Property Rules: ದಾನವಾಗಿ ನೀಡಿರುವಂತಹ ಪ್ರಾಪರ್ಟಿಯನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಬಂತು ನೋಡಿ ಹೊಸ ನಿಯಮ?!

Property Rules: ಹಿಂದಿನ ಕಾಲದಲ್ಲಿ ನೀವೆಲ್ಲ ರಾಜ ಮನೆತನ ಅಥವಾ ಜಮೀನ್ದಾರಿಕೆ ಪದ್ಧತಿ ಇದ್ದ ಸಂದರ್ಭದಲ್ಲಿ ಗಮನಿಸಬಹುದಾಗಿದೆ ಬಹುಮಾನದ ರೂಪದಲ್ಲಿ ಅಥವಾ ಉಡುಗೊರೆಯ ರೂಪದಲ್ಲಿ ಹೆಚ್ಚಾಗಿ ಆಸ್ತಿಯನ್ನು ಉಡುಗೊರೆ ರೂಪದಲ್ಲಿ ದಾನವಾಗಿ ನೀಡುವಂತಹ ಅಭ್ಯಾಸ ಇತ್ತು. ಹಾಗಿದ್ರೆ ಬನ್ನಿ ದಾನವಾಗಿ ನೀಡಿರುವಂತಹ ಆಸ್ತಿಯ ಬಗ್ಗೆ ಇರುವಂತಹ ಕಾನೂನಾತ್ಮಕ ನಿಯಮಗಳು ಏನು ಹಾಗೂ ಇನ್ನಿತರ ವಿಚಾರಗಳನ್ನು ಕೂಡ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ದಾನ ಪತ್ರ ಹಾಗೂ ಅದರ ನಿಯಮಾವಳಿಗಳು!

ಒಬ್ಬ ತನ್ನ ಹೆಸರಿನಲ್ಲಿರುವಂತಹ ಚರ ಅಥವಾ ಸ್ಥಿರ ಆಸ್ತಿಗೆ ಸಂಪೂರ್ಣವಾಗಿ ಹಕ್ಕುದಾರನಾಗಿದ್ದರೆ ಮಾತ್ರ ಆತ ಅದನ್ನ ದಾನವಾಗಿ ನೀಡುವಂತಹ ಅಧಿಕಾರವನ್ನು ಹೊಂದಿರುತ್ತಾನೆ. ಇನ್ನು ಯಾವುದೇ ರೀತಿಯ ದಾನವನ್ನು ಆತ ಮಾಡೋಕಿಂತ ಮುಂಚೆ ಅದನ್ನ ರಿಜಿಸ್ಟರ್ ಮಾಡಿಸಿ ನಂತರ ದಾನ ಮಾಡಿದರೆ ಮಾತ್ರ ಅದಕ್ಕೆ ಲಿಖಿತ ರೂಪದ ದೃಢೀಕರಣ ಸಿಗುತ್ತದೆ ಎಂದು ಹೇಳಬಹುದಾಗಿದೆ.

ಇನ್ನು ಈ ರೀತಿ ದಾನವಾಗಿ ನೀಡುವಂತಹ ಪ್ರಾಪರ್ಟಿಯ ಪತ್ರಗಳ ಮೇಲೆ ಪಡೆದುಕೊಳ್ಳುವ ಹಾಗೂ ನೀಡುವವನ ಇಬ್ಬರ ಸಮ್ಮತಿಯ ಸಹಿ ಕೂಡ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ಕೂಡ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ಒಂದು ವೇಳೆ ಉಡುಗೊರೆ ನೀಡುವವನು ಒಪ್ಪಿ ಪಡೆದುಕೊಳ್ಳುವವನು ಒಪ್ಪದೆ ಹೋದರೆ ಅದರ ಮೇಲೆ ಕೂಡ ಯಾವುದೇ ರೀತಿಯ ಮಾನ್ಯತೆ ಇರೋದಿಲ್ಲ ಅನ್ನುವುದಾಗಿ ಗಿಫ್ಟ್ ಡೀಡ್ ನಿಯಮ ಹೇಳುತ್ತದೆ. ಹೀಗಾಗಿ ಈ ಲಿಖಿತಪತ್ರದ ದೃಢೀಕರಣ ಮಾಡೋದಕ್ಕಿಂತ ಮುಂಚೆ ಇಬ್ಬರ ಒಪ್ಪಿಗೆ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

ದಾನ ಪತ್ರದ ಕಂಡೀಶನ್ ಗಳು!

