Breakfast recipe: ಬೆಳಗಿನ ಉಪಹಾರಕ್ಕೆ ಇದಕ್ಕಿಂತ ರುಚಿಯಾದ ಬ್ರೇಕ್ ಫಾಸ್ಟ್ ಮತ್ತೊಂದಿಲ್ಲ, ತಯಾರಿಸೋಕೆ ಐದು ನಿಮಿಷನೂ ಬೇಕಾಗಿಲ್ಲ!

Breakfast recipe:ಇತ್ತೀಚಿಗೆ ಬೆಳಗಿನ ಉಪಹಾರವನ್ನು ಜನರು ಲಘುವಾಗಿ ಹಾಗೂ ಆರೋಗ್ಯವಾಗಿರುವಂಥದ್ದನ್ನು ಸೇವಿಸುತ್ತಾರೆ. ಹಾಗಾಗಿ ಸಾಂಪ್ರದಾಯಿಕ ಉಪಹಾರಗಳಿಗಿಂತ ವಿಭಿನ್ನವಾದ ಉಪಹಾರ ಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆಗಾಗ ಈ ರೀತಿಯ ಆಹಾರ ಸೇವಿಸುವುದೂ ಕೂಡ ಒಳ್ಳೆಯದೆ. ಅದರಲ್ಲೂ ಕಡಲೆ ಕಾಯಿ ಬೆಣ್ಣೆ ಹಾಗೂ ಬಾಳೆಹಣ್ಣಿನಲ್ಲಿ ಪ್ರೋಟಿನ್ ಅಂಶವಿರುತ್ತದೆ. ಹಾಗೂ ಇದರಲ್ಲಿರುವ ಫೈಬರ್ ಅಂಶವೂ ಆರೋಗ್ಯಕ್ಕೆ ಒಳ್ಳೆಯದು. ಇದು ಜೀರ್ಣಕ್ರಿಯೆಯನ್ನೂ ಸುಲಭಗೊಳಿಸುತ್ತದೆ. ಅಷ್ಟೇ ಅಲ್ಲ ದಿನವಿಡೀ ದೇಹದಲ್ಲಿ ಎನರ್ಜಿ, ಉತ್ಸಾಹ ಇರುತ್ತದೆ. ನಾವಿನ್ನು ನಿಮಗೆ ಲಘು ಉಪಹಾರದ ಪೀನಟ್ ಬಟರ್ ಮತ್ತು ಬಾಳೆಹಣ್ಣನ್ನು ಹಾಕಿ ತಯಾರಿಸಬಹುದಾದ ಒಂದು ಸ್ಮೂಥಿ ರೆಸಿಪಿಯನ್ನು ಹೇಳಿಕೊಡ್ತೀವಿ. ತಪ್ಪದೇ ನೀವೂ ಟ್ರೈ ಮಾಡಿ.

ಪೀನಟ್ ಬಟರ್ ಬಾಳೆಹಣ್ಣಿನ ಸ್ಮೂಥಿ ಮಾಡಲು ಬೇಕಾಗುವ ವಸ್ತುಗಳು:

ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳು- 3 (ಮಧ್ಯಮ ಗಾತ್ರದ್ದು)

 ಕಡಲೆಕಾಯಿ ಬೆಣ್ಣೆ (ಪೀನಟ್ ಬಟರ್)- 1/4 ಕಪ್

ಹಾಲು- 1 1/2 ಕಪ್

ಗ್ರೀಕ್ ಮೊಸರು 1/2 ಕಪ್

ಜೇನುತುಪ್ಪ – 1 ಟೀಚಮಚ

ಉಪ್ಪು -1/4 ಟೀಚಮಚ

ಕತ್ತರಿಸಿದ ಹುರಿದ ಕಡಲೆಕಾಯಿಗಳು – 1 ಟೀಚಮಚ

ಮಾಡುವ ವಿಧಾನ ಹೀಗಿದೆ:

ಮೊದಲಿಗೆ ಬ್ಲೆಂಡರ್ ಕಪ್‌ನಲ್ಲಿ (ಮಿಕ್ಸರ್ ನ್ನು ಕೂಡ ಬಳಸಬಹುದು) ಕಡಲೆಕಾಯಿ ಬೆಣ್ಣೆ, ಹಾಲು, ಮೊಸರು, ಜೇನುತುಪ್ಪ ಮತ್ತು ಉಪ್ಪು ಹಾಗೂ ಬಾಳೆಹಣ್ಣುಗಳ ಹೋಳನ್ನು ಮಿಶ್ರಣ ಮಾಡಿ. ಇದು ಕುಡಿಯಲು ಸಾಕಷ್ಟು ತೆಳುವಾಗುವವರೆಗೆ ಮಿಕ್ಸ್ ಮಾಡಿಕೊಳ್ಳಿ. ನಂತರ ಅದನ್ನು ಒಂದು ಲೋಟಕ್ಕೆ ಹಾಕಿ. ಅದರ ಮೇಲೆ ಕತ್ತರಿಸಿದ ಕಡಲೆಕಾಯಿಯನ್ನು ಹಾಕಿ. ಸ್ವಲ್ಪ ಪುಡಿಮಾಡಿದ ಐಸ್ ಸೇರಿಸಿ ಕುಡಿಯಲು ಕೊಡಿ. (ಐಸ್ ಬೇಡವಾದರೆ ಬಳಸಬೇಕೆಂದಿಲ್ಲ) ಆಗಾಗ ಈ ರೀತಿ ಹಣ್ಣುಗಳ ಸ್ಮೂಥಿಗಳನ್ನು ಸೇವಿಸುತ್ತಿದ್ದರೆ ಬೇಸಿಗೆಗೂ ತಂಪು, ಆರೋಗ್ಯಕರವೂ ಹೌದು.

Breakfast recipeLifestyle
Comments (0)
Add Comment