ಕಂಡ ಕಂಡಲ್ಲಿ ಪೋಸ್ಟರ್ ಅಂಟಿಸುವುದರ ಮೂಲಕ ರಸ್ತೆ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸ್ಥಳೀಯರು

ಜನರಿಗೂ ಸಾಕಾಗಿ ಹೋಗಿದೆ. ರಸ್ತೆಯಲ್ಲಿ ಗುಂಡಿಗಳಿಂದ ಪ್ರಾಣಕ್ಕೆ ಆಗುವ ಹಾನಿಯ ಬಿಸಿ ಅಧಿಕಾರಿಗಳಿಗೆ ಇನ್ನೂ ತಟ್ಟಿಲ್ಲ ಎನಿಸುತ್ತೆ. ಒಂದು ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲ ರಸ್ತೆಗಳು ಕೊಳವಾಗಿ ಮಾರ್ಪಡುತ್ತವೆ. ಅಯ್ಯೋ ಮಳೆಗಾಲ ರಸ್ತೆ ಸರಿ ಮಾಡಕ್ಕಾಗಲ್ಲ ಅನ್ನುತ್ತೆ ಬಿಬಿಎಂಪಿ. ಆದರೆ ಬೇಸಿಗೆಯಲ್ಲಿಯೂ ಕೂಡ ರೋಡ್ ಗಳ ಅವಸ್ಥೆ ಮಾತ್ರ ಹೀಗೆ. ಯಾವಾಗಲೂ ಗುಂಡಿ ಇದ್ದೇ ಇರುತ್ತೆ ಆದರೆ ಈ ಗುಂಡಿ ಮುಚ್ಚುವ ವಿಷಯವನ್ನು ಮಾತ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಇರುವುದು ನಿಜಕ್ಕೂ ಶೋಚನೀಯ.

ಆದರೆ ಈ ಬಾರಿ ಮಲ್ಲೇಶ್ವರಂ ರಸ್ತೆಯಲ್ಲಿ ಹಾಕಿದ ಕೆಲವು ಪೋಸ್ಟರ್ ಗಳು ಬಿಬಿಎಂಪಿ ಅವರು ತಕ್ಷಣ ಗುಂಡಿ ಮುಚ್ಚುವುದಕ್ಕೆ ಶುರು ಮಾಡಲು ಕಾರಣವಾಗಿದೆ. ಹೌದು, ಮಲ್ಲೇಶ್ವರಂ ರಸ್ತೆಯಲ್ಲಿ ಅವಾಚ್ಯವಾಗಿ ನಿಂದಿಸಿದ ಪೋಸ್ಟರ್ ಗಳನ್ನು ಅಲ್ಲಲ್ಲಿ ಅಂಟಿಸಲಾಗಿದೆ. ಈ ಮೂಲಕ ರಸ್ತೆಯಲ್ಲಿನ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದೀಗ ಸರ್ಕಾರ ಕ್ರಮ ಕೈಗೊಂಡಿದೆ. ಮಲ್ಲೇಶ್ವರಂ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದಲೂ ಬೇರೆ ಬೇರೆ ರೀತಿಯ ಕಾಮಗಾರಿ ನಡೆಯುತ್ತಿದೆ ಯದ್ವಾತ್ತ್ವ ರಸ್ತೆಗಳನ್ನು ಅಗೆದು ಹಾಕಿದ್ದು ಜನರಿಗೆ ಸಂಚಾರಕ್ಕೆ ಅತಿವ ತೊಂದರೆ ಉಂಟಾಗುತ್ತಿದೆ ಇದರಿಂದ ಬೇಸಿದ್ದ ಕೆಲವರು ಎಲೆಕ್ಟ್ರಿಕಲ್ ಬಾಕ್ಸ್ ಗಳ ಮೇಲೆ ಅಧಿಕಾರಿಗಳನ್ನು ಬೈದು ಪೋಸ್ಟರ್ ಪ್ರಿಂಟ್ ಮಾಡಿ ಅಂಟಿಸಿದ್ದಾರೆ. ಇದರಿಂದಾಗಿ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ರಸ್ತೆ ಗುಂಡಿಗಳನ್ನು ಮುಚ್ಚು ಕೆಲಸದಲ್ಲಿ ತೊಡಗಿದ್ದಾರೆ.

ಅಷ್ಟೇ ಅಲ್ಲ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನು ನೋಡಿದರೆ ಅಲ್ಲಿ ರಸ್ತೆಗಳು ಯಾವುದು ಗುಂಡಿಗಳು ಯಾವುದು ಅಂತ ಗೊತ್ತಾಗದಷ್ಟು ಗುಂಡಿಗಳು ಬಿದ್ದಿವೆ. ವಾಹನ ಸಂಚಾರ ಹಾಕಿರ್ಲಿ ಜನರು ನಡೆದುಕೊಂಡು ಹೋಗುವುದಕ್ಕೂ ಕೂಡ ಕಷ್ಟವಾಗುತ್ತಿದೆ ಹಾಗಾಗಿ ಜನರು ಅಧಿಕಾರಿಗಳಿಗೆ ಇನ್ನಿಲ್ಲದಷ್ಟು ಬೈಯುತ್ತಿದ್ದಾರೆ. ಇನ್ನು ಗಾಂಧಿನಗರ ದಿನೇಶ್ ಗುಂಡೂರಾವ್ ಅವರ ವಿಧಾನಸಭಾ ಕ್ಷೇತ್ರ ವಾಗಿದ್ದರೆ ಸಚಿವ ಅಶ್ವತ ನಾರಾಯಣ ಅವರ ಕ್ಷೇತ್ರ ಮಲ್ಲೇಶ್ವರಂ ಈ ಎರಡು ಕಡೆ ಇಂತಹ ಪೋಸ್ಟರ್ ಗಳನ್ನ ಅಳವಡಿಸಲಾಗಿದೆ ಹಾಗಾಗಿ ಸಚಿವರು ಗಮನಕ್ಕೆ ಈ ವಿಷಯ ಈಗಾಗಲೇ ತಲುಪಿದೆ.

ಇಂಥ ಪೋಸ್ಟರ್ ಗಳನ್ನ ನೋಡಿದ್ರೆ ನಿಜಕ್ಕೂ ಜನರಿಗೆ ಎಷೃ ತೊಂದರೆಯಾಗುತ್ತಿದೆ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚದೇ ಇರುವುದರಿಂದ ಎನ್ನುವುದು ಅರ್ಥವಾಗುತ್ತದೆ. ಜನರು ಖಂಡಿತವಾಗಿಯೂ ತಾಳ್ಮೆಗೆಟ್ಟು ಕುಳಿತಿದ್ದಾರೆ. ಒಟ್ಟಿನಲ್ಲಿ ಜನರು ತಮ್ಮದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದರೆ, ಅಧಿಕಾರಿಗಳು ಮಾತ್ರ ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುವುದೇ ಇಲ್ಲ ಅನ್ನೋದು ಈ ಒಂದು ಚಿಕ್ಕ ಘಟನೆಯಿಂದ ಸಾಬೀತಾಗಿದೆ.

Comments (0)
Add Comment