Rashmika Mandanna:ನಟಿ ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಪ್ಯಾನ್ ಇಂಡಿಯಾ ಹೀರೋಯಿನ್ ಎನ್ನುವ ಹೆಸರು ತಂದುಕೊಟ್ಟಿದ್ದು ಪುಷ್ಪ ಸಿನಿಮಾ. ಈ ಸಿನಿಮಾ ನಂತರ ರಶ್ಮಿಕಾ ಅವರ ಕ್ರೇಜ್ ಬದಲಾಗಿ, ತೆಲುಗು ತಮಿಳು ಹಿಂದಿ ಎಂದು ಎಲ್ಲಾ ಭಾಷೆಯಲ್ಲೂ ಹೆಚ್ಚು ಹೆಚ್ಚು ಅವಕಾಶ ಪಡೆದುಕೊಂಡರು. ರಶ್ಮಿಕಾ ಅವರು ಈ ವರ್ಷ ನಟ ದಳಪತಿ ವಿಜಯ್ ಅವರೊಡನೆ ವಾರಿಸು ಸಿನಿಮಾದಲ್ಲಿ ನಟಿಸಿದರು. ಈ ವರ್ಷ ಪೊಂಗಲ್ ಹಬ್ಬಕ್ಕೆ ವಾರಿಸು ಸಿನಿಮಾ ಬಿಡುಗಡೆ ಆಯಿತು.
ಸಿನಿಮಾ ಹಿಟ್ ಲಿಸ್ಟ್ ಗೆ ಸೇರಿತು. ಸಿನಿಮಾ ಖುಷಿಯಲ್ಲಿದ್ದಾರೆ ರಶ್ಮಿಕಾ, ಇದರ ನಡುವೆ ರಶ್ಮಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ Rush Hour ಎಂದು ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಉತ್ತರಿಸಿದರು, ಆಗ ಅಭಿಮಾನಿಯೊಬ್ಬರು ವಾರಿಸು ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ತಮಾಷೆಯ ಘಟನೆಯೊಂದನ್ನು ಶೇರ್ ಮಾಡಿ ಎಂದು ಕೇಳಿದ್ದರು. ಅದಕ್ಕೆ ರಶ್ಮಿಕಾ ಅವರು ಸೆಟ್ ನಲ್ಲಿ ತಾವು ಪದೇ ಪದೇ ಮೂರ್ಛೆ ಹೋಗುತ್ತಿದ್ದ ಘಟನೆಯ ಬಗ್ಗೆ ತಿಳಿಸಿದ್ದಾರೆ..
ವಾರಿಸು ಸಿನಿಮಾ ಸೆಟ್ ನಲ್ಲಿ ನಾನು ಪದೇ ಪದೇ ಮೂರ್ಚೆ ಹೋಗುತ್ತಿದ್ದೆ, ಆಗ ವಂಶಿ ಸರ್ ನನ್ನ ಫೋಟೋ ತೆಗೆದು, ಅದನ್ನು ವಿಜಯ್ ಸರ್ ಗೆ ತೋರಿಸುತ್ತಿದ್ದರು, ಆಗ ಇಬ್ಬರು ನನ್ನ ಬಗ್ಗೆ ತಮಾಷೆ ಮಾಡುತ್ತಿದ್ದರು.. ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ವೈರಲ್ ಆಗಿದೆ. ವಾರಿಸು ಸಿನಿಮಾದಲ್ಲಿ ರಶ್ಮಿಕಾ ಅವರು ತಮ್ಮ ಚೈಲ್ಡ್ ಹುಡ್ ಕ್ರಶ್ ವಿಜಯ್ ಅವರೊಡನೆ ನಟಿಸಲು ಬಹಳ ಎಕ್ಸೈಟ್ ಆಗಿದ್ದರು. ಈಗ ರಶ್ಮಿಕಾ ಅವರು ಬಾಲಿವುಡ್ ನಲ್ಲಿ ಅನಿಮಲ್ ಹಾಗೂ ತೆಲುಗಿನಲ್ಲಿ ಪುಷ್ಪ2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.