Maruti Suzuki Swift: 4೦ ಕಿಮೀ ಮೈಲೇಜ್, ಕೈಗೆಟುಕುವ ದರ; ಬಡವರ ಪಾಲಿನ ಐಷಾರಾಮಿ ಕಾರು ಮಾರುಕಟ್ಟೆಗೆ; ಇಂದೇ ಬುಕ್ಕಿಂಗ್ ಮಾಡಿ!

Maruti Suzuki Swift: ಇಂದಿನ ದಿನದಲ್ಲಿ ಪ್ರತಿಯೊಬ್ಬರ ಬಳಿಯೂ ಕಾರು ಇದ್ದೇ ಇರುತ್ತದೆ. ಸಾಲ ಮಾಡಿಯಾದರೂ ಕಾರನ್ನು ಕೊಂಡುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಇಂದಿನ ಯುವಕರಿಗೆ ಕಾರಿನ ಕ್ರೇಜ್ ಸಿಕ್ಕಾಪಟ್ಟೆ ಇದೆ. ಹಾಗಾಗಿ ಪ್ರತಿಯೊಬ್ಬರೂ ಕಾರನ್ನು ಕೊಂಡುಕೊಳ್ಳುವುದು ಸಾಮಾನ್ಯ. ಇದೀಗ ಸುಜುಕಿ ಕಂಪನಿಯೂ 4೦ ಕಿಮೀ ಮೈಲೇಜ್ ನೀಡುವ ಕಾರನ್ನು ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಇದರಿಂದ ಕಾರು ಪ್ರಿಯರು ತುಂಬಾ ಸಂತಸಗೊಂಡಿದ್ದಾರೆ.

ಮಾರುತಿ ಸುಜುಕಿ ಕಾರು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಇದೀಗ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಸಂಚಲನ ಮೂಡಿಸಿದೆ. ಸುಜುಕಿ ಮೋಟಾರ್ ಕಾರ್ಪೋರೇಶನ್-2023 ರ ಜಪಾನ್ ಮೊಬೆಲಿಟಿ ಶೋನಲ್ಲಿ 2024ರ ಮಾರುತಿ ಸುಜುಕಿ ಸ್ವಿಫ್ಟ್ ಕಾನ್ಸೆಫ್ಟ್ ಜಾರಿಗೆ ತರಲಿದೆ ಎಂದು ಘೋಷಿಸಿದೆ. ಈ ಹೊಸ ಸಿಫ್ಟ್ ಕಾರಿನ ಫೋಟೊವನ್ನು ಬಹಿರಂಗಗೊಳಿಸಿದೆ. ಈ ಮೂಲಕ ಕಾರು ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.

ಈ ಕಾರು ಹೊಸ ವಿನ್ಯಾಸದಲ್ಲಿ ಮೂಡಿ ಬರಲಿದೆ.ನೂತನ ಎಲ್ಇಡಿ ಹೆಡ್ ಲ್ಯಾಂಪಗಳು ನೋಡಲು ಬಹಳ ಕುತೂಹಲಭರಿತವಾಗಿದೆ.ಹೊಸ ಫಾಗ್ ಲ್ಯಾಂಪ್ ಹೌಸಿಂಗ್ ಕೂಡ ಅಳವಡಿಕೆ ಮಾಡಲಾಗಿದೆ. ಇನ್ನು ಹೊಸದಾದ ಅಲೈವ್ ವ್ಹೀಲ್ಗಳನ್ನು ಸಹ ಅಳವಡಿಸಲಾಗಿದೆ. ಮಲ್ಟಿ ಫಂಕ್ಷನ್ ಸ್ಟೇರಿಂಗ್, ಹೆಡ್ಸ ಆಫ್ ಡಿಸ್ ಪ್ಲೇಗಳನ್ನು ಈ ನೂತನ ಕಾರು ಒಳಗೊಂಡಿದೆ.

ಮಾರುತಿ ಸುಜುಕಿ ನ್ಯೂ ಕಾನ್ಸೆಫ್ಟ್ ಕಾರು ಬಹಳ ವಿಭಿನ್ನವಾಗಿ ಮೂಡಿಬರಲಿದ್ದು, ಇಂದಿನ ಯುವಜನಾಂಗವನ್ನು ಆಕರ್ಷಿಸಲಿದೆ. ಈ ಕಾರು ಪೆಟ್ರೋಲ್ ಇಂಜಿನ್ ಹೊಂದಿದ್ದು, 4೦ ಕಿಮೀ ಮೈಲೇಜ್ ನೀಡಲಿದೆ.

ಈ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಲ್ಲಿ ಇನ್ನುಳಿದ ಕಂಪನಿಗಳಿಗೆ ಪೈಪೋಟಿ ನೀಡುವುದು ಪಕ್ಕಾ ಎನ್ನಲಾಗಿದೆ. ಅದಕ್ಕೆ ಈ ಕಾರಿನ ವಿನ್ಯಾಸ ಕಾರಣವಾಗಿದೆ. ಅಲ್ಲದೆ ಮೈಲೇಜ್ ಕೂಡ ಜಾಸ್ತಿ ನೀಡುತ್ತದೆ. ಇದರಿಂದ ಹೆಚ್ಚಿನ ಜನರು ಈ ಕಾರನ್ನು ಖರೀದಿ ಮಾಡಲಿದ್ದಾರೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Best News in Kannadaindian motorsKannada Trending NewsMaruti Suzuki Swiftmotor company