Lakshmi Blessings: ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಆಗಮನ ಆಗಬೇಕಾ ಹಾಗಿದ್ದರೆ ಬೆಳಗ್ಗೆ ಎದ್ದ ತಕ್ಷಣ ಈ ನಾಲ್ಕು ವಸ್ತುಗಳನ್ನು ನೋಡಿ!

Lakshmi Blessings: ಸಂಪತ್ತಿನ ಅಧಿದೇವತೆ ಆಗಿರುವಂತಹ ಲಕ್ಷ್ಮಿ ದೇವಿಯನ್ನು ವಲಿಸಿಕೊಂಡರೆ ಖಂಡಿತವಾಗಿ ಜೀವನದಲ್ಲಿ ಕೇವಲ ಹಣಕಾಸಿನ ವಿಚಾರದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಸಮೃದ್ಧಿಯ ವಿಚಾರದಲ್ಲಿ ಕೂಡ ನೀವು ಸಂಪೂರ್ಣ ಯಶಸ್ಸನ್ನು ಸಾಧಿಸಬಹುದು ಎಂಬುದಾಗಿ ಶಾಸ್ತ್ರಗಳು ತಿಳಿಸುತ್ತದೆ. ಇನ್ನು ವಿಶೇಷವಾಗಿ ಲಕ್ಷ್ಮಿಯನ್ನ ಶುಕ್ರವಾರದ ಶುಭದಿನದಂದು ಪೂಜಿಸಲಾಗುತ್ತದೆ ಹೀಗಾಗಿ ಈ ವಿಶೇಷವಾದ ದಿನದಂದು ಶಾಸ್ತ್ರ ಬದ್ಧವಾಗಿ ನೀವು ಸರಿಯಾದ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನು ಲಕ್ಷ್ಮಿ ದೇವಿಗೆ ಮಾಡಿದರೆ ಆಕೆಯ ಅನುಗ್ರಹಕ್ಕೆ ಪಾತ್ರರಾಗುವಂತಹ ಸಂಪೂರ್ಣಾವಕಾಶವನ್ನು ಹೊಂದಿರುತ್ತೀರಿ.

ಕೇವಲ ಪೂಜೆ ಮಾತ್ರವಲ್ಲದೆ ನಿಮ್ಮ ಸುತ್ತಮುತ್ತಲೂ ಇರುವಂತಹ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಕೂಡ ಲಕ್ಷ್ಮಿಯ ಆಗಮನ ನಿಮ್ಮ ಮನೆ ಹಾಗೂ ಮನಸ್ಸಿನಲ್ಲಿ ಕಾಣಬಹುದಾಗಿದೆ. ಇನ್ನು ಲಕ್ಷ್ಮಿ ದೇವಿ ನಿಮ್ಮ ಜೀವನದಲ್ಲಿ ಬರುತ್ತಿದ್ದಾಳೆ ಅಥವಾ ಬರಬಹುದು ಎನ್ನುವುದರ ಮುನ್ಸೂಚನೆ ನೀಡುವಂತಹ ಕೆಲಸವನ್ನು ಕೂಡ ಮಾಡ್ತಾಳೆ. ಅದು ಕೆಲವೊಂದು ವಸ್ತುವಿನ ಮೂಲಕ ಆಗಿರಬಹುದು ಅಥವಾ ಕೆಲವೊಂದು ಘಟನೆಯ ಮೂಲಕ ಕೂಡ ಆಗಿರಬಹುದು ಹಾಗಿದ್ದರೆ ಬನ್ನಿ ಅವುಗಳು ಯಾವುವು ಎಂಬುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

