LPG Gas: ಗ್ಯಾಸ್ ಸಿಲಿಂಡರ್ ಹೊಂದಿರುವವರಿಗೆ ಸರ್ಕಾರದಿಂದ ಜಾರಿಗೆ ಬಂತು ನೋಡಿ ಕಡ್ಡಾಯ ನಿಯಮ! ರೂಲ್ಸ್ ಫಾಲೊ ಮಾಡದಿದ್ರೆ ಸಬ್ಸಿಡಿನೂ ಇಲ್ಲ!

LPG Gas: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಹೊಂದಿರುವಂತಹ ಪ್ರತಿಯೊಂದು ಕುಟುಂಬಗಳು ಕೂಡ ಈ ಪ್ರಕ್ರಿಯೆಯನ್ನು ಮಾಡಲೇ ಬೇಕಾಗಿದೆ ಎನ್ನುವಂತಹ ಕಡ್ಡಾಯ ನಿಯಮ ಈಗ ಹೊರ ಬಂದಿದೆ. ಒಂದು ವೇಳೆ ನೀವು ಕೂಡ ಈ ವರ್ಗಕ್ಕೆ ಸೇರುವುದಾದರೆ ಇದರ ಬಗ್ಗೆ ಬನ್ನಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹೊಂದಿರುವ ಕುಟುಂಬಗಳಿಗೆ ಜಾರಿಗೆ ಬಂತು ಕಡ್ಡಾಯ ನಿಯಮ!

ಸರ್ಕಾರ ಗ್ಯಾಸ್ ಏಜೆನ್ಸಿ ಗಳಿಗೆ ಇ- ಕೆವೈಸಿ ಮಾಡಿಸುವುದು ಕಡ್ಡಾಯ ಎಂಬುದಾಗಿ ಹೇಳಿದ್ದು ಈ ಸಂಸ್ಥೆಗಳಿಗೆ ಸಂಬಂಧಪಟ್ಟಂತಹ ಗ್ಯಾಸ್ ಕನೆಕ್ಷನ್ ಹೊಂದಿರುವಂತಹ ಕುಟುಂಬಗಳು ಕೂಡ ಈ ಪ್ರಕ್ರಿಯೆಗೆ ಒಳಗಾಗುವುದು ಅತ್ಯಂತ ಕಡ್ಡಾಯವಾಗಿದೆ. ಒಂದು ವೇಳೆ ಹೊಸ ನಿಯಮದ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ಮಾಡದೆ ಹೋದಲ್ಲಿ ಅಂತವರಿಗೆ ಯಾವುದೇ ರೀತಿಯ ಸಬ್ಸಿಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಕೆವೈಸಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸುವುದು ಅತ್ಯಂತ ಪ್ರಮುಖವಾಗಿದೆ.

ಈಗಾಗಲೇ ತಿಳಿದು ಬಂದಿರುವ ಮಾಹಿತಿ ಪ್ರಕಾರ ನಕಲಿ ಡಾಕ್ಯುಮೆಂಟ್ ಗಳನ್ನು ನೀಡುವ ಮೂಲಕ ಗ್ಯಾಸ್ ಕನೆಕ್ಷನ್ ಅನ್ನು ಮಾಡಿಸಿಕೊಳ್ಳುತ್ತಿರುವವರು ಕೂಡ ಪತ್ತೆಯಾಗಿದ್ದಾರೆ. ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಅನ್ನು ಉಪಯೋಗಿಸುತ್ತಾ ಇದ್ದರೆ ಅದನ್ನು ಕೂಡ ರದ್ದುಗೊಳಿಸುವಂತಹ ಕೆಲಸವನ್ನು ಸರ್ಕಾರ ಮಾಡುವುದಕ್ಕೆ ಹೊರಟಿದೆ. ಇನ್ಮೇಲೆ ಆನ್ಲೈನ್ ಬುಕಿಂಗ್ ಇರೋದಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ನಿಯಮಗಳ ಪ್ರಕಾರ ಎಲ್ಲಾ ಅಕ್ರಮವಾಗಿ ಕನೆಕ್ಷನ್ ಹೊಂದಿರುವಂತಹ ಸಿಲಿಂಡರ್ ಗಳನ್ನು ಪತ್ತೆಹಚ್ಚಿ ಅವುಗಳನ್ನು ಕಬ್ಜಾ ಮಾಡಿಕೊಳ್ಳುವುದಾಗಿದೆ. ಒಂದು ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಸಿಲಿಂಡರ್ ಇಟ್ಕೊಂಡ್ರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮವನ್ನು ಕೈ ತೆಗೆದುಕೊಳ್ಳುವಂತಹ ಸಾಧ್ಯತೆ ಕೂಡ ಇದೆ ಎಂಬುದನ್ನು ತಿಳಿದುಕೊಳ್ಳಿ.

ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುವವರಿಗೆ ಗ್ಯಾಸ್ ಕನೆಕ್ಷನ್ ನಲ್ಲಿ ಸಬ್ಸಿಡಿ ರೂಪದಲ್ಲಿ 372 ರೂಪಾಯಿಗಳ ಸಬ್ಸಿಡಿ ಹಾಗೂ ಬೇರೆಯವರಿಗೆ 47 ರೂಪಾಯಿಗಳ ಸಬ್ಸಿಡಿ ದೊರಕುತ್ತಿದೆ. ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಹೊಂದಿರುವಂತಹ ಪ್ರತಿಯೊಬ್ಬರು ಕೂಡ ತಮ್ಮ ಏಜೆನ್ಸಿಯ ಬಳಿ ಹೋಗಿ ಕೆವೈಸಿ ವಿಚಾರದ ಬಗ್ಗೆ ವಿಚಾರಿಸಬೇಕಾಗುತ್ತದೆ. ಇದಕ್ಕಾಗಿ ತಮ್ಮ ಕಸ್ಟಮರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್ ಸೇರಿದಂತೆ ವೋಟರ್ ಐಡಿ ಹಾಗೂ ಸರ್ಕಾರಿ ಸರ್ಟಿಫಿಕೇಟ್ ಗಳಂತಹ ಡಾಕ್ಯುಮೆಂಟ್ ಗಳನ್ನು ನೀಡಬೇಕಾಗಿರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನೀವು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಬಹುದಾಗಿದೆ.

ಈ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ಪೆಟ್ರೋಲಿಯಂ ಇಲಾಖೆ ಮೇ 31ರ ಕೊನೆಯ ದಿನಾಂಕದ ಗಡುವನ್ನು ಈಗಾಗಲೇ ನೀಡಿದೆ. ಹೀಗಾಗಿ ಯಾರೆಲ್ಲಾ ಹೆಸರಿನಲ್ಲಿ ಗ್ಯಾಸ್ ಕನೆಕ್ಷನ್ ಇದೆಯೋ ಅವರೆಲ್ಲರೂ ಕೂಡ ಕೆವೈಸಿ ಮಾಡಿಸಿಕೊಳ್ಳುವುದಕ್ಕಿಂತ ಕಡ್ಡಾಯವಾಗಿದ್ದು ಇಲ್ಲವಾದಲ್ಲಿ ಅವರಿಗೆ ಸಿಗಬೇಕಾಗಿರುವಂತಹ ಸಬ್ಸಿಡಿ ಸಿಗೋದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

LPG Gas