Loan: ಆಧಾರ್ ಕಾರ್ಡ್ ಒಂದಿದ್ರೆ ಸಾಕು ಸಿಗತ್ತೆ 2 ಲಕ್ಷ ರೂಪಾಯಿಗಳ ಸುಲಭ ಲೋನ್; ಅಪ್ಲೈ ಮಾಡೋದ್ ಹೇಗೆ ಗೊತ್ತಾ?

Loan: ಪ್ರಧಾನ ಮಂತ್ರಿ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮದೇ ಆಗಿರುವಂತಹ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಬಯಸುವವರು ಹಾಗೂ ಈಗಾಗಲೇ ಮಾಡಿರೋರ್ಗೆ ತಮ್ಮ ವ್ಯಾಪಾರವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕನಸಿದ್ರೆ ಆ ಸಂದರ್ಭದಲ್ಲಿ ಇಲ್ಲಿ ಹಣಕಾಸಿನ ಸಹಾಯವನ್ನು ನೀವು ಪಡೆದುಕೊಳ್ಳಬಹುದಾಗಿದ್ದು, ಕೇವಲ ಆಧಾರ್ ಕಾರ್ಡ್ ಅನ್ನು ನೀಡುವ ಮೂಲಕ ನೀವು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ್ ಮೂಲಕ ಪಡೆದುಕೊಳ್ಳುವಂತಹ ಲೋನ್ ಮೇಲೆ 11 ರಿಂದ 14 ಪ್ರತಿಶತ ಬಡ್ಡಿದರವನ್ನು ಪಾವತಿ ಮಾಡಬೇಕಾಗಿರುತ್ತದೆ. ಇದರ ಜೊತೆಗೆ ಪ್ರೊಸೆಸಿಂಗ್ ಫೀಸ್, ರಿಜಿಸ್ಟ್ರೇಷನ್ ಫೀಸ್ ಸೇರಿದಂತೆ ಸಾಕಷ್ಟು ಶುಲ್ಕಗಳನ್ನು ಕೂಡ ಪಾವತಿ ಮಾಡಬೇಕಾಗಿರುತ್ತದೆ.

ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು

  • ಆಧಾರ್ ಹಾಗೂ ಪಾನ್ ಕಾರ್ಡ್ಗಳನ್ನು ಹೊಂದಿರಬೇಕು ಹಾಗೂ ನೀವು ಭಾರತೀಯ ನಾಗರಿಕರಾಗಿರಬೇಕು.
  • ಆಧಾರ್ ಕಾರ್ಡ್ ತಿಳಿಸುವಂತಹ ರೀತಿಯಲ್ಲಿ ನಿಮ್ಮ ವಯಸ್ಸು ಕನಿಷ್ಠಪಕ್ಷ 18 ವರ್ಷ ಆಗಿರಬೇಕು. ಇದರ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಫೋನ್ ನಂಬರ್ ಗೆ ಲಿಂಕ್ ಆಗಿರ್ಬೇಕು.
  • ಹಣವನ್ನು ಮರುಪಾವತಿ ಮಾಡುವಂತಹ ಸಾಮರ್ಥ್ಯ ಇರುವಂತಹ ಆದಾಯದ ಮೂಲ ಇರಬೇಕು ಹಾಗೂ ಆಕ್ಟಿವ್ ಬ್ಯಾಂಕ್ ಖಾತೆಯನ್ನು ಕೂಡ ಹೊಂದಿರಬೇಕಾಗಿರುತ್ತದೆ. ಲೋನ್ ಗೆ ಅಪ್ಲೈ ಮಾಡುವಂತಹ ವಿಧಾನ
  • ನಿಮ್ಮ ಬ್ಯಾಂಕಿನ ಅಧಿಕೃತ ವೆಬ್ಸೈಟ್ ಅಥವಾ ಮುದ್ರಾ ಲೋನ್ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿರುವಂತಹ ಆನ್ಲೈನ್ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ. ಅಲ್ಲಿ ನಿಮ್ಮ ಹೆಸರು, ನೀವು ಮಾಡುವಂತಹ ವ್ಯಾಪಾರದ ಕ್ಯಾಟಗರಿ, ಬೇಕಾಗಿರುವಂತಹ ಲೋನ್, ಅಡ್ರೆಸ್, ಮೊಬೈಲ್ ಹಾಗೂ ನಿಮ್ಮ ಬ್ಯಾಂಕಿನ ಬ್ರಾಂಚಿನ ಡೀಟೇಲ್ಸ್ ಅನ್ನು ನೀಡಬೇಕಾಗಿರುತ್ತದೆ.
  • ಎಲ್ಲ ಪ್ರಕ್ರಿಯೆಗಳನ್ನು ಸರಿಯಾದ ರೀತಿಯಲ್ಲಿ ಪೂರೈಸಿದ ನಂತರ ಲೋನ್ ಗೆ ಅಪ್ಲೈ ಮಾಡಬೇಕಾಗಿರುತ್ತದೆ.
  • ನಿಮ್ಮ ಅಪ್ಲಿಕೇಶನ್ ಗೆ ಬ್ಯಾಂಕಿನಿಂದ ಬರುವಂತಹ ಪ್ರತಿಕ್ರಿಯೆಗೆ ಕಾದು ನಂತರ ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳ ಜೊತೆಗೆ ನೀವು ನಿಮ್ಮ ಹತ್ತಿರದ ಬ್ಯಾಂಕಿನ ಬ್ರಾಂಚ್ ಗೆ ಹೋಗಬೇಕು.
  • ನಿಮ್ಮ ಡಾಕ್ಯುಮೆಂಟ್ ಹಾಗೂ ಅರ್ಜಿ ಪತ್ರಿಕೆಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ಬ್ಯಾಂಕ್ ನೀವು ಹೇಳಿರುವಂತಹ ಹಣವನ್ನ ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತದೆ.
LOan