Lakshmi Narayana Raja-Yoga:ಲಕ್ಷ್ಮಿದೇವಿಗೆ ಕೈ ಮುಗಿದು ಸ್ವಾಗತಿಸಿ ಲಕ್ಷ್ಮೀನಾರಾಯಣ ಯೋಗ: ಈ ಮೂರು ರಾಶಿಯವರ ಮನೆಯಲ್ಲಿ ಇನ್ನೇನಿದ್ದರೂ ಝಣಝಣ ಕಾಂಚಾಣದೇ ಸದ್ದು; ಅದೃಷ್ಟವಂತ ರಾಶಿಗಳು ಯಾವ ಹೋಗುತ್ತೆ?

Lakshmi Narayana Raja-Yoga:ಬುಧ ಮತ್ತು ಶುಕ್ರ ಮೇಷ ರಾಶಿಯನ್ನು ಪ್ರವೇಶಿಸಲಿದ್ದು ಲಕ್ಷ್ಮೀನಾರಾಯಣ ಯೋಗ ರೂಪಗೊಳ್ಳಲಿದೆ. ಇದರಿಂದ ಈ ಮೂರು ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಜೊತೆಗೆ ಉದ್ಯೋಗ ವ್ಯಾಪಾರ ವ್ಯವಹಾರ ಎಲ್ಲದರಲ್ಲಿಯೂ ಒಳಿತಾಗುತ್ತದೆ. ಹಾಗಾದ್ರೆ ಅದೃಷ್ಟವಂತ ರಾಶಿಗಳು ಯಾವವು ನೋಡೋಣ.

ಮಿಥುನ ರಾಶಿ:

ಮಿಥುನ ರಾಶಿಯ ಏಕಾದಶ ಭಾವದಲ್ಲಿ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುವುದರಿಂದ ಇದು ಆದಾಯ ಮತ್ತು ಲಾಭದ ಸ್ಥಾನವಾಗಿದೆ ಹಾಗಾಗಿ ಈ ರಾಶಿಯವರಿಗೆ ಆರ್ಥಿಕವಾಗಿ ಬಹಳ ಲಾಭವಾಗಲಿದೆ. ಹಳೆಯ ಹೂಡಿಕೆಯಿಂದ ಆರ್ಥಿಕ ಲಾಭವಾಗುತ್ತದೆ. ದೀರ್ಘಕಾಲದ ಹೂಡಿಕೆಗೆ ಯೋಚಿಸಿದ್ದರೆ ಇದು ಸರಿಯಾದ ಸಮಯ. ಶೇರು ಮಾರುಕಟ್ಟೆ ಲಾಟ್ರಿ ಬೆಡ್ಡಿಂಗ್ ವ್ಯವಹಾರದಲ್ಲಿ ತೊಡಗಿಕೊಳ್ಳುವವರಿಗೆ ಆರ್ಥಿಕವಾಗಿ ಹೆಚ್ಚು ಆದಾಯ ಬರುತ್ತದೆ.

ಸಿಂಹ ರಾಶಿ:

ಸಿಂಹ ರಾಶಿಯ ನವಮ ಭಾಗದಲ್ಲಿ ಲಕ್ಷ್ಮೀನಾರಾಯಣ ಯೋಗ ರೂಪಗೊಳ್ಳಲಿದೆ ಇವರಿಗೂ ಆರ್ಥಿಕವಾಗಿ ಬಹಳ ಲಾಭವಾಗಲಿದೆ. ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರ್ಥಿಕವಾಗಿ ಲಾಭವಾಗುತ್ತದೆ. ದೀರ್ಘಕಾಲದ ಆರ್ಥಿಕ ಬಿಕ್ಕಟ್ಟು ಒಂದೇ ಸಲ ಶಮನವಾಗುತ್ತದೆ. ಯಾವುದೇ ಧಾರ್ಮಿಕ ಮಂಗಳ ಕಾರ್ಯದಲ್ಲಿ ನೀವು ತೊಡಗಿಕೊಳ್ಳಬಹುದು ಇನ್ನು ವಿದೇಶದಲ್ಲಿ ವಿದ್ಯಾರ್ಥಿಗಳು ಓದಲು ಬಯಸಿದರೆ ಆ ಕನಸು ನನಸಾಗುವ ಸಮಯ ಇದು. ಒಟ್ಟಿನಲ್ಲಿ ಲಕ್ಷ್ಮೀನಾರಾಯಣ ಯೋಗವು ಸಿಂಹ ರಾಶಿಯವರಿಗೆ ಹೆಚ್ಚು ಫಲಪ್ರದವಾಗಿದೆ.

ಕರ್ಕ ರಾಶಿ:

ಕರ್ಕ ರಾಶಿಯ ಕರ್ಮ ಭಾವದಲ್ಲಿ ರೂಪಗೊಳ್ಳಲಿದೆ ಲಕ್ಷ್ಮಿ ನಾರಾಯಣ ರಾಜಯೋಗ. ಹಾಗಾಗಿ ಯಾವುದೇ ಕೆಲಸ ವ್ಯಾಪಾರ ವ್ಯವಹಾರ ಇದ್ದರೂ ಯಶಸ್ಸು ಸಿಕ್ಕೇ ಸಿಗುತ್ತದೆ. ಕೆಲಸ ಹುಡುಕುತ್ತಿರುವವರಿಗೆ ಕೆಲಸ ಹುಡುಕಿಕೊಂಡು ಬರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಸಾಧ್ಯತೆಗಳು ಇವೆ ದೀರ್ಘಕಾಲದ ಹೂಡಿಕೆ ಮಾಡಲು ಬಯಸಿದರೆ ಇದು ಸರಿಯಾದ ಸಮಯ. ತಂದೆಯಿಂದ ಬೆಂಬಲ ಸಿಗುತ್ತದೆ. ಆದರೆ ಈ ರಾಶಿಯವರ ಮೇಲೆ ಶನಿಯ ಪ್ರಭಾವವು ಇರುವುದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ವಿಷಯದಲ್ಲಿ ಸ್ವಲ್ಪ ನಿರಾಸೆಗೊಳ್ಳಬೇಕಾದೀತು. ಇನ್ನು ಆರೋಗ್ಯವು ಉತ್ತಮವಾಗಿರುತ್ತದೆ.

12 zodiac signsAstrologyHoroscopeLakshmi Narayana Raja-Yogaಜ್ಯೋತಿಷ್ಯಾಸ್ತ್ರ