Kannada Recipe:  ಬಿಸಿ ಬಿಸಿಯಾಗಿ ಹೀಗೊಂದು ಪಾಲಾಕ್ ಕಿಚಡಿ ಮಾಡಿ ನೋಡಿ; ನೀವೇ ಮಾಸ್ಟರ್ ಶೆಫ್ ಎನಿಸಿಕೊಳ್ತೀರಾ!

Kannada Recipe: ಚಳಿಗಾಲ ಶುರುವಾಗಿದೆ. ಅಕಾಲಿಕ ಮಳೆ ವಾತಾವರಣ ಬೇರೆ. ಇಂಥ ಚುಮು ಚುಮು ಚಳಿಗೆ ಬೆಳಗಿನ ಉಪಹಾರಕ್ಕೆ ಹೀಗೊಂದು ಬಿಸಿಬಿಸಿಯಾದ ಪಾಲಾಕ್ ಕಿಚಡಿ (Palak kichdi) ಮಾಡಿ ನೋಡಿ. ಮನೆಯವರು ಚಪ್ಪರಿಸಿಕೊಂಡು ತಿಂತಾರೆ, ನಿಮಗೊಂಉ ಶಹಬ್ಭಾಶ್ ಸಿಕ್ಕೇ ಸಿಗತ್ತೆ!

ಪಾಲಾಕ್ ಕಿಚಡಿ ಮಾಡಲು ಬೇಕಾಗುವ ಸಾಮಗ್ರಿಗಳು:

ಒಂದು ಕಟ್ಟು ಪಾಲಕ್ (ತೊಳೆದು ಸ್ವಚ್ಛಗೊಳಿಸಿ, ಕತ್ತರಿಸಿಕೊಳ್ಳಿ)

ಒಂದು ಈರುಳ್ಳಿ (ಸಣ್ಣದಾಗಿ ಕತ್ತರಿಸಿದ್ದು)

ಎರಡು ಟೊಮೆಟೊ (ಸಣ್ಣದಾಗಿ ಕತ್ತರಿಸಿದ್ದು)

ಅಕ್ಕಿ-ಒಂದೂವರೆ ಕಪ್

ಒಂದು ಕಪ್ ದಾಲ್ (ತೊಗರಿ ಬೇಳೆ)

ಒಂದು ಟೀಸ್ಪೂನ್ ಜೀರಿಗೆ

ಒಂದು ಟೀಸ್ಪೂನ್ ಸಾಸಿವೆ

ಒಂದು ಟೀಸ್ಪೂನ್ ಕೊತ್ತಂಬರಿ ಪುಡಿ

ಒಂದು ಟೀಸ್ಪೂನ್ ಅರಿಶಿನ ಪುಡಿ

ಉಪ್ಪು ರುಚಿಗೆ

ಕೆಂಪು ಮೆಣಸಿನ ಪುಡಿ

ಕರಿಬೇವಿನ ಸೊಪ್ಪು ಸ್ವಲ್ಪ

ಒಂದು ಟೀಸ್ಪೂನ್ ತುಪ್ಪ

ಹಸಿ ಮೆಣಸು ಎರಡು

ಒಂದು ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್

ನೀರು

ಪಾಲಾಕ್ ಕಿಚಡಿ ಮಾಡುವ ವಿಧಾನ:

ಮೊದಲಿಗೆ ಅಕ್ಕಿಯನ್ನು ತೊಳೆದು 15 ನಿಮಿಷ ನೀರಿನಲ್ಲಿ ನೆನೆಸಿಡಿ (ಸೋನಾಮಸೂರಿ ಅಕ್ಕಿ ಅಲ್ಲದಿದ್ದರೆ ನೆನೆಸಿಡುವ ಅಗತ್ಯವೂ ಇಲ್ಲ) ಬೇಳೆಯನ್ನು ನೀರಿನಲ್ಲಿ ತೊಳೆದುಕೊಳ್ಳಿ. ಕುಕ್ಕರ್ ನಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಶುಂಠಿಯ ಹಸಿ ವಾಸನೆ ಹೋಗಬೇಕು. ನಂತರ ಇದಕ್ಕೆ ಅರಿಶಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಮೆಣಸಿನ ಪುಡಿ ಸೇರಿಸಿ ಫ್ರೈ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ಈಗ ಕುಕ್ಕರ್ ಗೆ  ಬೇಳೆ ಮತ್ತು ಅನ್ನವನ್ನು ಸೇರಿಸಿ. ಒಂದುವರೆ ಲೋಟ ನೀರನ್ನೂ ಹಾಕಿ ಬೇಯಿಸಿ. ನಂತರ ಇದಕ್ಕೆ ಹೆಚ್ಚಿಟ್ಟುಕೊಂಡ ಪಾಲಕ್ ಸೊಪ್ಪನ್ನು ಸೇರಿಸಿ. ಕುಕ್ಕರ್ ಮುಚ್ಚಳ ಮುಚ್ಚಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಎರಡು ಸೀಟಿ ನಂತರ  ಗ್ಯಾಸ್ ಆಫ್ ಮಾಡಿ. ಕುಕ್ಕರ್‌ ಆರಿದ ನಂತರ ಮುಚ್ಚಳ ತೆಗೆದು ಪಾಲಾಕ್ ದಾಲ್ ಕಿಚಡಿಯನ್ನು ಪ್ಲೇಟ್ ಗೆ ಹಾಕಿ ಬಡಿಸಿ. ಮೊಸರಿನ ಜೊತೆಗೆ ಇದನ್ನು ಸವಿಯಬಹುದು.

Healthy foodKannada RecipeLifestyleಕನ್ನಡ ರೆಸಿಪಿ