Old Phone can be CCTV: ಮನೆಯಲ್ಲಿ ಬಿದ್ದಿರುವ ಹಳೆಯ ಫೋನ್ ಬಳಸಿ ಸಿಸಿಟಿವಿ ಮಾಡಿಬಿಡಿ. ಹೇಗೆ ಗೊತ್ತೇ?? ಅದು ಅತಿ ಸುಲಭವಾಗಿ ಖರ್ಚು ಇಲ್ಲದೆ ಸಿಸಿಟಿವಿ!

Old Phone can be CCTV: ಈಗ ದಿನಕ್ಕೆ ಒಂದು ಹೊಸ ಹೊಸ ಮೊಬೈಲ್ಗಳು (New mobile) ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ಹೊಸ ಮೊಬೈಲ್ನತ್ತ ಆಕರ್ಷಿತರಾಗಿ ಹಲವರು ಹಳೆಯ ಮೊಬೈಲ್ (Old smartphone) ಮನೆಯಲ್ಲಿಯೇ ಇಟ್ಟು ಹೊಸ ಮೊಬೈಲ್ ಕೊಂಡು ಬಳಸಲು ಶುರು ಮಾಡುತ್ತಾರೆ. ಕೆಳಮಧ್ಯಮ ವರ್ಗದವರು ಹಳೆಯ ಮೊಬೈಲ್ ಮಾರಾಟ ಮಾಡಿ ಹೊಸ ಮೊಬೈಲ್ ಫೋನ್ ಕೊಂಡುಕೊಳ್ಳುತ್ತಾರೆ. ಹೀಗೆ ಮನೆಯಲ್ಲಿಯೇ ಇದ್ದು ಹಾಳಾಗುವ ನಿಮ್ಮ ಹಳೆಯ ಮೊಬೈಲ್ ಫೋನನ್ನು ಸಿಸಿಟಿವಿ (CCTV) ಆಗಿ ಪರಿವರ್ತನೆ ಮಾಡಿಕೊಳ್ಳಬಹುದು.

ಹಲವರು ಹೊಸ ಮೊಬೈಲ್ ಫೋನ್ ತೆಗೆದುಕೊಂಡಾಗ ಹಳೆಯ ಮೊಬೈಲ್ ಫೋನ್ ಇನ್ನು ಉಪಯೋಗವಿಲ್ಲ ಎಂದು ಹಾಗೆಯೇ ಮನೆಯಲ್ಲಿ ಯಾವುದೋ ಮೂಲೆಯಲ್ಲಿಯೋ, ಬೀರುವಿನಲ್ಲಿಯೋ ಇಟ್ಟಿರುತ್ತಾರೆ. ಆದರೆ ಅದರಿಂದಲೂ ಉಪಯೋಗ ಆಗುತ್ತದೆ ಎಂದು ತಿಳಿದಾಗ ಅದನ್ನು ಬಳಸಿಕೊಳ್ಳಬೇಕು. ಅದು ಬುದ್ದಿವಂತರ ಲಕ್ಷಣವಾಗಿದೆ. ಇದನ್ನೂ ಓದಿ: Marriage: ಮೇ, 03,2023, ಗೋಧೂಳಿ ಮುಹೂರ್ತದಲ್ಲಿ ಒಂದು ರೂಪಾಯಿ ಖರ್ಚಿಲ್ಲದೇ, ಸಾಂಪ್ರದಾಯಿಕವಾಗಿ ಮದುವೆ ಆಗ್ಬೇಕಾ? ಹಾಗಾದ್ರೆ ಇಂದೇ ನಿಮ್ಮ ಹೆಸರನ್ನು ಇಲ್ಲಿ ನೋಂದಾಯಿಸಿಕೊಳ್ಳಿ!

ಇಂದು ಎಲ್ಲ ಕಡೆ ಅಪರಾಧ ಪ್ರಕರಣಗಳು, ಮನೆಗಳವು ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಸಿಸಿಟಿವಿ ಇದ್ದರೆ ಅಪರಾಧಿಗಳನ್ನು ಹಿಡಿಯಲು ಸಹಾಯಕವಾಗುತ್ತದೆ. ಅದಕ್ಕಾಗಿಯೇ ಹಲವರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮನೆಯ ಸುತ್ತಮುತ್ತ ಸಿಸಿಟಿವಿ ಹಾಕಿಸುತ್ತಾರೆ. ಈಗ ಹಳೆಯ ಫೋನನ್ನೇ ಸಿಸಿಟಿವಿ ಆಗಿ ಪರಿವರ್ತಿಸಿದರೆ ನಿಮಗೆ ಆ ಸಾವಿರಾರು ರೂಪಾಯಿ ಉಳಿತಾಯವಾಗುತ್ತದೆ.

ನಿಮ್ಮ ಹಳೆಯ ಮೊಬೈಲ್ ಹಾಗೂ ಹೊಸ ಮೊಬೈಲ್ ಫೋನಿನಲ್ಲಿ ಅಲ್ಫೈಡ್ ಸಿಸಿಟಿವಿ ಎನ್ನುವ ಅಪ್ಲಿಕೇಶನ್ ಇದೆ. ಅದನ್ನು ಡೌನ್ಲೋಡ್ (Download) ಮಾಡಿಕೊಳ್ಳಬೇಕು. ಇದು ನಿಮ್ಮ ಮೊಬೈಲ್ ಸಿಸಿಟಿವಿ ಆಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರ ಹಳೆಯ ಫೋನನ್ನು ಸಿಸಿಟಿವಿಯಾಗಿಯೂ ಹೊಸ ಮೊಬೈಲ್ ಫೋನನ್ನು ಮಾನಿಟರ್ ರೂಪದಲ್ಲಿಯೂ ಬಳಸಬಹುದು. ಇದನ್ನೂ ಓದಿ: Kannadathi Serial: ಗುಡ್ ನ್ಯೂಸ್ ಹಾಗೂ ಬ್ಯಾಡ್ ನ್ಯೂಸ್ ಎರಡನ್ನು ಒಟ್ಟೊಟ್ಟಿಗೆ ಕೊಡುತ್ತಿರುವ ‘ಕನ್ನಡತಿ’ ಏನು ಗೊತ್ತೇ?

ನಿಮ್ಮ ಹಳೆಯ ಮೊಬೈಲ್ನ್ನು ನಿಮಗೆ ಅವಶ್ಯ ಇರುವ ಜಾಗದಲ್ಲಿ ಇರಿಸಬೇಕು. ಅದಕ್ಕೆ ಚಾರ್ಜ್ ಖಾಲಿಯಾಗದ ಹಾಗೆ ಬ್ಯಾಟರಿ ಅಥವಾ ಚಾರ್ಜರ್ (Charger) ಅಳವಡಿಸಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಿಸಿಟಿವಿಯಾಗಿ ಪರಿವರ್ತನೆ ಆದ ಫೋನ್ ಹಾಗೂ ಮಾನೆಟರ್ (Monitor)  ಫೋನಿಗೆ ಇಂಟರ್ನೆಟ್ ಕನೆಕ್ಟ್ (Internet Connect) ಆಗುವಂತೆ ಇರಬೇಕು. ಇದರಿಂದ ಮಾತ್ರ ನೀವು ಸಿಸಿಟಿವಿ ಮಾನಿಟರ್ ಮಾಡಲು ಸಾಧ್ಯವಾಗುತ್ತದೆ.

CCTVold Phonesmart phone