  • ಒಂದು ವೇಳೆ ಅಪರಾಧದ ಮೂಲಕ ದಾನ ಪತ್ರವನ್ನು ಮಾಡಿಸಿದ್ದೀರಿ ಎಂದಾದರೆ ಹಾಗೂ ಅದನ್ನು ಸಾಬೀತುಪಡಿಸಿದರೆ ಆ ದಾನ ಪತ್ರವನ್ನು ಕ್ಯಾನ್ಸಲ್ ಮಾಡಬಹುದಾದ ಅವಕಾಶವನ್ನ ಕಾನೂನು ನಿಯಮಗಳ ಅಡಿಯಲ್ಲಿ ನೀಡಲಾಗಿದೆ.
  • ಇನ್ನು ದಾನ ಮಾಡಿರುವಂತಹ ವ್ಯಕ್ತಿಯ ಆಸ್ತಿ ಅನ್ನೋದು ಕೇವಲ ಆತನ ಆಸ್ತಿ ಆಗಿರದೆ ಪಿತ್ರಾರ್ಜಿತ ಆಸ್ತಿಯಾಗಿ ಕುಟುಂಬದ ಆಸ್ತಿ ಕೂಡ ಆಗಿದ್ದರೆ ಆ ಸಂದರ್ಭದಲ್ಲಿ ಅಲ್ಲಿ ಕೂಡ ಸಮಸ್ಯೆ ಕಂಡು ಬರುತ್ತದೆ.
  • ಒಂದು ವೇಳೆ ದಾನ ನೀಡಿರುವಂತಹ ಆಸ್ತಿಯನ್ನು ಸರಿಯಾದ ಕಾರಣಗಳಿಗೆ ನೀಡದೆ ಹೋದಲ್ಲಿ ಅದನ್ನ ಮರಳಿ ಪಡೆಯುವುದಕ್ಕೆ ಯಾವುದೇ ಅವಕಾಶವಿಲ್ಲ.

ವಯೋವೃದ್ಧರ ವಿಚಾರದಲ್ಲಿ ಈ ಬಗ್ಗೆ ವಿಶೇಷವಾದ ನಿಯಮವನ್ನ ಜಾರಿಗೆ ತರಲಾಗಿದ್ದು 2007 ರ ನಿಯಮದ ಪ್ರಕಾರ ವಯಸ್ಕರ ಹಿತಾಸಕ್ತಿಯ ರಕ್ಷಣೆಗಾಗಿ ಅವರು ಬೇರೆಯವರಿಗೆ ಅಂದರೆ ಮಕ್ಕಳಿಗೆ ಗಿಫ್ಟ್ ರೂಪದಲ್ಲಿ ಆಸ್ತಿಯನ್ನು ನೀಡಿರಬಹುದು ಹಾಗೂ ವಯಸ್ಸಾದ ನಂತರ ಅವರ ಮಕ್ಕಳು ಅವರನ್ನು ಸರಿಯಾಗಿ ನೋಡಿಕೊಳ್ಳದೆ ಹೋದಲ್ಲಿ ಅದನ್ನ ವಾಪಸ್ ಪಡೆದುಕೊಳ್ಳುವಂತಹ ಅವಕಾಶವನ್ನು ಅವರು ಕಾನೂನು ನೆಲೆಯಲ್ಲಿ ಪಡೆದುಕೊಂಡಿದ್ದಾರೆ.

Property Rules