿದೆ.
Kisan Credit Loan