Part Time Job:ವಿದ್ಯಾರ್ಥಿಗಳು ಕೂಡ ಪಾರ್ಟ್ ಟೈಮ್ ಆನ್ಲೈನ್ ಜಾಬ್ ಮಾಡಿ ಹಣ ಗಳಿಸಬಹುದು; ನಿಮ್ಮ ಪಾಕೆಟ್ ಮನಿಗಾಗಿ ನೀವೇ ಅರ್ನ್ ಮಾಡೋದು ಹೇಗೆ ಗೊತ್ತಾ?

Part Time Job: ಇಂದು ಹೆಚ್ಚಾಗಿ ವಿದ್ಯಾರ್ಥಿಗಳು ಕೂಡ ತಮ್ಮ ದಿನನಿತ್ಯದ ಖರ್ಚಿಗಾಗಿ ಯಾರ ಮೇಲು ಡಿಪೆಂಡ್ ಆಗಲು ಇಷ್ಟಪಡುವುದಿಲ್ಲ ಹಾಗಾಗಿ ಯಾವುದಾದರೂ ಪಾರ್ಟಿ ಉದ್ಯೋಗವನ್ನು ಅರಸುತ್ತಿರುತ್ತಾರೆ ಅಂತವರಿಗೆ ಆನ್ಲೈನ್ ನಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಇದರಿಂದ ಕಾಲೇಜಿನ ಶುಲ್ಕ ಹಾಗೂ ಇತರ ವೆಚ್ಚಗಳನ್ನು ಪೂರೈಸುವಷ್ಟು ಆರ್ಥಿಕ ಬೆಂಬಲ ದೊರೆಯುತ್ತದೆ.

ವಿದ್ಯಾರ್ಥಿಯಾಗಿದ್ದಾಗಲೇ ಆನ್ಲೈನ್ ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡುವುದರ ಮೂಲಕ ಹಣ ಗಳಿಸಿ ನಂತರ ಪೂರ್ಣ ಪ್ರಮಾಣದ ಪ್ರತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದು ಇದರಿಂದ ನೀವು ಆರಂಭದಲ್ಲೇ ಇಂಡಿಪೆಂಡೆಂಟ್ ಆಗಿ ಇರುವುದನ್ನ ಅಭ್ಯಾಸ ಮಾಡಿಕೊಳ್ಳಬಹುದು. ಹಾಗಾದರೆ ವಿದ್ಯಾರ್ಥಿಗಳಿಗಾಗಿ ಇರುವಂತಹ ಅರೆಕಾಲಿಕ ಅಥವಾ ಪೂರ್ಣ ಸಮಯದ ಆನ್ಲೈನ್ ಕೆಲಸಗಳು ಯಾವುದು ಗೊತ್ತಾ? ಇದನ್ನೂ ಓದಿ: Scholarship:ಈ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತೆ 25೦೦ ರೂ. ನಿಂದ 11,೦೦೦ ರೂ. ಪ್ರತಿ ತಿಂಗಳ; ಯಾವುದು ಆ ಸ್ಕಾಲರ್ ಶಿಪ್ ಗೊತ್ತಾ?

ವಿದ್ಯಾರ್ಥಿಗಳಿಗಾಗಿ ಆನ್ಲೈನ್ ಉದ್ಯೋಗ

ಇಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳು ಇಂಟರ್ನೆಟ್ ಸಂಪರ್ಕ ಹಾಗೂ ಕಂಪ್ಯೂಟರ್ ಹೊಂದಿರಬೇಕು ಜೊತೆಗೆ ಆಯಾ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಕೂಡ ಹೊಂದಿರಬೇಕು ವಿದ್ಯಾರ್ಥಿಗಳಿಗಾಗಿ ಇರುವಂತಹ ಆನ್ಲೈನ್ ಉದ್ಯೋಗಗಳು ಅಂದ್ರೆ

ಆನ್ಲೈನ್ ಟ್ಯೂಷನ್
ಭಾಷಾಂತರ ಮಾಡುವುದು (translation)
ಗ್ರಾಫಿಕ್ಸ್ ಡಿಸೈನ್
ಡಾಟಾ ಎಂಟ್ರಿ ಮಾಡುವುದು
ಉತ್ಪನ್ನ ವಿಮರ್ಶೆ ( ಯಾವುದಾದರೂ ಪ್ರಾಡಕ್ಟ್ ಗಳ ಪ್ರಮೋಷನಲ್ ಕೆಲಸ)
ಆನ್ಲೈನ್ ಸಮೀಕ್ಷೆ ನಡೆಸಿಕೊಡುವುದು
ಆನ್ಲೈನ್ ಕಷ್ಟಮರ್ ಸರ್ವಿಸ್
ಆನ್ಲೈನ್ ಟ್ರಾವೆಲ್ ಏಜೆನ್ಸಿ
ಆನ್ಲೈನ್ ನಲ್ಲಿ ಕಲೆ ಮತ್ತು ಕರಕುಶಲ ಕೆಲಸಗಳನ್ನು ಮಾರಾಟ ಮಾಡುವುದು
ಆನ್ಲೈನ್ ಮಾರ್ಕೆಟಿಂಗ್ ಉದ್ಯೋಗಗಳು
ಆನ್ಲೈನ್ ಸ್ಟಾಕ್ ಟ್ರೇಡಿಂಗ್ ಕೆಲಸ
ಬ್ಲಾಗಿಂಗ್
ಛಾಯಾಚಿತ್ರ ಮಾರಾಟ
ಆನ್ಲೈನ್ ವಿಡಿಯೋ ಅಥವಾ ಯೂಟ್ಯೂಬ್ ಚಾನೆಲ್ ಮಾಡುವುದು
ಡೊಮಿನ್ ಹೆಸರುಗಳನ್ನು ಖರೀದಿಸಿ ಮಾರಾಟ ಮಾಡುವುದು
ಸರ್ಚ್ ಇಂಜಿನ್ ಆಪ್ಟಿಮೈಜೇಶನ್

ಹೀಗೆ ಸಾಕಷ್ಟು ಆನ್ಲೈನ್ ಕೆಲಸಗಳು ವಿದ್ಯಾರ್ಥಿಗಳಿಗಾಗಿ ಲಭ್ಯವಿವೆ ವಿದ್ಯಾರ್ಥಿಗಳು ಮಾತ್ರ ಅಲ್ಲ ಮನೆಯಲ್ಲಿ ಖಾಲಿ ಇರುವ ಯಾವುದಾದರೂ ಉದ್ಯೋಗ ಅರಸುತ್ತಿರುವ ಮಹಿಳೆಯರು ಕೂಡ ಇಂತಹ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

Lifestyleonline workPart time jobpart time online jobs for students