Numerology; ನಿಮ್ಮ ಹುಟ್ಟಿದ ದಿನಾಂಕವೇ ನಿಮ್ಮ ಸ್ವಭಾವ ಹಾಗೂ ಭವಿಷ್ಯ ಹೇಳುತ್ತದೆ; ನಿಮ್ಮ ಹುಟ್ಟಿದ ದಿನಾಂಕ ಯಾವುದು?

Numerology; ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹುಟ್ಟಿದ ಕ್ಷಣದಿಂದ ಗ್ರಹಗಳು ಮತ್ತು ನಕ್ಷತ್ರಗಳ ಪ್ರಭಾವ ಆತನ ಮೇಲೆ ಆರಂಭವಾಗುತ್ತದೆ. ಅದು ಜೀವನದ ಉದ್ದಕ್ಕೂ ಆತನ ಜೊತೆಗಿರುತ್ತದೆ ಇದರ ಆಧಾರದ ಮೇಲೆ ವ್ಯಕ್ತಿಯ ಗುಣ (Nature) ಸ್ವಭಾವ ಹಾಗೂ ಭವಿಷ್ಯ (Future)ವನ್ನು ಹೇಳಲಾಗುತ್ತದೆ. ಅದೇ ರೀತಿ ಸಂಖ್ಯಾಶಾಸ್ತ್ರವು (Numerology) ಕೂಡ ವ್ಯಕ್ತಿಯ ಸ್ವಭಾವ ಹಾಗೂ ಭವಿಷ್ಯವನ್ನು ಆತ ಹುಟ್ಟಿದ ದಿನಾಂಕವನ್ನು ನೋಡಿ ನಿರ್ಧಾರ ಮಾಡಲಾಗುತ್ತದೆ ಹಾಗಾದರೆ ನೀವು ಹುಟ್ಟಿದ ದಿನಾಂಕದ ಆಧಾರದ ಮೇಲೆ ನಿಮ್ಮ ಸ್ವಭಾವ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

Numerology; ನಿಮ್ಮ ಹುಟ್ಟಿದ ದಿನಾಂಕವೇ ನಿಮ್ಮ ಸ್ವಭಾವ ಹಾಗೂ ಭವಿಷ್ಯ ಹೇಳುತ್ತದೆ; ನಿಮ್ಮ ಹುಟ್ಟಿದ ದಿನಾಂಕ ಯಾವುದು? https://sihikahinews.com/amp/numerology-your-birth-date-can-tell-your-future-and-character/

1, 10, 19, 28; ಈ ದಿನಾಂಕ (Date)ದಲ್ಲಿ ಜನಿಸಿದವರಿಗೆ ಹೆಚ್ಚು ತಾಳ್ಮೆ ಇರುತ್ತದೆ. ಜಾಗರೂಕ, ಬುದ್ಧಿವಂತ ಸ್ವಭಾವ ಇವರದು. ಆದರೆ ಅಹಂಕಾರವನ್ನೂ  ಮೈಗೂಡಿಸಿಕೊಂಡಿರುತ್ತಾರೆ. ಇವರಿಗೆ ಕೋಪ ಬಂದರೆ ಯಾರು ಎದುರಿಗೆ ನಿಲ್ಲುವ ಹಾಗೆ ಇಲ್ಲ. ಆದರೆ ಅದೇ ಅವರಿಗೆ ಭಾರಿ ನಷ್ಟವನ್ನು ಕೂಡ ತಂದುಕೊಡುತ್ತದೆ.

2, 11, 20, 29; ಈ ಜನ್ಮ ಸಂಖ್ಯೆಯಲ್ಲಿ ಇರುವ ಪುರುಷ ಹಾಗೂ ಮಹಿಳೆಯರು ಕಲಾತ್ಮಕ ಸೂಕ್ಷ್ಮ ಹಾಗೂ ಸಹಾನುಭೂತಿ ಸ್ವಭಾವ ಹೊಂದಿರುವಂತಹವರು ಇವರ ಅತಿಯಾದ ಸಹಾನಭೂತಿ ಕೆಲವೊಮ್ಮೆ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನ ತರಬಹುದು ಆದರೆ ಯಾವುದೇ ವಿಷಯದ ಬಗ್ಗೆಯೂ ಇವರು ಹೆಚ್ಚು ಕಾಳಜಿ ಮಾಡುವುದಿಲ್ಲ. ಬಂದಿದ್ದನ್ನ ಎದುರಿಸುತ್ತಾರೆ. ಇದನ್ನೂ ಓದಿ: Business Idea: ಎಷ್ಟು ಕಡಿಮೆ ಹೂಡಿಕೆ ಮಾಡಿದ್ರೂ ಸರಿ; ಈ ಉದ್ಯೋಗ ಪ್ರಾರಂಭಿಸಿದರೆ ತಿಂಗಳಿಗೆ ಕನಿಷ್ಟ 4೦,೦೦೦ ರೂ. ಅಂತೂ ಎಣಿಸ್ತೀರಿ ಯಾವುದು ಗೊತ್ತೇ ಆ ಉದ್ಯೋಗ?

