Cocktail kannada Film Released: ರಿಲೀಸ್ ಆಯ್ತು ಕಿಕ್ ಕೊಡೋ ‘ಕಾಕ್ಟೇಲ್’ ಸಿನಿಮಾ! ಸಿನಿಮಾ ನೋಡದೆ ಇದ್ರೆ ದೊಡ್ಡ ಲಾಸ್ ಎಂದ ಸಿನಿ ಪ್ರಿಯರು!

Cocktail kannada Film Released: ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ (Kannada Film Industry)  ಹೊಸ ಹೊಸ ಸಿನಿಮಾಗಳಿಗೆ ಹಾಗೂ ಹೊಸ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಹಾಗಾಗಿ ಇಂದು ಅದೆಷ್ಟೋ ಜನ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿದ್ದಾರೆ. ಚಂದನವನದಲ್ಲಿ ಹೊಸದೊಂದು ಪ್ರಯೋಗದ ಮೂಲಕ ಗೆದ್ದಿರುವ ಸಿನಿಮಾ ತಂಡ ಕಾಕ್ಟೇಲ್ (Cocktail).

ಹೌದು ಶಿವಪ್ಪ (Shivappa) ನಿರ್ಮಾಣದ ಶ್ರೀರಾಮ್ (Shriram)ಆಕ್ಷನ್ ಕಟ್ ಹೇಳಿರುವ ಕಾಕ್ಟೇಲ್ ಸಿನಿಮಾ ನಿನ್ನೆಯಷ್ಟೇ ರಾಜ್ಯಾದ್ಯಂತ ತೆರೆ ಕಂಡಿದೆ ಬಿಡುಗಡೆಯಾಗಿ ಮೊದಲ ದಿನವೇ ಅತ್ಯುತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಸಿನಿಮಾದ ಪ್ರತಿಯೊಂದು ಫ್ರೇಮ್ ನಲ್ಲಿ ಸಿನಿಮಾ ತಂಡದ ಪರಿಶ್ರಮ ಕಾಣಿಸುತ್ತೆ ಅಂತ ಸಿನಿಮಾ ನೋಡಿದ ಜನ ಅಭಿಪ್ರಾಯಪಟ್ಟಿದ್ದಾರೆ.

ಕಾಕ್ಟೇಲ್ ಸಿನಿಮಾದಲ್ಲಿ ಏನಿದೆ?

ಇದೊಂದು ಮಿಸ್ತ್ರಿ ಥ್ರಿಲ್ಲಿಂಗ್ ಸ್ಟೋರಿ ಹೊಂದಿರುವ ಸಿನಿಮಾ. ಕೊಲೆಯ ಸುತ್ತ ನಡೆಯುವ ಹುನ್ನಾರ, ಸಸ್ಪೆನ್ಸ್ ಕೊನೆಯಲ್ಲಿ ರಿವೀಲ್ ಆಗುವ ಹೀರೋನ ಮತ್ತೊಂದು ಮುಖ ಇವೆಲ್ಲವೂ ಇವೆಲ್ಲವೂ ಒಂದಕ್ಕೊಂದು ಸರಪಣಿಯಂತೆ ಹೆಣೆದುಕೊಂಡಿದೆ. ಇನ್ನು ಕಾಮಿಡಿ ಮುಖದ ಹಿಂದಿರುವ ವಿಲನ್, ಅದರಲ್ಲಿ ಅಡಗಿರುವ ಒಂದು ಸತ್ಯ ಇವೆಲ್ಲವೂ ಜನರನ್ನ ರೋಮಾಂಚನಗೊಳಿಸುತ್ತದೆ.

