Political News: ಮನಸ್ಸಿಗೆ ಬಂದಂತೆ ಮತ್ತಷ್ಟು ಬಿಟ್ಟಿ ಘೋಷಣೆ ಮಾಡಿದ ಸಿದ್ದರಾಮಯ್ಯ. ಈ ಬಾರಿ ಅದೆಷ್ಟು ಲಕ್ಷಗಳ ಭರವಸೆ ಗೊತ್ತೇ??

Political News:ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಭರದಿಂದ ಸಾಗಿದ್ದು ಚುನಾವಣೆಯಲ್ಲಿ ಗದ್ದುಗೆ ಆಕಾಂಕ್ಷೆ ಪಕ್ಷಗಳು ಹಾಗೂ ಪಕ್ಷದ ಸದಸ್ಯರು ರಾಜ್ಯದಲ್ಲಿ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮಹಿಳಾ ಸಮಾವೇಶದಲ್ಲಿ ಕೂಡ ಉಪಸ್ಥಿತರಿದ್ದ ಸಿದ್ದರಾಮಯ್ಯ (siddaramaiah) ಅವರು ಒನತೆಯರಿಗೆ ಹಾಗೂ ರೈತರಿಗೆ ಕೆಲವು ಆಶ್ವಾಸನೆ ನೀಡಿದ್ದಾರೆ.

ಮಹಿಳೆಯರಿಗೆ ನೀಡಲಾಗುವ 50,000ರೂ. ಬಡ್ಡಿ ರಹಿತ ಸಾಲವನ್ನು ಒಂದು ಲಕ್ಷ ರೂಪಾಯಿಗೆ ಏರಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ರೈತರಿಗೆ ಬಡ್ಡಿ ರಹಿತ ಸಾಲವನ್ನು 5 ಲಕ್ಷ ರೂಪಾಯಿಗೆ ಏರಿಸುವುದಾಗಿಯೂ ಹಾಗೂ ಶೇಕಡ ಮೂರರ ಬಡ್ಡಿ ದರದಲ್ಲಿ ರೈತರಿಗೆ ನೀಡುವ ಸಾಲವನ್ನು 10 ಲಕ್ಷದಿಂದ 20 ಲಕ್ಷ ರೂಪಾಯಿಗೆ ಏರಿಸುವುದಾಗಿಯೂ ಸಿದ್ದರಾಮಯ್ಯ ಭರವಸೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಶರತ್ತು ಬದ್ಧ ಸಾಲ ಮನ್ನಾ ಮಾಡಲಾಗುವುದು ಎಂಬುದಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೆ. ಇದೆಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಆಗುತ್ತದೆ ಎನ್ನುವುದು ಪಕ್ಷದ ಪ್ರಣಾಳಿಕೆಯ ಮೂಲ ಅರ್ಥ. ಇದನ್ನೂ ಓದಿ: Rahul Dravid Love Story: ರಾಹುಲ್ ದ್ರಾವಿಡ್ ಮತ್ತು ವಿಜೇತಾ ಪೆಂಡಾರ್ಕರ್ ಆರಾಧ್ಯ ಲವ್ ಸ್ಟೋರಿ ಬಗ್ಗೆ ಅದೆಷ್ಟು ವಿಭಿನ್ನ ಗೊತ್ತೇ?? ದ್ರಾವಿಡ್ ಲವ್ ಸ್ಟೋರಿ ಹೇಗಿತ್ತು ಗೊತ್ತೇ??

ಇನ್ನು ಎಂದಿನಂತೆ ಎಲ್ಲಿಯೇ ಭಾಷಣಕ್ಕೆ ನಿಂತ್ರು ಬಿಜೆಪಿ ಪಕ್ಷದ ಬಗ್ಗೆ ಅವಹೇಳನ ಮಾಡುವುದನ್ನು ಸಿದ್ದರಾಮಯ್ಯ ಅವರು ಮುಂದುವರೆಸಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉದ್ಯಮಿಗಳ 14 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ ರೈತರಿಗೆ ಮೋದಿ ಸರ್ಕಾರದಿಂದ ಸಹಾಯಕವಾಗಿಲ್ಲ ಎಂಬುದು ಸಿದ್ದರಾಮಯ್ಯ ಅವರ ಮಾತು.

ಸಿದ್ದರಾಮಯ್ಯ ಅವರ ಪ್ರಣಾಳಿಕೆಯಲ್ಲಿ ಇರುವ ಆಶ್ವಾಸನೆಗಳು:

ಮಹಿಳೆಯರಿಗೆ ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಬಡ್ಡಿ ರಹಿತ ಸಾಲ

ರೈತರಿಗೆ ಬಡ್ಡಿರಹಿತವಾಗಿ ನೀಡುವ ಮೂರು ಲಕ್ಷ ಸಾಲದ ಮೊತ್ತವನ್ನ 10 ಲಕ್ಷಕ್ಕೆ ಏರಿಕೆ

ಶೇಕಡ 3ರಷ್ಟು ಬಡ್ಡಿಯ ಮೇಲೆ ನೀಡಲಾಗುವ 10 ಲಕ್ಷದ ಸಾಲವನ್ನು ಇಪ್ಪತ್ತು ಲಕ್ಷ ರೂಪಾಯಿಗಳಿಗೆ ಏರಿಕೆ.

ಟೊಮ್ಯಾಟೋ ಮತ್ತು ಮಾವು ಸಂಸ್ಕರಣ ಘಟಕ ಸ್ಥಾಪಿಸಿಕೊಡುತ್ತೇವೆ.

ಎಪಿಎಂಸಿ ತಿದ್ದುಪಡೆ ಕಾಯ್ದೆ ವಾಪಸ್ ಪಡೆಯುತ್ತೇವೆ. ಜೊತೆಗೆ ಹಾಲಿಗೆ ಪ್ರೋತ್ಸಾಹ ಧನ ಆರು ರೂಪಾಯಿಗೆ ಹೆಚ್ಚಿಸುತ್ತೇವೆ.

ಕೋಲಾರದಲ್ಲಿ ಎಪಿಎಂಸಿ ಮಾರುಕಟ್ಟೆಗೆ 100 ಎಕರೆ ಜಮೀನು ಮಂಜೂರು ಮಾಡುತ್ತೇವೆ.

ಈ ರೀತಿ ಆಶ್ವಾಸನೆಗಳನ್ನು ನೀಡಿದ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ಇಚ್ಛೆ ಇರುವುದಾಗಿಯೂ ತಿಳಿಸಿದ್ದಾರೆ. ತಾಯಿಯ ಆಶೀರ್ವಾದ ಇದ್ರೆ ಕೋಲಾರದಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ ಏನು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಟೆಂಪಲ್ ರನ್ ಕೂಡ ನಡೆದಿದೆ.

siddaramaiahಸಿದ್ದರಾಮಯ್ಯ