Kannada Film: ನಿರ್ಮಾಪಕ ಉಮಾಪತಿ ಇನ್ನು ಹಳೆಯದನ್ನು ಮರೆತಿಲ್ಲವೇ? ದರ್ಶನ್ ಗೆ ಉಮಾಪತಿಯಿಂದ ಮತ್ತೊಂದು ಶಾಕ್, ಹೀಗೆ ಮಾಡಬಾರದಿತ್ತು ಎನ್ನುತ್ತಿದೆ ಗಾಂಧಿನಗರ!

Kannada Film: ಒಂದು ಸಿನೆಮಾ ನಿರ್ಮಾಣವಾಗಬೇಕಾದರೆ ಕಲಾವಿದರು, ನಿರ್ದೇಶಕರು (Director), ಇತರ ತಂತ್ರಜ್ಞರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಿರ್ಮಾಪಕ (Producer) ಕೂಡ.  ಆತನು ಎಷ್ಟು ಬಂಡವಾಳ ಹಾಕುತ್ತಾನೆ ಎನ್ನುವ ಆಧಾರದ ಮೇಲೆ ಸಿನೆಮಾ ಅಷ್ಟು ಅದ್ಧೂರಿಯಾಗಿ ತಯಾರಾಗುತ್ತದೆ. ನಿರ್ಮಾಪಕನಾದವನು ನಿರ್ದೇಶಕನು ಹೇಳುವ ಕಥೆ (Story)ಯ ಆಧಾರದ ಮೇಲೆ ಬಂಡವಾಳ ಹೂಡುತ್ತಾನೆ. ಇದು ಸಂಪೂರ್ಣ ನಂಬಿಕೆಯ ಮೇಲೆ ನಿಂತಿದೆ. ಹಾಗಾಗಿ ಚಿತ್ರ ನಿರ್ಮಾಣ ಎನ್ನುವುದು ಒಂದು ಟೀಂ ವರ್ಕ್ (Team work) ಆಗಿದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ಮಾಪಕರಿದ್ದಾರೆ. ಉಮಾಪತಿ ಶ್ರೀನಿವಾಸ್ ಅವರು ಕೂಡ ಇಂತಹ ಅದ್ಧೂರಿ ಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.

Kannada Film: ನಿರ್ಮಾಪಕ ಉಮಾಪತಿ ಇನ್ನು ಹಳೆಯದನ್ನು ಮರೆತಿಲ್ಲವೇ? ದರ್ಶನ್ ಗೆ ಉಮಾಪತಿಯಿಂದ ಮತ್ತೊಂದು ಶಾಕ್, ಹೀಗೆ ಮಾಡಬಾರದಿತ್ತು ಎನ್ನುತ್ತಿದೆ ಗಾಂಧಿನಗರ! https://sihikahinews.com/amp/producer-umapati-cold-war-against-darshan-it-is-true/

ಡಿ ಬಾಸ್ (D Boss), ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಸ್ಯಾಂಡಲ್ ವುಡ್ (Sandalwood) ನ ಬಹುಬೇಡಿಕೆಯ ನಟರು. ಇವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ವರ್ಷಾನುಗಟ್ಟಲೇ ಕಾಯುತ್ತಾರೆ. ಇವರು ನಟಿಸಿದರೆ ನಮ್ಮ ಸಿನೆಮಾ ಹಿಟ್ ಆದ ಹಾಗೆ ಎನ್ನುವುದು ಅವರ ಭಾವನೆ. ದರ್ಶನ್ ಅವರು ಸಹ ನಿರ್ಮಾಪಕರನ್ನು ತುಂಬಾ ಗೌರವಿಸುತ್ತಾರೆ. ಅನ್ನದಾತರು ಎಂದೇ ಕರೆಯುತ್ತಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ನೇಹಿತರಾಗಿದ್ದರು. ಈ ಸ್ನೇಹಕ್ಕಾಗಿಯೇ ಅವರು ರಾಬರ್ಟ್ ಎನ್ನುವ ಸಿನೆಮಾ ಮಾಡಿದರು. ಈ ಸಿನೆಮಾ ದೊಡ್ಡ ಮಟ್ಟದ ಹಿಟ್ ಆಯಿತು. ಈ ಸಿನೆಮಾ ನಂತರ ಡಿ ಬಾಸ್ ಹಾಗೂ ಉಮಾಪತಿ (Umapati) ನಡುವೆ ಯಾವುದೋ ವಿಚಾರಕ್ಕೆ ಅಸಮಾಧಾನ ಮೂಡಿದೆ. ಇದನ್ನು ಉಮಾಪತಿಯವರು ಪರೋಕ್ಷವಾಗಿ ಹೊರಹಾಕಿದ್ದರು. ಉಮಾಪತಿಯವರು ರಾಬರ್ಟ್ ಸಿನೆಮಾ ನಂತರ ದರ್ಶನ್ ಅವರ ಜೊತೆ ಸಿಂದೂರ ಲಕ್ಷ್ಮಣ ಸಿನೆಮಾ ಮಾಡಬೇಕಾಗಿತ್ತು. ಆದರೆ ಈ ಸಿನೆಮಾದಲ್ಲಿ ಬೇರೊಬ್ಬ ಕಲಾವಿದರು ನಟಿಸುತ್ತಿದ್ದಾರೆ ಎನ್ನುವ ಗುಸುಗುಸು ಗಾಂಧಿನಗರದಲ್ಲಿ ಜೋರಾಗಿ ಹರಡಿದೆ.

