Mandeep Roy: ದಿಡೀರ್ ಎಂದು ಉಸಿರು ನಿಲ್ಲಿಸಿದ ಕನ್ನಡದ ಹಿರಿಯ ನಟ ಮನದೀಪ್ ರಾಯ್: ಏನಾಗಿತ್ತು ಗೊತ್ತೇ? ಎಲ್ಲವೂ ಚೆನ್ನಾಗಿದೆ ಅನ್ನುವಷ್ಟರಲ್ಲಿ ಏನಾಯ್ತು ಗೊತ್ತೇ??

Mandeep Roy: ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟ ಮನದೀಪ್ ರಾಯ್ ತಮ್ಮ ನಗುವನ್ನು ನಿಲ್ಲಿಸಿ ಈ ಜಗತ್ತಿನಿಂದ ಮರೆಯಾಗಿದ್ದಾರೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ನಮ್ಮನ್ನು ನಗಿಸಿದ ಹಾಸ್ಯ ನಟ ಮನದೀಪ್ ರಾಯ್ ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಇವರಿಗೆ 74 ವರ್ಷ ವಯಸ್ಸಾಗಿತ್ತು.

ಇತ್ತೀಚಿಗೆ ಅವರಿಗೆ ಹಾಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮನದೀಪ್ ರಾಯ್ ಬೆಂಗಳೂರಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚೇತರಿಕೆ ಕಂಡ ಬಳಿಕ ಮನೆಗೆ ಕೂಡ ವಾಪಸ್ ಅವರನ್ನು ಕರೆದುಕೊಂಡು ಬರಲಾಗಿತ್ತು. ಇದೀಗ ಭಾನುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಅದ್ಭುತ ಪ್ರತಿಭೆ;

ಒಬ್ಬ ಹಾಸ್ಯ ಕಲಾವಿದನಾಗಿ ಮನದೀಪ್ ರಾಯ್ ನಮ್ಮನ್ನ ರಂಜಿಸಿದ್ದಕ್ಕೆ ಲೆಕ್ಕವೇ ಇಲ್ಲ. ಇವರು 1949ರಲ್ಲಿ ಜನಿಸಿದರು.  ಅನಂತ್ ನಾಗ್ ಹಾಗೂ ಶಂಕರ್ ನಾಗ್ ಅವರ ಜೊತೆಗೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಟ ಇವರು ಇನ್ನು ಅವರ ಅಭಿನಯದ ಬೆಳದಿಂಗಳ ಬಾಲೆ, ಪುಷ್ಪಕ ವಿಮಾನ, ಮಿಂಚಿನ ಓಟ, ಬೆಂಕಿಯ ಬಲೆ, ಆಪ್ತರಕ್ಷಕ, ಆಕಸ್ಮಿಕ, ಆಸೆಗೊಬ್ಬ ಮೀಸೆಗೊಬ್ಬ, ಆಂಟಿ ಪ್ರೀತ್ಸೆ, ಏಳು ಸುತ್ತಿನ ಕೋಟೆ, ಪ್ರೀತ್ಸೋದ್ ತಪ್ಪಾ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ ಅದ್ಭುತ ಪ್ರತಿಭೆ ಮನದೀಪ್ ರಾಯ್.

ಡಾಕ್ಟರ್ ರಾಜಕುಮಾರ್ ಅವರಿಂದ ಹಿಡಿದು ಇತ್ತೀಚಿಗಿನ ಕಲಾವಿದರ ಜೊತೆಯು ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ರಂಗಭೂಮಿಯ ಕಲಾವಿದರಾಗಿದ್ದ ಮನದೀಪ್ ರಾಯ್ ಸಾಕಷ್ಟು ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ್ದಾರೆ. ಆದರೆ ಈ ಹಾಸ್ಯ ಕಲಾವಿದ ತನ್ನ ನಟನ ವೃತ್ತಿಗೂ, ಈ ಇಹಲೋಕದ ಬದುಕಿಗೂ ಗುಡ್ ಬೈ ಹೇಳಿ ಹೊರಟುಬಿಟ್ಟಿದ್ದಾರೆ. ಚಿತ್ರರಂಗ ಹಾಗೂ ಅಭಿಮಾನಿಗಳು ಮನದೀಪ್ ರಾಯ್ ಅವರ ನಿಧನಕ್ಕೆ ಅತೀವ ಸಂತಾಪ ಸೂಚಿಸಿದ್ದಾರೆ.

comedy actorKannada Filmmandeep royಮನದೀಪ್ ರಾಯ್