Money: ನಿಮ್ಮ ಮನೆಯಲ್ಲಿ ಈ ವಸ್ತುಗಳು ಇದ್ದರೆ ಖಂಡಿತವಾಗಿ ಹಣದ ಸಮಸ್ಯೆ ಬರೋದಿಲ್ಲ!

Money: ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ವಾಸ್ತು ಶಾಸ್ತ್ರವನ್ನು ಹೆಚ್ಚಾಗಿ ನಂಬಲಾಗುತ್ತದೆ. ಪ್ರತಿಯೊಬ್ಬರು ಕೂಡ ತಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಲಿ ಹಣ ಹೆಚ್ಚಾಗಲಿ ಎಂಬುದಾಗಿ ಬಯಸುತ್ತಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇದೇ ರೀತಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದಾಗಿ ಹಣ ಹೆಚ್ಚುತ್ತದೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಅವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ.

ಈ ವಸ್ತುಗಳನ್ನು ಮನೆಯಲ್ಲಿ ಇಟ್ಕೊಂಡ್ರೆ ಹೆಚ್ಚುತ್ತೆ ಹಣ!

ತೆಂಗಿನಕಾಯಿ: ತೆಂಗಿನಕಾಯಿಯಲ್ಲಿ ಒಂದು ಕಣ್ಣು ಇರುವಂತಹ ತೆಂಗಿನಕಾಯಿಯನ್ನು ನೀವು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಆಗುತ್ತೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಪಾಸಿಟಿವ್ ಎನರ್ಜಿ ಮನೆಯಲ್ಲಿ ಓಡಾಡುತ್ತದೆ ಹಾಗೂ ಲಕ್ಷ್ಮೀದೇವಿ ಕೂಡ ಖುಷಿಯಿಂದ ಇರುತ್ತಾಳೆ ಎಂಬುದಾಗಿ ಹೇಳಲಾಗುತ್ತದೆ. ಈ ರೀತಿಯ ತೆಂಗಿನಕಾಯಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಹಣದ ಚಿಂತೆ ಯಾವತ್ತೂ ಕೂಡ ನಿಮಗೆ ಬಾಧಿಸುವುದಿಲ್ಲ.

ಪಿರಮಿಡ್: ಪಿರಮಿಡ್ ಅನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದಾಗಿ ಮನೆಯಲ್ಲಿರುವಂತಹ ಎಲ್ಲಾ ಸಮಸ್ಯೆಗಳು ದೂರವಾಗಿ ಹಣ ಹೆಚ್ಚಾಗುತ್ತದೆ ಎಂಬುದಾಗಿ ತಿಳಿಸಲಾಗುತ್ತದೆ.

ಆಮೆ: ಆಮೆಯಿಂದ ಮಾತ್ರಕ್ಕೆ ನಿಜವಾದ ಜೀವಂತವಾಗಿರುವಂತಹ ಆಮೆ ಎಂದು ಭಾವಿಸಬೇಕಾದ ಅಗತ್ಯವಿಲ್ಲ ಚಿನ್ನ ಬೆಳ್ಳಿ ಅಥವಾ ತಾಮ್ರದಿಂದ ತಯಾರಿಸಿರುವಂತಹ ಆಮೆಯನ್ನು ನೀವು ಉತ್ತರ ದಿಕ್ಕಿಗೆ ಸರಿಹೊಂದುವಂತೆ ಇಟ್ಟರೆ ಖಂಡಿತವಾಗಿ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಇರುವಂತಹ ಪ್ರತಿಯೊಂದು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಕುಬೇರನ ಕೃಪಾಕಟಾಕ್ಷ ಕೂಡ ನಿಮ್ಮ ಮೇಲೆ ಇರಲಿದೆ.

ಪಂಚಮುಖಿ ಆಂಜನೇಯನ ವಿಗ್ರಹ ಅಥವಾ ಫೋಟೋ: ಮನೆಯ ನೈರುತ್ಯ ದಿಕ್ಕಿನಲ್ಲಿ ಪಂಚಮುಖಿ ಆಂಜನೇಯನ ವಿಗ್ರಹ ಅಥವಾ ಫೋಟೋವನ್ನು ಇಡುವ ಮೂಲಕ ನೀವು ಮನೆಯ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳ್ಳಬಹುದಾಗಿದೆ. ಮನೆಯಲ್ಲಿ ಸಮೃದ್ಧಿ ಎದ್ದು ಕಾಣುತ್ತದೆ ಹಾಗೂ ಇರುವಂತಹ ಬಡತನ ದೂರ ಹೋಗುತ್ತದೆ.

ಕವಡೆ: ಲಕ್ಷ್ಮಿ ದೇವಿಗೆ ಪ್ರಿಯವಾಗಿರುವಂತ ವಸ್ತುಗಳಲ್ಲಿ ಕವಡೆ ಕೂಡ ಒಂದಾಗಿದೆ. ಅದರಲ್ಲಿ ವಿಶೇಷವಾಗಿ ಅರಿಶಿನ ಕವಡೆಯನ್ನು ಲಕ್ಷ್ಮೀದೇವಿಯ ಪಾದಕಮಲಗಳಲ್ಲಿ ಇಟ್ಟು ಪೂಜಿಸಿದ ನಂತರ ಅವುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನಂತರ ಹಣ ಇಡುವಂತಹ ಸ್ಥಳದಲ್ಲಿ ಇಟ್ಟರೆ ಲಕ್ಷ್ಮೀದೇವಿ ಒಲಿಯುತ್ತಾಳೆ ಹಾಗೂ ಮನೆಯಲ್ಲಿ ಹಣದ ಹರಿವು ಹೆಚ್ಚಾಗಲಿದೆ.

ಈ ಮೇಲೆ ಹೇಳಿರುವಂತಹ ಕೆಲಸಗಳನ್ನು ಹಾಗೂ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಮಾಡುವುದರ ಮೂಲಕ ಹಣದ ಸಮಸ್ಯೆಯಿಂದ ಹೊರ ಬರಬಹುದಾಗಿದ್ದು ಲಕ್ಷ್ಮಿ ದೇವಿಯ ಆಶೀರ್ವಾದದಿಂದಾಗಿ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗಲಿದೆ. ನೀವು ಕೂಡ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಸಲಹೆ ನೀಡಲಾಗಿರುವಂತಹ ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರ ಮೂಲಕ ಆರ್ಥಿಕ ಸಮಸ್ಯೆಯಿಂದ ಹೊರ ಬರಬಹುದಾಗಿದೆ.

earn money