ಸಿಂಧೂರ ಲಕ್ಷ್ಮಣ (sindoora lakshana) ಎನ್ನುವುದು ಉತ್ತರ ಕರ್ನಾಟಕ (North Kanrnataka) ಭಾಗದಲ್ಲಿ ದೊಡ್ಡ ಹೆಸರು. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದವನು. ಇಂತಹ ಅಪ್ರತಿಮ ಹೋರಾಟಗಾರನ ಜೀವನ ಚರಿತ್ರೆಯನ್ನು ಈಗ ಸಿನೆಮಾ ಮಾಡಲಾಗುತ್ತಿದೆ. ವೀರ ಸಿಂದೂರ ಲಕ್ಷ್ಮಣನ ಪಾತ್ರದಲ್ಲಿ ಡಿ ಬಾಸ್ ದರ್ಶನ್ ಅವರು ಅಭಿನಯಿಸಬೇಕಾಗಿತ್ತು. ಇದೀಗ ಅವರು ನಟಿಸುತ್ತಿಲ್ಲ. ದರ್ಶನ್ ಅವರ ಬದಲಿಗೆ ಡಾಲಿ ಧನಂಜಯ ಅವರು ನಟಿಸುತ್ತಾರೆ ಎನ್ನುವ ಗುಲ್ಲು ಜೋರಾಗಿ ಹರಡಿದೆ. ಈ ಕುರಿತು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:Kerala: ಕೇರಳದಿಂದ ಸೈನಿಕರ ಕೈ ಸೇರಿತ್ತು ಆ ಪತ್ರ; ಆ ಪತ್ರದಲ್ಲೇನಿತ್ತು? ಅದನ್ನ ನೋಡಿ ಸೈನಿಕರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಅಬ್ಬಾ ಇಂಥವರೂ ಇರ್ತಾರಾ?

ಈ ಸಿನೆಮಾದಲ್ಲಿ ಯಾರು ಅಭಿನಯಿಸುತ್ತಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನನ್ನ ತಲೆಯಲ್ಲಿ ಒಬ್ಬರು ನಟರಿದ್ದಾರೆ. ಅವರ ಜೊತೆ ಮಾತನಾಡಿ ಅವರಿಗೆ ಅಡ್ವಾನ್ಸ್ ನೀಡಿದ ಮೇಲೆ ನಿಮಗೆ ತಿಳಿಸುತ್ತೇನೆ. ಮುಂದಿವ ವರ್ಷ ಫೆಬ್ರವರಿಯಿಂದ ಈ ಸಿನೆಮಾ ಶೂಟಿಂಗ್ ಶುರುವಾಗಲಿದೆ ಎಂದು ಹೇಳಿದ್ದಾರೆ. ಅಲ್ಲಿಗೆ ಈ ಸಿನೆಮಾದಲ್ಲಿ ದರ್ಶನ್ ಅವರು ನಟಿಸುವುದಿಲ್ಲ ಎನ್ನುವುದು ಬಹುತೇಕ ಪಕ್ಕಾ ಆದಂತೆ ಆಗಿದೆ.

DarshanKannada FilmProducerUmapatiಕನ್ನಡ ಸಿನಿಮಾದರ್ಶನ್