  • ಹಿಂದೂ ಸಂಸ್ಕೃತಿಯಲ್ಲಿ ಶಂಖ ನಾದವನ್ನು ಸಾಕಷ್ಟು ಪವಿತ್ರತೆಯ ಕಾರ್ಯ ಎಂಬುದಾಗಿ ಪರಿಗಣಿಸಲಾಗುತ್ತಿದೆ. ಇನ್ನು ಬೆಳಗ್ಗೆ ಎದ್ದ ತಕ್ಷಣ ಪೂಜೆ ಮಾಡುವ ಸಂದರ್ಭದಲ್ಲಿ ಶಂಖನಾದವನ್ನು ಮಾಡುವುದು ಅತ್ಯಂತ ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಲಕ್ಷ್ಮೀ ಶಂಖದಲ್ಲಿ ನೆಲೆಸಿರುತ್ತಾಳೆ ಎನ್ನುವಂತಹ ಮಾತನ್ನು ಕೂಡ ಶಾಸ್ತ್ರಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಶಂಖನಾದವನ್ನು ಕೇಳಿದರೆ ಇದು ಜೀವನದಲ್ಲಿ ಲಕ್ಷ್ಮಿ ಆಗಮನ ಆಗುತ್ತಿದೆ ಎನ್ನುವಂತಹ ಮುನ್ಸೂಚನೆ ಎಂಬುದಾಗಿ ಪರಿಗಣಿಸಬಹುದಾಗಿದೆ.
  • ಹಿಂದೂ ಧರ್ಮಗಳ ಪ್ರಕಾರ ಸ್ವಚ್ಛಗೊಳಿಸುವಂತಹ ಪರಗೆಯಲ್ಲಿ ಕೂಡ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಇದೆ ಕಾರಣಕ್ಕಾಗಿ ಲಕ್ಷ್ಮೀದೇವಿಗೆ ಸ್ವಚ್ಛವಾಗಿರುವುದು ಅಂದ್ರೆ ಇಷ್ಟ ಎಂಬುದಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಪೂರಕೆಯಲ್ಲಿ ಗುಡಿಸುವುದನ್ನು ನೋಡಿದರೆ ಖಂಡಿತವಾಗಿ ಲಕ್ಷ್ಮೀದೇವಿ ನಿಮ್ಮ ಜೀವನದಲ್ಲಿ ತನ್ನ ಪಾದಕಮಲಗಳನ್ನು ಅಡಿ ಇಟ್ಟಿದ್ದಾಳೆ ಎಂಬುದಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.
  • ಸಾಮಾನ್ಯವಾಗಿ ಮಾಂಸಹಾರ ಹಾಗೂ ಈ ರೀತಿಯ ಆಹಾರಗಳನ್ನು ಸೇವಿಸುವವರು ಒಂದೇ ಸಮನೆ ಇವನ್ನೆಲ್ಲ ಬಿಟ್ಟು ಆಹಾರ ಕ್ರಮದಲ್ಲಿ ದಿಢೀರನೆ ಬದಲಾವಣೆಯನ್ನು ಮಾಡಿಕೊಂಡರೆ ಆ ಸಂದರ್ಭದಲ್ಲಿ ದೇವತೆ ನಿಮ್ಮ ಜೀವನದಲ್ಲಿ ಆಗಮಿಸುವುದಕ್ಕೆ ಹಾಗೂ ನಿಮ್ಮ ಮೇಲೆ ಕೃಪಾಕಟಾಕ್ಷವನ್ನು ಬೀರುವುದಕ್ಕೆ ಸಿದ್ಧಳಾಗಿದ್ದಾಳೆ ಎಂಬುದಾಗಿ ಮುನ್ಸೂಚನೆ ಆಗಿದೆ ಎನ್ನುವುದಾಗಿ ಶಾಸ್ತ್ರಗಳು ತಿಳಿಸುತ್ತವೆ. ಹೀಗಾಗಿ ಇದನ್ನು ಕೂಡ ಮುನ್ಸೂಚನೆಯ ರೂಪದಲ್ಲಿ ನೀವು ಕಾಣಬಹುದಾಗಿದೆ.
  • ಇನ್ನು ಲಕ್ಷ್ಮಿ ದೇವಿಯ ವಾಹನ ಎಂಬುದಾಗಿ ಗೂಬೆಯನ್ನು ಪರಿಗಣಿಸಲಾಗುತ್ತದೆ ಹಾಗೂ ಇದನ್ನು ಶಾಸ್ತ್ರಗಳು ಕೂಡ ಪೂರ್ತಿಯಾಗಿ ಒಪ್ಪಿಕೊಂಡಿದೆ. ಹೀಗಾಗಿ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಅಥವಾ ಬೆಳಗ್ಗೆ ಎದ್ದ ತಕ್ಷಣ ಅಥವಾ ಯಾವುದೇ ಸಂದರ್ಭದಲ್ಲಿ ನೋಡಿದ್ರೆ ಖಂಡಿತವಾಗಿ ಲಕ್ಷ್ಮೀದೇವತೆ ನಿಮ್ಮ ಜೀವನದಲ್ಲಿ ಬರಲಿದ್ದಾಳೆ ಅನ್ನೋದನ್ನು ನೀವು ಒಪ್ಪಿಕೊಳ್ಳಬಹುದಾಗಿದೆ. ಹಣದ ಜೊತೆಗೆ ಅದೃಷ್ಟವನ್ನು ಕೂಡ ಲಕ್ಷ್ಮಿದೇವಿ ಹೊತ್ತು ತರಲಿದ್ದಾಳೆ.
Lakshmi Blessings