PM Kisan Scheme: ಪಿಎಂ ಕಿಸಾನ್ ಯೋಜನೆ 18ನೇ ಕಂತಿನ ಹಣ ಬಿಡುಗಡೆ ನಿಮ್ಮ ಖಾತೆಗೆ ಹಣ ಬಂದಿದ್ಯಾ ಚೆಕ್ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್!

PM Kisan Scheme: ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣದ ನಿರೀಕ್ಷೆಯಲ್ಲಿರುವಂತಹ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜೂನ್ ನಾಲ್ಕು ಲೋಕಸಭಾ ಚುನಾವಣೆಯ ಫಲಿತಾಂಶದ ದಿನಾಂಕವಾಗಿರುವ ಕಾರಣದಿಂದಾಗಿ ಈ ದಿನಾಂಕದ ನಂತರ 18ನೇ ಕಂತಿನ ಹಣದ ವರ್ಗಾವಣೆಯನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ನೇರವಾಗಿ ಮಾಡಲಿದೆ ಎಂಬ ಮಾಹಿತಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭ ಮಾಡಿರುವಂತಹ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿ ಹಣದ ಸಹಾಯಧನವನ್ನು ಪಡೆದುಕೊಳ್ಳುತ್ತಿದ್ದಾರೆ. ಅಂದರೆ ರೈತರು ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟಾರೆಯಾಗಿ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 6000 ರೂಪಾಯಿಗಳ ಸಹಾಯಧನವನ್ನು ಪಡೆದುಕೊಳ್ಳುತ್ತಾರೆ.

2019ರ ಮಧ್ಯಂತರ ಬಜೆಟ್ ಘೋಷಣೆಯ ಸಂದರ್ಭದಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಲಾಗಿರುತ್ತದೆ. ಇನ್ನೂ ರೈತರು ಪಿ ಎಮ್ ಕಿಸಾನ್ ಯೋಜನೆಯ ಹಣವನ್ನು ಪಡೆದುಕೊಳ್ಳುವುದಕ್ಕೆ ಪ್ರಮುಖವಾಗಿ eKYC ಮಾಡಿಸಿಕೊಳ್ಳಬೇಕಾಗಿರುವುದು ಕಡ್ಡಾಯವಾಗಿದ್ದು ಇದನ್ನು ಮಾಡದೆ ಹೋದಲ್ಲಿ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಇದಕ್ಕಾಗಿ ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗುವ ಮೂಲಕ ಅಲ್ಲಿ ನೀವು ನೋಂದಾವಣೆ ಮಾಡಿಕೊಂಡಿದ್ದಾರೆ ಆ ನೋಂದಾಯಿತ ರೈತರಿಗೆ eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತಹ ಅವಕಾಶವಿದೆ ಅಥವಾ ಬಯೋಮೆಟ್ರಿಕ್ ಮೂಲಕ ಕೂಡ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

18ನೇ ಕಂತಿನ ಹಣ ಬಂದಿದ್ಯ ಇಲ್ವಾ ಅನ್ನೋದನ್ನ ಚೆಕ್ ಮಾಡೋದು ಹೇಗೆ ಗೊತ್ತಾ?

  • ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಮೊದಲಿಗೆ ಲಾಗಿನ್ ಆಗಬೇಕು
  • ಇದರ ಬಲ ಭಾಗದಲ್ಲಿರುವಂತಹ ಸ್ಟೇಟಸ್ ಚೆಕ್ ಮಾಡುವಂತಹ ಆಪ್ಷನ್ ಅನ್ನು ನೀವು ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇಲ್ಲಿ ನಿಮ್ಮ ರಿಜಿಸ್ಟ್ರೇಷನ್ ಆಗಿರುವಂತಹ ನಂಬರ್ ಅನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ ಹಾಗೂ ಕ್ಯಾಪ್ಚ ಕೋಡ್ ಅನ್ನು ಭರ್ತಿ ಮಾಡಬೇಕು. ಇದಾದ ನಂತರ ಡಾಟಾ ಪಡೆದುಕೊಳ್ಳುವಂತಹ ಆಯ್ಕೆಯನ್ನು ನೀವು ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇಲ್ಲಿ ನಿಮ್ಮ ಸ್ಟೇಟಸ್ ಅನ್ನು ನೀವು ಚೆಕ್ ಮಾಡಬಹುದಾಗಿದೆ.

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸೇರಿಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನ!

  • ಇದಕ್ಕೆ ಕೂಡ ನೀವು ಮೊದಲನೇ ಹಂತವಾಗಿ ಪಿಎನ್ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗ್ಬೇಕಾಗಿರುತ್ತದೆ
  • ಅಲ್ಲಿ ರೈತರ ನೋಂದಾವಣೆ ಆಯ್ಕೆ ಮೇಲೆ ಕ್ಲಿಕ್ ಮಾಡ ಬೇಕಾಗಿರುತ್ತದೆ ಹಾಗೂ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ ಕ್ಯಾಪ್ಚ ಕೋಡ್ ಅನ್ನು ಸಬ್ಮಿಟ್ ಮಾಡಬೇಕು
  • ಇದಾದ ನಂತರ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಕೂಡ ನೀವು ನೀಡಬೇಕಾಗಿರುತ್ತದೆ ಹಾಗೂ ಕೊನೆಯಲ್ಲಿ ಸಬ್ಮಿಟ್ ಮಾಡಬೇಕಾಗಿರುತ್ತದೆ
  • ಎಲ್ಲ ಮಾಹಿತಿಗಳನ್ನು ನೀವು ನೀಡಿದ ನಂತರ ಅದರ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬೇಕಾಗಿರುತ್ತದೆ ಭವಿಷ್ಯದಲ್ಲಿ ಇದರ ಅವಶ್ಯಕತೆ ನಿಮಗೆ ಬೇಕಾಗಿ ಬರಬಹುದು.
PM Kisan Scheme