Kranti Collection: ಕ್ರಾಂತಿ ಚಿತ್ರಕ್ಕೆ ಮೊದಲ ದಿನವೇ ಮೋಸ ! ರೊಚ್ಚಿಗೆದ್ದ ಅಭಿಮಾನಿಗಳು ಮಾಡಿದ್ದೇನು ? ಡಿ ಬಾಸ್ ಶಾಕ್!

Kranti Collection: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಅದ್ದೂರಿಯಾಗಿ ನೆನ್ನೆ ಆರಂಭವಾಗಿದೆ. ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಅರ್ಲಿ ಮಾರ್ನಿಂಗ್ ಶೋ ಕೂಡ ನಡೆದಿದೆ ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾಗಾಗಿ ವರ್ಷಾನುಗಟ್ಟಲೆ ಕಾದಿದ್ದರು ಈಗ ಈ ಸಿನಿಮಾದ ಸಂಭ್ರಮಾಚರಣೆಯಲ್ಲಿ ಇದ್ದಾರೆ.

ಕ್ರಾಂತಿ ಸಿನಿಮಾವನ್ನು ದರ್ಶನ್ ಫ್ಯಾನ್ ಗಳೆ ಪ್ರಚಾರ ಮಾಡಿದ್ರು. ಹಾಗಾಗಿ ಕ್ರಾಂತಿ ಸಿನಿಮಾದ ಬಗ್ಗೆ ದರ್ಶನ ಅಭಿಮಾನಿಗಳಿಗೆ ವಿಶೇಷ ಕಾಳಜಿ ಇದೇ ಕಾರಣಕ್ಕಾಗಿ ಈ ಸಿನಿಮಾವನ್ನು ಗೆಲ್ಲಿಸುವ ನಿಟ್ಟಿನಲ್ಲಿ ದರ್ಶನ್ ಅಭಿಮಾನಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ದರ್ಶನ್ ಅವರು ಈ ವರ್ಷವಿಡೀ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಅವರ ಸಿನಿಮಾ ರಿಲೀಸ್ ಆಗಬಾರದು ಎನ್ನುವಂತೆ ಹಲವರು ಕುತಂತ್ರ ಮಾಡಿದ್ರು ಎನ್ನಲಾಗುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಬೆಂಗಳೂರಿನ ಖ್ಯಾತ ಚಿತ್ರಮಂದಿರಗಳಲ್ಲಿ ಒಂದಾದ ನರ್ತಕಿ ಮೊದಲಾದ ಚಿತ್ರಮಂದಿರಗಳಲ್ಲಿ ದರ್ಶನ್ ಅವರ ಕ್ರಾಂತಿ ಸಿನಿಮಾಕ್ಕೆ ಸಂಪೂರ್ಣ ಸಪೋರ್ಟ್ ಸಿಗುತ್ತಿಲ್ಲ. ಈ ಪ್ರಮುಖ ಥಿಯೇಟರ್ ಗಳಲ್ಲಿ ಕ್ರಾಂತಿ ಸಿನಿಮಾಕಿಂತಲೂ ಹೆಚ್ಚು ಬಾಲಿವಿಡ್ ಬಾದ್ ಷಾ ಶಾರೂಖ್ ಖಾನ್ ಅಭಿನಯದ ಪಠಾಣ್  ಸಿನಿಮಾವೇ ರಾರಾಜಿಸುತ್ತಿದೆ. ದರ್ಶನ್ ಅವರು ಗೆಲ್ಲಬಾರದು ಎನ್ನುವ ಕಾರಣಕ್ಕೆ ಅವರಿಗೆ ಸರಿಯಾಗಿ ಎಲ್ಲಾ ಥಿಯೇಟರ್ಗಳಲ್ಲಿಯೂ ಸಿನಿಮಾ ಹಾಕೋದಕ್ಕೆ ಅವಕಾಶ ನೀಡಲಾಗುತ್ತಿಲ್ಲ. ದರ್ಶನ ಅವರನ್ನು ಕಂಡರೆ ಆಗದವರು ಕ್ರಾಂತಿ ಸಿನಿಮಾದ ಗೆಲುವಿಗೆ ಮುಳ್ಳಾಗಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಕ್ರಾಂತಿ ಸಿನಿಮಾದಲ್ಲಿ ಅಕ್ಷರ ಕ್ರಾಂತಿ ಮಾಡಲು ಹೊರಟಿದ್ದಾರೆ ದರ್ಶನ್. ಕನ್ನಡ ಶಾಲೆಯಲ್ಲಿಯೇ ಕಲಿತು ಎನ್ ಆರ್ ಐ ಆಗಿರುವ ಪಾತ್ರವನ್ನು ದರ್ಶನ್ ನಿಭಾಯಿಸಿದ್ದಾರೆ. ಇನ್ನು ದರ್ಶನ ಅವರ ಕ್ರಾಂತಿ ಸಿನಿಮಾವನ್ನು ನೋಡಿದ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ ವರ್ಷದ ನಂತರ ದರ್ಶನ್ ತೆರೆಯುವ ಮೇಲೆ ಮಿಂಚಿದ್ದಾರೆ ಇನ್ನು ಕಥೆಯು ಕೂಡ ಸ್ಟ್ರಾಂಗ್ ಆಗಿತ್ತು ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎನ್ನುವುದೇ ಆಗಿದೆ. ಆದರೆ ಈ ಸಿನಿಮಾವನ್ನು ಗೆಲ್ಲಿಸುವುದು ದೊಡ್ಡ ಚಾಲೆಂಜ್.

ಕ್ರಾಂತಿ ಸಿನಿಮಾದ ಜೊತೆ ಇನ್ನೂ ಕೆಲವು ಸಿನಿಮಾಗಳು ಥಿಯೇಟರ್ ನಲ್ಲಿ ಕಾಣಿಸುತ್ತಿದೆ. ಕ್ರಾಂತಿ ಸಿನಿಮಾ ಅಡ್ವಾನ್ಸ್ ಬುಕಿಂಗ್ ನಿಂದ 6 ಕೋಟಿ ಹಣ ಗಳಿಸಿದೆ. ಇನ್ನು ಮೊದಲ ದಿನದ ಕಲೆಕ್ಷನ್ ಅಡ್ವಾನ್ಸ್ ಬುಕಿಂಗ್ ಎಲ್ಲವೂ ಸೇರಿ ಸುಮಾರು 10 ಕೋಟಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಮಾಸ್ ಲೀಡರ್ ದರ್ಶನ್ ಅವರ ಸಿನಿಮಾ ವಾರಾಂತ್ಯಕ್ಕೆ ಎಷ್ಟು ಕಲೆಕ್ಷನ್ ಮಾಡುತ್ತೋ ಕಾದು ನೋಡಬೇಕು.

DarshanKannada FilmKranti Film