Lionel Messi Love Story:ವಿಶ್ವದ ಮನಸ್ಸನ್ನು ಗೆದ್ದ ಫುಟ್ಬಾಲ್ ಮಾಂತ್ರಿಕ ಮೆಸ್ಸಿ ಅವರ ಮನಸ್ಸನ್ನು ಕದ್ದ ಅಂತೋನೆಲ್ಲಾ: ಈ ಲವ್ ಸ್ಟೋರಿ ಕೇಳಿದ್ರೆ ನೀವು ಮೆಸ್ಸಿಗೆ ಮತ್ತೊಮ್ಮೆ ಫಿದಾ ಆಗುತ್ತೀರಿ; ಏನು ಗೊತ್ತೇ?

Lionel Messi Love Story: ಇತ್ತೀಚಿಗಷ್ಟೇ ಫೀಫಾ ಫುಟ್ಬಾಲ್ ವಿಶ್ವಕಪ್ 2022 (FIFA Football World Cup 2022) ಕ್ಕೆ ತೆರೆ ಬಿದ್ದಿದೆ. ಅರ್ಜೈಂಟೈನಾದ ಸಾಧನೆಗೆ ಪ್ರಮುಖ ಕಾರಣ ಫುಟ್ಬಾಲ್  ಅಭಿಮಾನಿಗಳ ಆರಾಧ್ಯದೈವ ಮೆಸ್ಸಿ ಅನ್ನೋದು ಎಲ್ಲರಿಗೂ ಗೊತ್ತು. ಕ್ಕೆ ತಮ್ಮ ಗೋಲ ಹೊಡೆತದಿಂದ ಅಭಿಮಾಣಿಗಳ ಹೃದಯಕ್ಕೆ ಲಗ್ಗೆ ಇಟ್ಟಿರುವ ಖ್ಯಾತ ಫುಟ್ಬಾಲ್ ಮಾಂತ್ರಿಕ ಮೆಸ್ಸಿ ಮೇಲೆ ಎಲ್ಲರಿಗೂ ವಿಶೇಷವಾದ ಪ್ರೀತಿ ಗೌರವ.  ಎಲ್ಲರಿಗೂ ಪ್ರೀತಿ ಆಗಿಬಿಟ್ಟಿದೆ.

ಹೌದು ಮೆಸ್ಸಿ ಮೈದಾನಕ್ಕೆ ಇಳಿದ್ರೆ ಜಿಂಕೆ ಅಂತಯೇ ಯಾರಿಗೆ ಗೋಲ್ (Goal) ಸಂಪಾದಿಸುತ್ತಾರೆ ಹೀಗೆ ಜನರನ್ನ ಅತಿಯಾಗಿ ಸೆಳೆದಿರುವ ಮೆಸ್ಸಿಯ ಪ್ರೇಮಕಥೆ ಎಂತದ್ದು  ಗೊತ್ತಾ? ಇದರ ಬಗ್ಗೆ ಗೊತ್ತಾ ನೀವು ಖಂಡಿತ ಮೆಸ್ಸಿಯನ್ನು ಇನ್ನಷ್ಟು ಇಷ್ಟಪಡುವುದಕ್ಕೆ ಶುರು ಮಾಡುತ್ತೀರಿ. ಇದನ್ನೂ ಓದಿ:Rasmika Mandanna: ನಿಜಕ್ಕೂ ತಮಿಳು ನಟ ವಿಜಯ್ ವಿಚ್ಚೇದನ ಪಡೆಯುತ್ತಿರುವುದು ರಶ್ಮಿಕಾ ಕಾರಣಕ್ಕಾ? ಅಭಿಮಾನಿಗಳ ವಾದವೇನು ಗೊತ್ತೇ?