3, 12, 21, 30; ಈ ತಾರೀಕಿನಂದು ಹುಟ್ಟಿದವರು, ಇತರರನ್ನ ಅಪಹಾಸ್ಯ ಮಾಡುವವರು ಆಗಿರುತ್ತಾರೆ. ಆದರೆ ಇವರು ಕಲಾಭಿಮಾನಿಗಳು, ಆತ್ಮವಿಶ್ವಾಸ ಹೊಂದಿರುತ್ತಾರೆ ತಮ್ಮ ಘನತೆಯ ಬಗ್ಗೆ ಹೆಚ್ಚು ಮೌಲ್ಯ ನೀಡುತ್ತಾರೆ. ಯಾವುದೇ ವಿಷಯದ ಬಗ್ಗೆ ಬಹಿರಂಗವಾಗಿ ವಾದ ಮಾಡುತ್ತಾರೆ.

4, 13, 22, 31; ಈ ಜನ್ಮ ಸಂಖ್ಯೆಯನ್ನು ನೋಡುವುದಾದರೆ ಮಹಿಳೆಯರು ಅಥವಾ ಪುರುಷರು ಶಕ್ತಿಯುತ ಸ್ವಭಾವ ಹೊಂದಿರುವಂತವರು, ಹಠಾತ್ ಪ್ರವೃತ್ತಿ ಇವರಲ್ಲಿ ಇರುತ್ತದೆ. ಎಲ್ಲಾ ವಿಷಯದಲ್ಲಿಯೂ ಸಕ್ರಿಯರಾಗಿ ಎಚ್ಚರಿಕೆಯಿಂದ ಇರುತ್ತಾರೆ. ಸ್ವಾಭಿಮಾನಿ,  ಆಶಾವಾದಿಗಳು ಹೌದು. ಬುದ್ಧಿವಂತರು ಮತ್ತು ಅಪಾಯಕಾರಿ ಸ್ವಭಾವದವರು ಆಗಿರುತ್ತಾರೆ. ಇದನ್ನೂ ಓದಿ: Astrology: ಹೊಸ ವರ್ಷದ ಆರಂಭದಲ್ಲಿ ಈ ಮೂರು ರಾಶಿಯವರ ಮೇಲೆ ಶನಿಯ ಕೃಪೆ; ನೀವು ಶ್ರೀಮಂತರಾಗೋದು ಪಕ್ಕಾ!

5, 14, 23; ಈ ದಿನಾಂಕದಂದು ಜನಿಸಿದವರು ಕೌಶಲ್ಯ ಹೊಂದಿರುವಂತಹವರು. ಕಲೆಗಳಲ್ಲಿ ಆಸಕ್ತಿ ಭಕ್ತಿ ಬೆಳೆಸಿಕೊಂಡಿರುವಂಥವರು. ಸ್ವಲ್ಪ ಸ್ವಾರ್ಥ ಜಾಗರೂಕ ಸ್ವಭಾವ ಇವರಲ್ಲಿ ಇರುತ್ತದೆ. ತಕ್ಷಣಕ್ಕೆ ಬದಲಾಗಬಲ್ಲ ಸ್ವಭಾವ ಇವರದು. ಸಮತೋಲನ ಮತ್ತು ಕೋಮಲ ಹೃದಯವನ್ನು ಹೊಂದಿರುತ್ತಾರೆ.

