Lakshmi Blessings: ಈ ವಸ್ತುಗಳಲ್ಲಿ ಮಾತ್ರ ಲಕ್ಷ್ಮಿ ದೇವಿ ನೆಲೆಸಿರುತ್ತಾರೆ; ಇವುಗಳನ್ನು ತಪ್ಪದೇ ಮನೆಯಲ್ಲಿಟ್ಟುಕೊಳ್ಳಿ!

Lakshmi Blessings: ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿ ಸಂಪತ್ತಿನ ಅಧಿದೇವತೆ ಆಗಿರುತ್ತಾಳೆ ಹೀಗಾಗಿ ಆಕೆಯನ್ನು ಪೂಜೆ ಮಾಡುವ ಸಂದರ್ಭದಲ್ಲಿ ಕೆಲವೊಂದು ವಸ್ತುಗಳನ್ನು ಪೂಜೆ ಮಾಡಿದರೆ ನಿಮಗೆ ಒಳ್ಳೆಯದಾಗುತ್ತೆ. ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

  • ಲಕ್ಷ್ಮಿಯ ಪೂಜೆಯ ಸಂದರ್ಭದಲ್ಲಿ ಚಿನ್ನವನ್ನು ಇಟ್ಟು ಪೂಜೆ ಮಾಡಿದರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ ಎಂಬುದಾಗಿ ಶಾಸ್ತ್ರಗಳಲ್ಲಿ ತಿಳಿಸಲಾಗಿದ್ದು ಪೂಜೆ ಮಾಡಿ.
  • ಬಿಳಿಯ ಆನೆ ಮೇಲೆ ಸವಾರಿ ಮಾಡುತ್ತಿರುವಂತಹ ಲಕ್ಷ್ಮಿ ದೇವಿಯ ಫೋಟೋ ಸಾಕಷ್ಟು ಅದೃಷ್ಟ ಕಾರಿ ಎಂಬುದಾಗಿ ಪರಿಗಣಿಸಲಾಗುತ್ತದೆ ಹೀಗಾಗಿ ಈ ರೀತಿಯ ಫೋಟೋಗಳನ್ನು ನೀವು ಕೂಡ ಪೂಜೆ ಮಾಡಿದರೆ ಖಂಡಿತವಾಗಿ ದೈವಾನುಗ್ರಹ ನಿಮ್ಮ ಮೇಲೆ ಆಗುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ.
  • ಇನ್ನು ಕಮಲ ಎನ್ನುವುದು ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾಗಿರುವ ಹೂವು ಆಗಿರುತ್ತದೆ ಹೀಗಾಗಿ ಕಮಲದ ಮೇಲೆ ಕುಳಿತಿರುವಂತಹ ಲಕ್ಷ್ಮೀದೇವಿಯ ಫೋಟೋವನ್ನು ನೀವು ಇಟ್ಟು ಪೂಜೆ ಮಾಡಿದರೆ ಖಂಡಿತವಾಗಿ ನಿಮಗೆ ಲಕ್ಷ್ಮಿ ಅನುಗ್ರಹ ಆಗುತ್ತದೆ.
  • ಲಕ್ಷ್ಮೀದೇವಿಯನ್ನು ಪೂಜೆ ಮಾಡುವ ಸಂದರ್ಭದಲ್ಲಿ ದೇವರ ಕೋಣೆಯಲ್ಲಿ ನೀವು ಆಕೆಯ ಪ್ರಿಯವಾಗಿರುವಂತಹ ಸ್ವಸ್ತಿಕ್ ಚಿನ್ನೆಯನ್ನು ಬರೆದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಸಂಪತ್ತಿನ ಹೆಚ್ಚಳ ಉಂಟಾಗುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
  • ಗೂಬೆ ತಾಯಿಗೆ ಅತ್ಯಂತ ಇಷ್ಟವಾಗಿರುವಂತಹ ಜೀವಿಯಾಗಿದೆ ಹೀಗಾಗಿ ಗೂಬೆಯನ್ನು ಯಾವತ್ತೂ ಕೂಡ ನೀವು ಅದಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
  • ಸನಾತನ ಹಿಂದೂ ಧರ್ಮದ ಪ್ರಕಾರ ಧರ್ಮಶಾಸ್ತ್ರ ಗ್ರಂಥಗಳಲ್ಲಿ ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಶ್ರೀ ಎನ್ನುವಂತಹ ಪದ ಎಷ್ಟೊಂದು ಮಹತ್ವದ್ದಾಗಿದೆ ಹಾಗೂ ಪ್ರತಿಯೊಂದು ಬಳಸುತ್ತಾರೆ ಎಂಬುದನ್ನು ನೀವು ಗಮನಿಸಿರಬಹುದು. ಹೀಗಾಗಿ ಈ ಪದವನ್ನು ನೀವು ಸರಿಯಾದ ರೀತಿಯಲ್ಲಿ ಗಮನಿಸಬೇಕಾಗುತ್ತದೆ ಹಾಗೂ ನಿಮ್ಮ ಲಕ್ಷ್ಮೀದೇವಿಯ ಪೂಜಾ ಕ್ರಮಗಳ ಸಂದರ್ಭದಲ್ಲಿ ಕೂಡ ಇದನ್ನು ಅಲ್ಲಿ ಬರೆಯುವುದು ಅತ್ಯಂತ ಪ್ರಮುಖವಾಗಿರುತ್ತದೆ.
  • ಯಾವತ್ತೂ ಕೂಡ ಲಕ್ಷ್ಮೀದೇವಿಯ ಪೂಜೆ ಮಾಡುವ ಸಂದರ್ಭದಲ್ಲಿ ಆಕೆಗೆ ಪ್ರಿಯವಾಗಿರುವಂತಹ ಮಣ್ಣಿನ ದೀಪಗಳಲ್ಲಿ ದೀಪವನ್ನು ಬೆಳಗುವುದು ಅತ್ಯಂತ ಪ್ರಮುಖವಾಗಿರುತ್ತದೆ ಇದರಿಂದಾಗಿ ಆಕೆ ಬೇಗನೆ ಒಲಿಯುತ್ತಾಳೆ ಎಂಬುದಾಗಿ ತಿಳಿಯಬಹುದಾಗಿದೆ.
  • ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿರುವ ಮತ್ತೊಂದು ವಸ್ತು ಆಗಿರುವಂತಹ ಶ್ರೀ ಯಂತ್ರವನ್ನು ಕೂಡ ನೀವು ಆಕೆಯನ್ನು ಪೂಜೆ ಮಾಡುವಂತಹ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದು ಸಾಕಷ್ಟು ಲಾಭವನ್ನು ತಂದು ಕೊಡುತ್ತದೆ.

ಇವಿಷ್ಟು ವಸ್ತುಗಳನ್ನು ಲಕ್ಷ್ಮೀದೇವಿಯ ಪೂಜೆಯ ಸಂದರ್ಭದಲ್ಲಿ ನೀವು ಇಟ್ಟು ಪೂಜೆ ಮಾಡಿದ್ರೆ ಖಂಡಿತವಾಗಿ ನಿಮ್ಮ ಅದೃಷ್ಟ ನಿಮ್ಮ ಪರವಾಗಿ ಇರುತ್ತದೆ ಹಾಗೂ ಕೈ ತುಂಬಾ ಧನ ಸಂಪಾದನೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗುತ್ತದೆ. ಲಕ್ಷ್ಮಿ ಆರಾಧನೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಸಂಪತ್ತನ್ನು ಹೆಚ್ಚಳ ಮಾಡುತ್ತದೆ.

Lakshmi Blessings