ಮೆಸ್ಸಿ ಹಾಗೂ ಆಂಟೋನೆಲಾ ಪ್ರೇಮ್ ಕಹಾನಿ;

ಮೆಸ್ಸಿ ಹಾಗೂ ಆಂಟೋನೆಲಾ ಇಬ್ಬರು ಬಾಲ್ಯದ ಸ್ನೇಹಿತರು. 5 ವರ್ಷ ವಯಸ್ಸಿದಾಗಲೇ ಮೆಸ್ಸಿ, ಆಂಟೋ ನೆಲಾ ಅವರನ್ನು ಭೇಟಿ ಅದರಂತೆ. ಇಬ್ಬರು ಸಂಬಂಧಿಗಳು ಕೂಡ ಹೌದು. ಸ್ನೇಹಿತರಾಗಿ ಚಿಕ್ಕ ವಯಸ್ಸಿನಿಂದಲೂ ಆಡಿಕೊಂಡೆ ಬೆಳೆದರು. ಮೆಸ್ಸಿ ಹೆಚ್ಚು ಯಾರ ಬಳಿಯು ಮಾತನಾಡುತ್ತಿರಲಿಲ್ಲ ಆದರೆ ಯಾವಾಗ ಅಂಟೋನೆಲಾ ಅವರ ಪರಿಚಯವಾಯಿತೋ ಆಗ ಸ್ನೇಹದ ಮಾಧುರ್ಯ ಮೆಸ್ಸಿ ಅವರಿಗೆ ಅರ್ಥವಾಯಿತು. ಕೊನೆಗೆ ಆಂಟೋನೆಲಾ ಮೇಲೆ ಮೆಸ್ಸಿಗೆ ಪ್ರೇಮಾಂಕುರವಾಗಿತ್ತು.

ಮೆಸ್ಸಿಗಾಗಿ ಆಂಟೋನೆಲಾ ಓದುವುದನ್ನ ಬಿಟ್ಟಿದ್ದು ಯಾಕೆ ಗೊತ್ತಾ?

ಮಾನವಿಕ ಮತ್ತು ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದರು. ದಂತ ವೈದ್ಯಶಾಸ್ತ್ರವನ್ನು ಅಧ್ಯಯನ ಮಾಡಿ ವೃತ್ತಿ ಆರಂಭಿಸುವ ಆಸೆ ಅವರದಾಗಿತ್ತು. ಆದರೆ ಫುಟ್ಬಾಲ್ ವೃತ್ತಿ ಜೀವನವನ್ನು ಆರಿಸಿಕೊಂಡ ಮೆಸ್ಸಿಗೆ ಬಾರ್ಸಿಲೋನ ದಲ್ಲಿ ವಾಸಿಸಬೇಕಾಗಿದ್ದು ಅನಿವಾರ್ಯವಾಗಿತ್ತು. ಹಾಗಾಗಿ ಆತನಿಂದ ದೂರವಾಗಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ತನ್ನ ಓದುವ ಕನಸನ್ನು ತೊರೆಯುತ್ತಾಳೆ ಆಂಟೋನೆಲಾ.

ಇದೊಂದು ಶತಮಾನದ ಅಪರೂಪದ ಮದುವೆ

ಪರಸ್ಪರ ಪ್ರೀತಿಸುತ್ತಿದ್ದ ಮೆಸ್ಸಿ ಹಾಗೂ ಆಂಟೋನೆಲಾ 2017 ಜೂನ್ 30ರಂದು ವಿವಾಹವಾದರು. ರೋಸಾರಿಯೋದ ಸಿಟಿ ಸೆಂಟರ್ ಹೋಟೆಲ್ ನಲ್ಲಿ ಅದ್ಭುತವಾಗಿ ಆಯೋಜನೆಯಾಗಿದ್ದ ವೇದಿಕೆಯ ಮೇಲೆ ಮೆಸ್ಸಿ ಹಾಗೂ ಆಂಟೋನೆಲಾ ಉಂಗುರ ಬದಲಾಯಿಸಿಕೊಳ್ಳುತ್ತಾರೆ 260 ಹೆಚ್ಚು ಅತಿಥಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು ಜೊತೆಗೆ ಮೆಸ್ಸಿಯ ಸಹ ಆಟಗಾರರು ಕೂಡ ಸಮಾರಂಭದಲ್ಲಿ ಸೇರಿದ್ದರು. ಹಾಗಾಗಿ ಇದೊಂದು ಶತಮಾನದ ಮದುವೆ ಎಂದೇ ಗುರುತಿಸಲ್ಪಟ್ಟಿದೆ.