ಚಿತ್ರಮಂದಿರಗಳ ಹೆಸರು

ಕಾಕ್ಟೇಲ್  ಸಿನಿಮಾ ಒಂದು ಕಲೆಯ ಮಿಶ್ರಣ ಇಲ್ಲಿ ಬಹುಶಃ ನೀವು ನವರಸದ ಕಂಪು ಕಾಣಬಹುದು. ಅದರಲ್ಲೂ ಮೊದಲ ಬಾರಿಗೆ ನಾಯಕ ನಟನಾಗಿ ವೀರೇನ್ ಶಿವನ್ (Viren Shivan) ಅಭಿನಯಿಸಿದ್ರೆ ಚರಿಷ್ಮ (Charishma) ಮೊದಲ ಬಾರಿಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾದ ಉದ್ದಕ್ಕೂ ಸ್ವಲ್ಪವೂ ಲೋಪದೋಷ ಇಲ್ಲದಂತೆ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿರುವ ಈ ಇಬ್ಬರು ಕಲಾವಿದರು ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ಎಂದು ಅನ್ನಿಸುವುದಿಲ್ಲ ಆತ ಒಬ್ಬ ಅನುಭವಿ ಕಲಾವಿದ ಅಂತ ಫೀಲ್ ಆಗುತ್ತೆ ಎಂದು ಸಿನಿಮ ನೋಡಿದವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಶೋಭಾ ರಾಜ್ ಅವರ ನಟನೆಯ ಬಗ್ಗೆ ಅಂತೂ ಮಾತೆ ಇಲ್ಲ. ಎಂದಿನಂತೆ ಉತ್ತಮವಾಗಿ ಪಾತ್ರ ನಿಭಾಯಿಸಿದ್ದಾರೆ.

ಕಾಕ್ಟೇಲ್ ಸಿನಿಮಾದ ಅಭಿನಯಕ್ಕೆ ವೀರೇಂದ್ರ ಶಿವನ್ ಅವರಿಗೆ ಫೂಲ್ ಮಾರ್ಕ್ ಸಿಕ್ಕಿದೆ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಉದಯೋನ್ಮುಖ ನಟ ಎನ್ನುವ ಪ್ರಶಸ್ತಿ ಕೂಡ ಲಭಿಸಿದೆ. ವೀರೇನ್ ಶಿವನ್ ಅವರು ಮೊದಲ ಸಿನಿಮಾದಲ್ಲಿಯೇ ಗೆದ್ದಿದ್ದಾರೆ ಈ ಬಗ್ಗೆ ಮಾತನಾಡಿದ ಅವರು, ‘ಫಸ್ಟ್ ಡೇ ಫಸ್ಟ್ ಶೋ ಅಭಿಮಾನಿಗಳ ಜೊತೆ ಕುಳಿತುಕೊಂಡು ನೋಡುವುದಕ್ಕೆ ಖುಷಿ ಇನ್ನಿಷ್ಟು ಸಿನಿಮಾದ ಆರಂಭದಿಂದ ಕೊನೆಯ ವರೆಗೆ ಸಿಳ್ಳೆಯ ಸೌಂಡ್ ಕಿವಿಗೆ ಅಪ್ಪಳಿಸುತ್ತಿತ್ತು. ನಾನು ಯಾವಾಗಲೂ ಹೇಳುವ ಹಾಗೆ ಕಾಕ್ಟೇಲ್ ನ ಕಿಕ್ ಹೊಸ ವರ್ಷ ಮುಗಿಸಿ ಮರುದಿನದವರೆಗೆ ಇರುತ್ತೆ ಅಷ್ಟೇ ಆದರೆ ಅದರಿಂದ ಹೆಲ್ತ್ ಹಾಳಾಗುತ್ತೆ. ಆದರೆ ಕೊಪ್ಟೆಲ್ಲ ಸಿನಿಮಾ ನೋಡಿದ್ರೆ ಹೆಲ್ತ್ ಹಾಳಾಗಲ್ಲ ಆದರೆ ಯಾವಾಗಲೂ ಹಾಗೆ ಇರುತ್ತೆ’ ನಿಮಗೂ ಈ ತರಹದ ಒಂದು ಕಿಕ್ ಬೇಕಾ ಹಾಗಾದ್ರೆ ತಪ್ಪದೇ ಈಗಲೇ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಕಾಕ್ಟೇಲ್ ಸಿನಿಮಾವನ್ನು ನೋಡಿ

CharishmaCockTail FilmKannada FilmNew FilmVveeren Shivanಕಾಕ್ಟೇಲ್ ಸಿನಿಮಾ