6, 15, 24; ಈ ದಿನಾಂಕಗಳಲ್ಲಿ ಜನಿಸಿದ ವ್ಯಕ್ತಿ ಪ್ರೀತಿಯ ಭಾವನೆ ಹೊಂದಿರುವಂತವರು, ರಂಜಿಸುವ ಆಕರ್ಷಕ ಸ್ವಭಾವ ಇದ್ದರು ಮೊಂಡುತನ ಜಾಸ್ತಿ. ಆರ್ಥಿಕವಾಗಿ ಕಠಿಣ ಸಮಯವನ್ನು ಅನುಭವಿಸುತ್ತಾರೆ.

7, 16, 25; ಈ ದಿನಾಂಕಗಳಲ್ಲಿ ಜನಿಸಿದ ಮಹಿಳೆ ಅಥವಾ ಪುರುಷ ಸ್ವತಂತ್ರ ಮನಸ್ಥಿತಿ ಉಳ್ಳವರು ಅಂತರ್ಮುಖಿ ಮಹತ್ವಾಕಾಂಕ್ಷೆಯ ಗುಣ ಇವರಲ್ಲಿದೆ. ಸ್ವಾರ್ಥ ಇದ್ದರು ಕಾಲ್ಪನಿಕ, ಕಲಾಭಿಮಾನಿಗಳು ಹೌದು. ಸಹಾನುಭೂತಿ ಹೊಂದಿರುತ್ತಾರೆ ಅತಿಂದ್ರಿಯ ಶಕ್ತಿ ಇರುತ್ತದೆ ಹೆಚ್ಚು ಚಿಂತನೆ ಮಾಡುತ್ತಾರೆ.

8, 17, 26; ಈ ಸಂಖ್ಯೆಯಲ್ಲಿ ಜನಿಸಿದ ಮಹಿಳೆಯರು ಅಥವಾ ಪುರುಷರು ಕಠಿಣ ಪರಿಶ್ರಮ ಮಹತ್ವಾಕಾಂಕ್ಷಿ, ಪ್ರಾಮಾಣಿಕ ಗುಣ ಹೊಂದಿರುತ್ತಾರೆ, ಹಠಮಾರಿ ಸ್ವಭಾವ, ಚಂಚಲ ಮನಸ್ಥಿತಿ ಇವರದ್ದು. ನಿಗೂಢತೆ, ಸ್ಪಷ್ಟತೆ ಎರಡು ಮನಸ್ಥಿತಿ ಇವರಲ್ಲಿದೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಾರೆ. ಇದನ್ನೂ ಓದಿ:Bangalore Food: ಬೆಂಗಳೂರಿನ ಸಹಕಾರ ನಗರಿಯಲ್ಲಿ ನಿರ್ಮಾಣವಾಯಿತು ನರಾಚಿ ಸಾಮ್ರಾಜ್ಯ. ಕೆಜಿಎಫ್ ಬದಲು ಕನ್ನಡಿಗಾಸ್ ಗೋಲ್ಡನ್ ಫೂಡ್ ರೆಸ್ಟೋರೆಂಟ್ ಗೆ ಒಮ್ಮೆ ಹೋಗಿ ಬನ್ನಿ!

9, 18, 27; ಈ ಸಂಖ್ಯೆಯಲ್ಲಿ ಜನಿಸಿದ ಜನ ಆಡಂಬರದ ಸ್ವಭಾವ ಹೊಂದಿರುತ್ತಾರೆ, ಧೈರ್ಯ ಶಾಲಿಗಳು, ಕ್ರಿಯಾಶೀಲರು, ಉಗ್ರ ಸ್ವಭಾವ ಹೊಂದಿರುವವರು ಹೌದು. ತಾಳ್ಮೆ ಇವರ ಆಸ್ತಿ ಸೃಜನಶೀಲ ಉದ್ಯಮಶೀಲ, ಕಲಾತ್ಮಕ ಗುಣ ಇವರಲ್ಲಿದೆ. ಸ್ವಾಭಿಮಾನಿಗಳು ಮತ್ತು ಬುದ್ಧಿವಂತರು. ತಮ್ಮ ನಿರ್ಧಾರದ ಮೇಲೆ ಗಟ್ಟಿಯಾಗಿ ನೆಲೆಯುರುತ್ತಾರೆ.

12 zodiac signsAstrologyHoroscopeLifestyleNumerologyಜ್ಯೋತಿಷ್ಯಾಸ್ತ್ರಭವಿಷ್ಯಸಂಖ್ಯಾಶಾಸ್ತ್ರ