ಇದೇ ಡಿಸೆಂಬರ್ 18 2022 ರಂದು ಬಹುತೇಕ 27 ವರ್ಷದ ನಂತರ ಅರ್ಜೆಂಟೈನ ಫೀಫಾ ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ. ಅದರಲ್ಲೂ ಮೆಸ್ಸಿಯ ಆಟ ಹಲವರಿಗೆ ರಸದೌತನ ನೀಡಿದೆ ಅಭಿಮಾನಿಗಳು ಇದ್ದರೂ ಅವರ ಮೊದಲ ಅಭಿಮಾನಿ ಅವರ ಪತ್ನಿ ಆಂಟೋನೆಲಾ ಅಂದರೆ ತಪ್ಪಾಗಲ್ಲ.

ಆಂಟೋನಿಲಾ ಯಾವಾಗ ಮೆಸ್ಸಿ ಕೈಯಲ್ಲಿ ಟ್ರೋಫಿ ಬಂತೋ ಆಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ಬರೆದುಕೊಳ್ಳುತ್ತಾರೆ. “ನನಗೆ ಯಾವ ರೀತಿ ಪ್ರಾರಂಭಿಸಬೇಕು  ಗೊತ್ತಾಗುತ್ತಿಲ್ಲ ನಿಮ್ಮ ಬಗ್ಗೆ ಬಹಳ ಹೆಮ್ಮೆ ಆಗುತ್ತದೆ. ಕೊನೆಗೂ ನೀವು ವಿಶ್ವ ಚಾಂಪಿಯನ್ ಆಗಿದ್ದೀರಿ ಇಷ್ಟು ವರ್ಷಗಳ ಪರಿಶ್ರಮದ ಫಲವನ್ನು ಅನುಭವಿಸುತ್ತಿದ್ದೀರಿ. ಎಂದಿಗೂ ಬಿಟ್ಟು ಕೊಡಬಾರದು ಕೊನೆಯವರೆಗೂ ಹೋರಾಡಬೇಕು ಎಂಬುದನ್ನು ಎಲ್ಲರಿಗೂ ಕಲಿಸಿದ್ದೀರಿ. ಇನ್ನಷ್ಟು ಸಾಧನೆ ಮಾಡಲು ನೀವು ಬಯಸಿದ್ದೀರಿ”. ಈ ರೀತಿಯಾಗಿ ಮೆಸ್ಸಿಯ ಬಗ್ಗೆ ಅವರ ಸಾಧನೆಗೆ ಶ್ಲಾಘನೆಯ ರೂಪದಲ್ಲಿ ಪ್ರೇಮಪತ್ರವನ್ನು ಬರೆದಿದ್ದಾರೆ ಅಂಟೋನೆಲಾ. ಇನ್ನು ಮಕ್ಕಳನ್ನು ಬಹುವಾಗಿ ಪ್ರೀತಿಸುವ ಮೇಸ್ಸಿ ತನ್ನ ಗೆಲುವಿನ ನಂತರ ಮಕ್ಕಳನ್ನು ಮೈದಾನಕ್ಕೆ ಕರೆದು ಬಿಗಿದಪ್ಪಿ ಗೆಲುವಿನ ಸಂಭ್ರಮ ಅನುಭವಿಸಿದ್ದನ್ನು ನೀವು ನೋಡಿರಬಹುದು ತಮ್ಮ ವೃತ್ತಿ ಜೀವನಕ್ಕೆ ಎಷ್ಟು ಮಹತ್ವ ನೀಡುತ್ತಾರೋ ಅದೇ ರೀತಿ ತಮ್ಮ ಕುಟುಂಬಕ್ಕೂ ಕೂಡ ಮೆಸ್ಸಿ ಸಾಕಷ್ಟು ಗಮನ ನೀಡುತ್ತಾರೆ ಎಂಬುದಕ್ಕೆ ಇದುವೇ ಸಾಕ್ಷಿ.

FIFA Football World Cup 2022Messiಮೆಸ್ಸಿ