LPG Gas: ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಜನಸಾಮಾನ್ಯರಿಗೆ ಗುಡ್ ನ್ಯೂಸ್!

LPG Gas: ಈಗಾಗಲೇ ಕೊನೆಯ ಹಂತದ ಮತದಾನ ನಮ್ಮ ಭಾರತ ದೇಶದಲ್ಲಿ ಮುಗಿದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬರುವುದಕ್ಕೆ ದಿನಗಣನೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅನಿಲ ಕಂಪನಿಯು 19 ಕೆಜಿ ಗ್ಯಾಸ್ ಸಿಲಿಂಡರ್ ಮೇಲಿನ ಬೆಲೆಯನ್ನು ಕಡಿತಗೊಳಿಸಿದೆ. ಇನ್ನು ಈ ಕಡಿತಗೊಳಿಸಿರುವಂತಹ ಪರಿಷ್ಕರಿಸಿದ ದರ ಜೂನ್ ಮೊದಲನೇ ದಿನಾಂಕದಿಂದಲೇ ಜಾರಿಯಾಗುವ ರೀತಿಯಲ್ಲಿ ಘೋಷಣೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಜೂನ್ ತಿಂಗಳಿನಿಂದ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಇಳಿಕೆ

19 ಕೆಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 69.50 ಗಳ ಬೆಲೆ ಇಳಿಕೆ ಕಂಡು ಬಂದಿದೆ. ಡೊಮೆಸ್ಟಿಕ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆಯಲ್ಲಿ ಯಾವುದೇ ರೀತಿಯ ಬೆಲೆಯಲ್ಲಿ ಬದಲಾವಣೆ ಕಂಡುಬಂದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇಂಟರ್ನ್ಯಾಷನಲ್ ಮಾರುಕಟ್ಟೆಯಲ್ಲಿ ಕಮರ್ಷಿಯಲ್ ಗ್ಯಾಸ್ ನ ಬೆಲೆಯನ್ನು ಆಧರಿಸಿ ಇಲ್ಲಿ ಗ್ಯಾಸ್ ಬೆಲೆಯನ್ನು ಬದಲಾವಣೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಬೆಂಗಳೂರಿನಲ್ಲಿ 19 ಕೆಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಈಗ ಕಡಿಮೆಯಾಗಿ 1755 ರೂಪಾಯಿ ಗಳಿಗೆ ಬಂದಿದೆ. ದೆಹಲಿಯಲ್ಲಿ ಇದೆ ಗ್ಯಾಸಿನ ಬೆಲೆ 1676 ಮುಂಬೈನಲ್ಲಿ ಈ ಗ್ಯಾಸಿನ ಬೆಲೆ 1629 ರೂಪಾಯಿ ಆಗಿದೆ. ಕಲ್ಕತ್ತದಲ್ಲಿ 1789.50 ಹಾಗೂ ಚೆನ್ನೈನಲ್ಲಿ 1841.50 ರೂಪಾಯಿ ಆಗಿದೆ.

ಕಳೆದ ತಿಂಗಳು ನೀವು 19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ 19 ರೂಪಾಯಿಗಳ ಇಳಿಕೆ ಆಗಿರುವುದನ್ನ ಹಾಗೂ ಏಪ್ರಿಲ್ ತಿಂಗಳಲ್ಲಿ 30 ರಿಂದ 50 ರೂಪಾಯಿಗಳ ಇಳಿಕೆ ಆಗಿರುವುದನ್ನು ಕಾಣಬಹುದಾಗಿತ್ತು. ಒಟ್ಟಾರೆ ಮೂರು ತಿಂಗಳಲ್ಲಿ 119 ರೂಪಾಯಿಗಳ ಬೆಲೆ ಇಳಿಕೆ ಆಗಿರುವುದನ್ನು ನೀವು ಇಲ್ಲಿ ಕಾಣಬಹುದಾಗಿದೆ. ಇನ್ನು ಈ ಸಂದರ್ಭದಲ್ಲಿ ಏಪ್ರಿಲ್ ತಿಂಗಳಲ್ಲಿ 5 ಕೆಜಿ ತೂಕದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆನ 7.50 ಗಳ ಬೆಲೆ ಇಳಿಕೆಯನ್ನು ಮಾಡಿರುವುದನ್ನು ಕೂಡ ಕಾಣಬಹುದಾಗಿದೆ. ಅದಾದ ನಂತರ ಗ್ಯಾಸ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಳಿಕೆ ಕಂಡುಬಂದಿರಲಿಲ್ಲ ಆದರೆ ಈಗ ಮತ್ತೆ ಗ್ಯಾಸ್ ದರದಲ್ಲಿ ಇಳಿಕೆ ಕಂಡು ಬರುತ್ತಿರುವುದು ಬಳಕಿದಾರರಿಗೆ ಗುಡ್ ನ್ಯೂಸ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ.

ಎಲೆಕ್ಷನ್ ರಿಸಲ್ಟ್ ಬರೋದಿಕ್ಕಿಂತ ಮುಂಚೇನೆ ಈ ರೀತಿಯಲ್ಲಿ ಗ್ಯಾಸ್ ಬೆಲೆ ಗಣನೀಯವಾಗಿ ಕಡಿಮೆ ಆಗ್ತಿರೋದು ನೋಡ್ತಾ ಇದ್ರೆ ಮುಂದಿನ ದಿನಗಳಲ್ಲಿ ಎಲೆಕ್ಷನ್ ರಿಸಲ್ಟ್ ಬಂದ ಮೇಲೆ ಯಾವ ರೀತಿಯಲ್ಲಿ ಇನ್ನಷ್ಟು ಹೆಚ್ಚಿನ ಬೆಲೆ ಇಳಿಕೆಯನ್ನು ನಾವು ಗ್ಯಾಸ್ ಸಿಲಿಂಡರ್ ಮೇಲೆ ಕಾಣಬಹುದು ಎಂಬುದಾಗಿ ಅಂದಾಜು ಮಾಡಬಹುದಾಗಿದೆ. ಖಂಡಿತವಾಗಿ ಕಮರ್ಷಿಯಲ್ ಗ್ಯಾಸ್ ಬಳಕೆದಾರರಿಗೆ ಗ್ಯಾಸ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿರುವುದು ಇನ್ನಷ್ಟು ಲಾಭವನ್ನು ನೀಡ್ತಾ ಇದೆ ಎಂದು ಹೇಳಬಹುದಾಗಿದೆ.

LPG Gas