Kannada Recipe: ಸಾಮಾನ್ಯ ದೋಸೆ ತಿಂದು ಬೋರ್ ಆಗಿದ್ಯಾ? ಮನೆ ಮಂದಿ ಎಲ್ಲಾ ಮತ್ತೆ ಬೇಕು ಬೇಕು ಎನ್ನುವ ಆರೋಗ್ಯಕರ ದೋಸೆ ಮಾಡುವುದು ಹೇಗೆ ಗೊತ್ತೇ?

Kannada Recipe: ದಿನವೂ ಬ್ರೇಕ್ ಫಾಸ್ಟ್ ಅಂತೂ ರೆಡಿ ಮಾಡಲೇ ಬೇಕು. ಹಾಗಂತ ದಿನಾ ಒಂದೇ ರೀತಿಯ ತಿಂಡಿ ತಿನ್ನೋಕೆ ಬೋರ್ ಅಲ್ವಾ? ಹಾಗಾದ್ರೆ ಸುಲಭವಾಗಿ ಆಗುವಂತಹ ಹಾಗೂ ಆರೋಗ್ಯರವಾಗಿ ಮಾಡಬಹುದಾದ ಸುಲಭ ರೆಸಿಪಿಯೊಂದಿಗೆ ನಾವು ಬಂದಿದ್ದೇವೆ ಅದುವೇ ಕಡಲೇ ಕಾಳಿನ ದೋಸೆ. ಹಾಗಾದ್ರೆ ಇನ್ಯಾಕೆ ತಡ ಮಾಡೋದು ಹೇಗೆ ನೋಡೋಣ ಬನ್ನಿ.

ಕಡಲೆ ಕಾಳು ದೋಸೆಗೆ ಬೇಕಾಗುವ ಪದಾರ್ಥಗಳು:

2 ಕಪ್ ಅಕ್ಕಿ

ಕಪ್ ಬ್ಲಾಕ್ ಚನಾ (ಕಡಲೆ ಕಾಳು)

½ ಟೀಸ್ಪೂನ್ ಮೆಂತ್ಯ

ನೀರು

1 ಟೀ ಸ್ಪೂನ್ ಉಪ್ಪು

ಎಣ್ಣೆ  ಸ್ವಲ್ಪ

ಕಪ್ಪು ಕಡಲೆ ಕಾಳಿನ ದೋಸೆ ರೆಸಿಪಿ ಮಾಡುವ ವಿಧಾನ:

ಮೊದಲಿಗೆ ಒಂದು ದೊಡ್ಡ ಪಾತ್ರೆಗೆ 2 ಕಪ್ ಅಕ್ಕಿ, ಒಂದು ಕಪ್ ಕಪ್ಪು ಕಡಲೆ ಕಾಳು, ಮತ್ತು ½ ಟೀ ಸ್ಪೂನ್ ಮೆಂತ್ಯ ಹಾಕಿ. ಬಳಿಕ ಅವುಗಳನ್ನು ಚೆನ್ನಾಗಿ ತೊಳೆದು ಸುಮಾರು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿದ ಅಕ್ಕಿ ಹಾಗೂ ಉಳಿದ ವಸ್ತುಗಳನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ನೀರನ್ನು ಸೇರಿಸಿ ನುಣ್ನಗೆ ರುಬ್ಬಿಕೊಳ್ಳಿ. ಇದನ್ನೂ ಓದಿ:<strong>Health Tips:</strong> ರಾತ್ರಿ ಮಲಗುವಾಗ ಹಾಲಿಗೆ ಇದೊಂದು ವಸ್ತು ಸೇರಿಸಿಕೊಂಡು ಕುಡಿದರೆ ಏನಾಗುತ್ತೆ ಗೊತ್ತಾ? ಮಕ್ಕಳಿಂದ ಮುದುಕರವರೆಗೂ ಈ ಬೆನಿಫಿಟ್ ಪಡೆದುಕೊಳ್ಳಬಹುದು!

ಈಗ ದೋಸೆ ಹಿಟ್ಟು ರೆಡಿಯಾಗಿದೆ. ಇದನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಹುದುಗುವಿಕೆಗಾಗಿ ಕೈಯಿಂದ ಬೆರೆಸಿ ಸ್ವಲ್ಪ ಸೋಡಾ ಬೇಕಿದ್ದರೆ ಸೇರಿಸಬಹುದು. 8 ಗಂಟೆಗಳ ಕಾಲ ಮುಚ್ಚಿ ಹಾಗೆಯೇ ಬಿಡಿ. ಬೆಳಗ್ಗೆ ದೋಸೆ ಮಾಡಲು ಹಿಟ್ಟಿಗೆ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಇದನ್ನೂ ಓದಿ:Smart Phone Offer: ಕ್ರಿಸ್ ಮಸ್ ಗೆ ಹೊಸ ಫೋನ್ ಗಿಪ್ಟ್ ಕೊಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್ ಆಫರ್, 17,000ರೂ. ಗಳ ಮೊಬೈಲ್ ಕೊಳ್ಳಿ ಕೇವಲ 999ರೂ. ಗಳಿಗೆ!

ಈಗ ದೋಸೆ ತವಾವನ್ನು ಬಿಸಿ ಮಾಡಿ. ಹಿಟ್ಟನ್ನು ತವಾ ಮೇಲೆ ತೆಳುವಾಗಿ ಹರಡಿ. ಸ್ವಲ್ಪ ಎಣ್ಣೆ ಸವರಿ ಮುಚ್ಚಿ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ದೋಸೆಯನ್ನು ಬೇಯಿಸಿ ತೆಗೆದರೆ ರುಚಿಕರವಾದ ಕಡ್ಲೆ ದೋಸೆ ರೆಡಿ. ನಿಮ್ಮಿಷ್ಟದ ಚಟ್ನಿ ಜೊತೆ  ಸವಿಯಿರಿ.

Kannada Recipemorning breakfastಅಡುಗೆ ಮನೆರೆಸಿಪಿ