ಹೇಳಿಕೊಳ್ಳುವುದಕ್ಕೆ ದೊಡ್ಡ ನಾಯಕ: ದಿನೇ ದಿನೇ ಸ್ವಲ್ಪ ಪೆಟ್ರೋಲ್ ಕೂಡಿಟ್ಟು, ಏನು ಮಾಡಿದ್ದಾನೆ ಗೊತ್ತೇ? ಶಾಕ್ ಆಗಿ ಶೇಕ್ ಆದ ದೇಶ.

ಅನುಮಾನ, ಅಸಮಾಧಾನ ಕಲಹ ಇಂಥಹ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಮುಗಿಸಿಬಿಡುವ ಹಂತಕ್ಕೆ ಜನರು ಇಳಿಯುತ್ತಿದ್ದಾರೆ. ಇಂಥಹ ಒಂದು ಘಟನೆ ರತ್ನಗಿರಿಯಲ್ಲಿ ನಡೆದಿದೆ. ಅಲ್ಲಿನ ಶಿವಸೇನೆಯ ಕಾರ್ಯಾಧ್ಯಕ್ಷ ಸುಖಾಂತ್ ಸಾವಂತ್ ಅಲಿಯಾಸ್ ಭಾಯ್ ಸಾವಂತ್ ತನ್ನ ಪತ್ನಿಯನ್ನೇ ಮುಗಿಸಿ, ಇದರಿಂದ ತಪ್ಪಿಸಿಕೊಳ್ಳಲು ಆಕೆಯ ಭಸ್ಮವನ್ನು ಸಮುದ್ರಕ್ಕೆ ಎಸೆದಿದ್ದು, ಕೊನೆಗೆ ಈ ವಿಚಾರ ಪೊಲೀಸರನ್ನು ತಪುಪಿದೆ. ರಾಜಕೀಯದಲ್ಲಿ ಈ ಪ್ರಕರಣ ಹೊಸ ಸಂಚಲನ ಸೃಷ್ಟಿಸಿದೆ. ಇವರ ಹೆಂಡತಿ ರತ್ನಗಿರಿ ಪಂಚಾಯತ್ ಸಮಿತಿಯ ಮಾಜಿ ಅಧ್ಯಕ್ಷೆ ಆಗಿದ್ದರು, ಆಕೆಯ ಹೆಸರು ಸ್ವಪ್ನಾಲಿ ಸಾವಂತ್.

ಸುಖಾಂತ್ ಅವರ ಜೊತೆಗೆ, ಸಹಾಯ ಮಾಡಿದ್ದ ಛೋಟಾ ಸಾವಂತ್ ಹಾಗೂ ಪ್ರಮೋದ್ ಎನ್ನುವ ಇಬ್ಬರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಆಕೆಯನ್ನು ಮುಗಿಸಿದ್ದು ಮಾತ್ರವಲ್ಲದೆ, ಸಾಕ್ಷಿಗಳನ್ನು ನಾಶ ಮಾಡುವ ಪ್ರಯತ್ನ ಕೂಡ ನಡೆದಿದೆ. ಇದು ಮೊದಲೇ ಪ್ಲಾನ್ ಮಾಡಿ ಮಾಡಿರುವ ಕೆಲಸ ಆಗಿದೆ, ದಾಂಪತ್ಯ ಜೀವನದಲ್ಲಿ ಸಮಸ್ಯೆ ಇದ್ದ ಕಾರಣಕ್ಕೆ ಇಂಥ ಕೆಲಸ ಮಾಡಲಾಗಿದೆ. ಹೆಂಡತಿಯನ್ನು ಮುಗಿಸಲು ಪ್ರತಿದಿನ ಸ್ವಲ್ಪ ಸ್ವಲ್ಪ ಪೆಟ್ರೋಲ್ ಖರೀದಿ ಮಾಡುತ್ತಿದ್ದರಂತೆ, ಮೂವರು ಸೇರಿ ಸ್ವಪ್ನಾಲಿಗೆ ಬೆಂಕಿ ಹಚ್ಚಿದ್ದಾರೆ.
ಈ ವಿಚಾರ ಹೊರಬರಬಾರದು ಎಂದು ಭಸ್ಮವನ್ನು ಸಮುದ್ರಕ್ಕೆ ಎಸೆದಿದ್ದಾರೆ..

ಅಷ್ಟೇ ಅಲ್ಲದೆ, ತಾನು ಅಮಾಯಕ ಎಂದು ನಿರೂಪಿಸಲು ಪತ್ನಿ ಕಾಣೆಯಾಗಿದ್ದಾಳೆ ಎಂದು ಕಂಪ್ಲೇಂಟ್ ಸಹ ಕೊಟ್ಟಿದ್ದಾರೆ. ನಂತರ ಸ್ವಪ್ನಾಲಿ ತಾಯಿ ಸಂಗೀತ ಶಿರ್ಕೆ ಅವರು ಮನೆಗೆ ಬಂದು ಈ ವಿಚಾರದ ಬಗ್ಗೆ ಜಗಳ ಆಡಿ ಕೇಳಿದಾಗ, ಅಸಲಿ ವಿಚಾರ ಬಾಯಿಬಿಟ್ಟಿದ್ದಾನೆ. ನಂತರ ಪೊಲೀಸರ ಸಿಕ್ಕಿಕೊಳ್ಳಬಾರದು ಎಂದು ತಲೆಮರೆಸಿಕೊಂಡಿದ್ದು, ಬಹಳಷ್ಟು ಶ್ರಮ ಪಟ್ಟು ಇವನನ್ನು ಹುಡುಕಿ ಅರೆಸ್ಟ್ ಮಾಡಿದ್ದಾರೆ ಪೊಲೀಸರು. ಈ ಪ್ರಕರಣ ಈಗ ಭಾರಿ ಚರ್ಚೆಗೆ ಒಳಗಾಗುತ್ತಿದೆ.