ಎರಡನೇ ಹೆಂಡತಿಗೆ ಮಗುವಾದರೂ ಕೂಡ ಮೊದಲನೇ ಹೆಂಡತಿಯ ನೆನಪಿನಲ್ಲಿ ನಿರ್ಮಾಪಕ ಏನು ಮಾಡಿದ್ದಾರೆ ಗೊತ್ತೇ?

ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಿರ್ಮಾಪಕ ಅಂತಲೇ ಖ್ಯಾತರಾಗಿರುವವರು ದಿಲ್ ರಾಜು.  ರಾಜು ಅವರಿಗೆ ಅವರ ನಿರ್ಮಾಣದ ದಿಲ್ ಸಿನಿಮಾದ ಹಿಟ್ ನಿಂದಾಗಿ ಅವರ ಹೆಸರು ಜೊತೆಗೆ ದಿಲ್ ಎನ್ನುವುದು ಕೂಡ ಅಂಟಿಕೊಂಡಿದೆ. ಇತ್ತೀಚಿಗೆ ಸಂತೋಷದ ಸುದ್ದಿ ಅಂದನ ದಿಲ್ಲ ರಾಜು ಹಂಚಿಕೊಂಡಿದ್ದರು ಅವರು ಎರಡನೇ ಪತ್ನಿ ಮೇಘ ರೆಡ್ಡಿ (ತೇಜಸ್ವಿನಿ) ಅವರಿಗೆ ಗಂಡು ಮಗು ಹುಟ್ಟಿತು. ವಿದೇಶದಲ್ಲಿದ್ದ ದಿಲ್ ರಾಜು ಹೈದರಾಬಾದಲ್ಲಿ ಮಗು ಹುಟ್ಟಿದೆ ಎಂದು ತಿಳಿದ ಕೂಡಲೇ ಓಡೋಡಿ ಬಂದಿದ್ರು.

ದಿಲ್ ರಾಜು ಅವರಿಗೆ ಇದೀಗ 51 ವರ್ಷ ವಯಸ್ಸು. ತಮ್ಮ 49ನೇ ವರ್ಷ ವಯಸ್ಸಿನಲ್ಲಿ ದಿಲ್ ರಾಜು ಅವರು ಎರಡನೇ ಮದುವೆಯಾಗಿದ್ದರು ಇವರಿಗೆ ಈಗ ಗಂಡು ಮಗು ಹುಟ್ಟಿದೆ. ತಮ್ಮ ಮಗನಿಗೆ ಅನ್ವಿ ರೆಡ್ಡಿ ಎಂದು ಹೆಸರನ್ನ ಇಟ್ಟಿದ್ದಾರೆ ದಿಲ್ ರಾಜು ಹಾಗೂ ತೇಜಸ್ವಿನಿ ಜೋಡಿ. ಅಂದಹಾಗೆ ಈ ಖುಷಿಯ ಸಂದರ್ಭದಲ್ಲಿ ತನ್ನ ಮೊದಲ ಹೆಂಡತಿಯನ್ನು ದಿಲ್ ರಾಜು ನೆನಪಿಸಿಕೊಂಡಿದ್ದಾರೆ. ದಿಲ್ ರಾಜು ಅವರ ಎಲ್ಲಾ ಕೆಲಸಗಳಲ್ಲಿಯೂ ಹೆಗಲಾಗಿದ್ದ ಅವರ ಮೊದಲ ಹೆಂಡತಿ ಅನಿತಾ ಅನಾರೋಗ್ಯದ ಕಾರಣದಿಂದ 2017ರಲ್ಲಿ ನಿ’ಧನರಾದರು.

ದಿಲ್ ರಾಜು ಅವರು ತಮ್ಮ ಮಗಳ ಒತ್ತಾಯದ ಮೇರೆಗೆ 2020ರಲ್ಲಿ ಎರಡನೇ ಮದುವೆಯನ್ನು ಆಗಿದ್ದರು. ದಿಲ್ ರಾಜು ಹಾಗೂ ಅವರ ಎರಡನೇ ಪತ್ನಿ ತೇಜಸ್ವಿನಿ ಅವರಿಗೆ ಈಗ ಗಂಡು ಮಗು ಜನನ ವಾಗಿದ್ದು ತನ್ನ ಮೊದಲನೆಯ ಹೆಂಡತಿ ಅನಿತಾ ಅವರ ನೆನಪಿನ ಅರ್ಥ ಮಗನಿಗೆ ಅನ್ವಯ ರೆಡ್ಡಿ ಎಂದು ಹೆಸರನ್ನ ಇಟ್ಟಿದ್ದಾರೆ.

ದಿಲ್ ರಾಜು ಅವರು 2020ರಲ್ಲಿ ಕೋವಿಡ್ ಸಂದರ್ಭದಲ್ಲಿ ಅತ್ಯಂತ ಸರಳವಾಗಿ ತೇಜಸ್ವಿನಿ ಅವರನ್ನು ಮದುವೆಯಾಗಿದ್ದರು. ತೇಜಸ್ವಿನಿ ಹಾಗೂ ರಾಜು ಅವರ ನಡುವೆ ಸುಮಾರು 20 ವರ್ಷ ವಯಸ್ಸಿನ ಅಂತರವಿದೆ. ಆದರೆ ತನ್ನ ಮೊದಲ ಪತ್ನಿ ತೀರಿಹೋದ ನಂತರ ಒಂಟಿಯಾಗಿ ದಿಲ್ ರಾಜು ಜೀವನ ನಡೆಸುತ್ತಿದ್ದರು. ಅವರ ಮಗಳು ಹರ್ಷಿತ ತಂದೆಯನ್ನು ಒಪ್ಪಿಸಿ ಕೊನೆಗೂ 2020ರಲ್ಲಿ ಇನ್ನೊಂದು ಮದುವೆಯನ್ನು ಮಾಡಿಸಿದ್ದಾರೆ.

ಇನ್ನು ದಿನರಾಜು ಅವರ ಪ್ರತಿ ಜೀವನದ ವಿಷಯಕ್ಕೆ ಬಂದರೆ, ಸುಮಾರು 50 ಸಿನಿಮಾ ಕು ಹೆಚ್ಚು ಸಿನಿಮಾಗಳನ್ನ ನಿರ್ಮಿಸಿದ ಖ್ಯಾತಿ ದಿಲ್ ರಾಜು ಅವರದ್ದು. ಬೊಮ್ಮರಿಲು, ಎವುಡು ಮಿಸ್ಟರ್ ಪರ್ಫೆಕ್ಟ್, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು, ಎಫ್ 2 ಎಫ್ 3 ಮೊದಲ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಿಸಿದ ಖ್ಯಾತಿ ಇವರದ್ದು. ಇದೀಗ ದಿಲ್ ರಾಜು ಅವರ ನಿರ್ಮಾಣದಲ್ಲಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಒಂದು ಸೆಟ್ಟೇಲಿದ್ದು ಈ ಸಿನಿಮಾದಲ್ಲಿ ರಾಮ್ ಚರಣ್ ಕಿಯಾರ ಅಡ್ವಾಣಿ ನಟಿಸುತ್ತಿದ್ದಾರೆ. ಜೊತೆಗೆ ದಳಪತಿ ವಿಜಯ್ ಹಾಗೂ ರಶ್ಮಿಕ ಮಂದಣ್ಣ ಜೋಡಿಯಾಗಿ ನಟಿಸುತ್ತಿರುವ ವಾರಿಸು ಸಿನಿಮಾವನ್ನು ಕೂಡ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ

Comments (0)
Add Comment