Ration Card: ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ವಿಚಾರವನ್ನು ಪ್ರಮುಖವಾಗಿ ತಿಳಿದುಕೊಳ್ಳಿ!

Ration Card: ಕಳೆದ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದಕ್ಕಿಂತ ಮುಂಚೆ ಕೊನೆಯ ಬಾರಿಗೆ ರೇಷನ್ ಕಾರ್ಡ್ ವಿಚಾರಣೆಯನ್ನು ಮಾಡಲಾಗಿತ್ತು ಎನ್ನುವುದು ನಿಮಗೆ ತಿಳಿದಿದೆ. ಅದಾದ ನಂತರ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಹಾಗೂ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವಂತಹ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ಎಂದರು ಕೂಡ ತಪ್ಪಾಗಲಾರದು. ಈಗ ನಿಮಗೆ ahara.kar.nic.in ಅಧಿಕೃತ ವೆಬ್ಸೈಟ್ನಲ್ಲಿ ಹೋಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಅವಕಾಶ ನೀಡಲಾಗುತ್ತಿದೆ. ಒಂದು ವೇಳೆ ನಿಮ್ಮ ಹೆಸರು ರೇಷನ್ ಕಾರ್ಡ್ ನಲ್ಲಿ ಇಲ್ಲದೆ ಹೋದರು ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸುವ ಎನ್ನುವಂತಹ ಪ್ರಕ್ರಿಯೆ ಬಗ್ಗೆ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಪಡೆಯುವುದು ಹೇಗೆ ಅನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು!

  • ಆಧಾರ್ ಕಾರ್ಡ್ ಹಾಗೂ ಇತ್ತೀಚಿನ ಪಾಸ್ಪೋರ್ಟ್ ಸೈಜ್ನ ಫೋಟೋ.
  • ವೋಟರ್ ಐಡಿ ಜೊತೆಗೆ ನಿಮ್ಮ ಮೊಬೈಲ್ ನಂಬರ್ ಬೇಕಾಗಿರುತ್ತದೆ. ಅದು ಕೂಡ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರನ್ನು ನೀಡಬೇಕಾಗಿರುತ್ತದೆ.

kar.nic.in ವೆಬ್ ಸೈಟ್ ನಲ್ಲಿ ನೀವು ಈ ಮೇಲೆ ಹೇಳಿರುವಂತಹ ಡಾಕ್ಯುಮೆಂಟ್ಸ್ ಗಳನ್ನು ಹೊಂದಿದ್ದರೆ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲಿ ಕಾಣಿಸಿಕೊಳ್ಳುವಂತಹ ಇ- ಸೇವೆಗಳು ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ನಿಮ್ಮ ಅರ್ಹತೆಗೆ ಅನುಗುಣವಾಗಿ ಅಂದರೆ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ ನಂತರ ಸ್ಕ್ರಾಲ್ ಮಾಡಿದ ಮೇಲೆ ಅರ್ಜಿ ಸಲ್ಲಿಸುವ ಲಿಂಕ್ಸ್ ಸಿಗುತ್ತದೆ ಹಾಗೂ ಅಲ್ಲಿ ಭಾಷೆಯನ್ನು ಆಯ್ಕೆ ಮಾಡಿ ಕೇಳಿದಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಿಸಬೇಕಾಗುತ್ತದೆ.

ಅಲ್ಲಿ ಕೇಳಲಾಗುವ ರೀತಿಯಲ್ಲಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ನಿಮ್ಮ ಅರ್ಹತೆಗೆ ಅನುಗುಣವಾಗಿ ಅಂದರೆ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಆಯ್ಕೆ ಮಾಡಿದ ನಂತರ ದಾಖಲೆಗಳನ್ನು ಸಾಫ್ಟ್ ಕಾಪಿ ಮೂಲಕ ಅಟ್ಯಾಚ್ ಮಾಡಿ ಪ್ರಿಂಟ್ ಔಟ್ ಪಡೆದುಕೊಳ್ಳಿ. ಈ ಮೂಲಕ ನೀವು ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದಂತಾಗುತ್ತದೆ.

ಮುಂದಿನ ಕೆಲವು ಸಮಯಗಳಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ ಅಂತಹ ಅರ್ಜಿದಾರರ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡಲಿದೆ ಎಂಬುದಾಗಿ ರಾಜ್ಯ ಆಹಾರ ಇಲಾಖೆ ಸಚಿವರು ಈ ಹಿಂದೆ ಅಷ್ಟೇ ಹೇಳಿಕೆಯನ್ನು ನೀಡಿರುವುದನ್ನು ನೀವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Ration Card