Nammamma Super star winner: ನನ್ನಮ್ಮ ಸೂಪರ್ ಸ್ಟಾರ್ ಪಟ್ಟ ಗೆದ್ದ  ಅವಳಿ ಸಹೋದರರು ಎಷ್ಟು ಸಿಕ್ತು ಗೊತ್ತೇ ಬಹುಮಾನದ ಹಣ; ಅಯ್ಯೋ ಇಷ್ಟೇನಾ?

Nammamma Super star winner: ಪ್ರಪಂಚವು ಅಭಿವೃದ್ಧಿ ಆಗುತ್ತಿದ್ದಂತೆ ಸಹಜವಾಗಿಯೇ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಜೋರಾಗಿರುತ್ತದೆ. ಆರೋಗ್ಯಕರ ಪೈಪೋಟಿ ದೇಶದ ಅಭಿವೃದ್ಧಿಗೆ ಒಳ್ಳೆಯದು. ಹೀಗಾಗಿ ಪ್ರತಿಕ್ಷೇತ್ರದಲ್ಲಿ ಪೈಪೋಟಿ ಸಾಮಾನ್ಯ. ಇದು ಟಿವಿ ವಾಹಿನಿಗಳು ಹೊರತಾಗಿಲ್ಲ. ಹೀಗಾಗಿಯೇ ಹೊಸ ಹೊಸ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ಆದರೆ ಎಲ್ಲ ಶೋಗಳನ್ನು ಜನರು ಮೆಚ್ಚಿಕೊಳ್ಳುವುದಿಲ್ಲ. ಆದರೆ ಕೆಲವೊಂದು ಶೋಗಳನ್ನು ಜನರು ಅಪ್ಪಿಕೊಳ್ಳುತ್ತಾರೆ. ಇಂತಹ ಕಾರ್ಯಕ್ರಮಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನನ್ನಮ್ಮ ಸೂಪರ್ ಸ್ಟಾರ್ ಕೂಡ ಒಂದು.

ನನ್ನಮ್ಮ ಸೂಪರ್ ಸ್ಟಾರ್ ತಾಯಿ-ಮಕ್ಕಳನ್ನು ಸಂಭ್ರಮಿಸುವ ಕಾರ್ಯಕ್ರಮ. ಇದರ ನಿರೂಪಕರಾಗಿ ನಿರಂಜನ್ ದೇಶಪಾಂಡೆ, ವಂಶಿಕಾ ಅಂಜನಿ ಕಶ್ಯಪ, ತೀರ್ಪುಗಾರರಾಗಿ ಸೃಜನ್ ಲೋಕೇಶ್, ತಾರಾ ಅನುರಾಧಾ, ಅನುಪ್ರಭಾಕರ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಈ ವಾರ ಮುಗಿದಿದ್ದು, ನನ್ನಮ್ಮ ಸೂಪರ್ ಸ್ಟಾರ್ ಪಟ್ಟವನ್ನು ಮಂಡ್ಯದ ಚೈತ್ರ ಹಾಗೂ ಅವರ ಅವಳಿ ಮಕ್ಕಳಾದ ಚಿರಂತ್-ಚಿನ್ಮಯ್ ಅಲಂಕರಿಸಿದ್ದಾರೆ.

ನನ್ನಮ್ಮ ಸೂಪರ್ ಸ್ಟಾರ್ ಸೀಸನ್-೨ನಲ್ಲಿ ಸ್ಪರ್ಧಿಗಳಾಗಿ ಮಂಡ್ಯದ ಚೈತ್ರಾ ಅವರು ತಮ್ಮ ಅವಳಿ ಮಕ್ಕಳಾದ ಚಿರಂತ್-ಚಿನ್ಮಯ್ ಅವರ ಜೊತೆ ಭಾಗವಹಿಸಿದ್ದರು. ಇವರು ಆರಂಭದಿಂದಲೂ ಮನರಂಜನೆಯ ಮಹಾಪೂರವನ್ನೇ ಹರಿಸಿದ್ದರು. ಹಾಗಾಗಿಯೇ ಇವರು  ತೀರ್ಪುಗಾರರ ಜೊತೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ 12 ಜನರು ಆಯ್ಕೆ ಆಗಿದ್ದರು. ಅದರಲ್ಲಿ ೬ ಜನರನ್ನು ಫೈನಲ್ಗೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಎಲ್ಲರನ್ನು ಹಿಂದಿಕ್ಕಿ ಚೈತ್ರಾ ಅವರು ಗೆಲುವು ಕಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗೆದ್ದ ಚೈತ್ರ ಅವರಿಗೆ 2 ಲಕ್ಷ ರೂ. ಬಹುಮಾನ ನೀಡಲಾಗಿದೆ. ಈ ವೇಳೆ ಹಳ್ಳಿಯಿಂದ ಬಂದ ನಾನು ಗೆಲ್ಲುತ್ತೇನೆ ಅಂದುಕೊಂಡಿರಲಿಲ್ಲ. ಆದರೆ ಈ ಗೆಲುವಿನಿಂದ ನನಗೆ ಬಹಳ ಸಂತೋಷವಾಗಿದೆ ಎಂದು ಭಾವುಕರಾದರು. ಕ್ರೇಜಿಸ್ಟಾರ್ ಡಾ. ವಿ. ರವಿಚಂದ್ರನ್ ಅವರು ಗ್ರ್ಯಾಂಡ್ ಫಿನಾಲೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರೇ ಗೆದ್ದವರಿಗೆ ಬಹುಮಾನ ವಿತರಣೆ ಮಾಡಿದರು.

ರಶ್ಮಿ ಮತ್ತು ಗೊಂಬೆ ರನ್ನರ್ ಅಪ್ ಆಗಿ ಆಯ್ಕೆಯಾದರು. ಈ ಜೋಡಿಗೆ 1 ಲಕ್ಷ ರೂ. ಬಹುಮಾನ ನೀಡಲಾಗಿದೆ. ಮೈಸೂರಿನ ಈ ಅಮ್ಮ-ಮಗಳ ಜೋಡಿಯು ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು.

Colours kannadaNammamma Super star winnerReality show