Ration Card: ರೇಷನ್ ಕಾರ್ಡ್ ಬಗ್ಗೆ ಗುಡ್ ನ್ಯೂಸ್ ನೀಡಿದ ಸರ್ಕಾರ! ಜೂನ್ ನಿಂದ ಪ್ರಾರಂಭವಾಗಲಿದೆ ರೇಷನ್ ಕಾರ್ಡ್ ವಿತರಣೆ!

Ration Card: ನಾಗರಿಕ ಆಹಾರ ಸರಬರಾಜು ಇಲಾಖೆ, ಕೊನೆಗೂ ಒಂದುವರೆ ವರ್ಷಗಳಿಂದ ಸ್ಥಗಿತಗೊಳಿಸಿದ್ದ ಹೊಸ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಜೂನ್ ನಿಂದ ಪ್ರಾರಂಭ ಮಾಡುವಂತಹ ಸೂಚನೆಯನ್ನು ನೀಡಿದೆ. ಹೊಸ ಎಪಿಎಲ್ ಕಾರ್ಡ್ ಅನ್ನು ವಿತರಣೆ ಮಾಡುವಂತಹ ಕೆಲಸವನ್ನು ಜೂನ್ ತಿಂಗಳಿಂದ ಪ್ರಾರಂಭಿಸುವಂತಹ ಆದೇಶವನ್ನು ಈಗಾಗಲೇ ನೀಡಲಾಗಿದೆ. ಇನ್ನು ಜೂನ್ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಆಹ್ವಾನವನ್ನು ಕೂಡ ನೀಡಲಾಗಿದೆ. ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವಂತಹ ವೆಬ್ಸೈಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಚುನಾವಣಾ ಫಲಿತಾಂಶ ಬಂದ ಒಂದೇ ವಾರದಲ್ಲಿ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಕಳೆದ ಸಾಕಷ್ಟು ಸಮಯಗಳಿಂದ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಸ್ಥಗಿತಗೊಂಡಿತ್ತು !

ಕಳೆದ ವರ್ಷದ ಮೇ ತಿಂಗಳಿನಿಂದ ಆರಂಭಗೊಂಡು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಆಗಸ್ಟ್ ಹಳೆಯ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿದು ಹೊಸ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆನ್ಲೈನ್ ಮೂಲಕ ಕೂಡ ಎಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ಬಂದ್ ಮಾಡಲಾಗಿತ್ತು. ಅಧಿಕಾರಕ್ಕೆ ಬಂದಂತಹ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ಮೇಲೆ ಗೃಹಲಕ್ಷ್ಮಿ ಗೃಹಜೋತಿ ಹಾಗೂ ಅನ್ನಭಾಗ್ಯಗಳಂತಹ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಬಹುತೇಕ ಯೋಜನೆಗಳಿಗೆ ರೇಷನ್ ಕಾರ್ಡ್ ಪ್ರಮುಖ ದಾಖಲೆ ಪತ್ರ ಆಗಿದ್ದ ಕಾರಣದಿಂದಾಗಿ ಮಾಡಿಸಿಕೊಳ್ಳಲು ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಆದರೆ ಈ ಕಡೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ಕೂಡ ತೆಗೆದು ಗೊಳಿಸಲಾಗಿತ್ತು. ಆದರೆ ಈಗ ಜೂನ್ ತಿಂಗಳಲ್ಲಿ ಅಂದರೆ ಒಂದುವರೆ ವರ್ಷಗಳ ನಂತರ ಮತ್ತೆ ಈ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದೆ.

ಚುನಾವಣೆ ನಂತರ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್!

ಜೂನ್ ನಾಲ್ಕನೇ ತಾರೀಕಿನಂದು ಚುನಾವಣೆ ಫಲಿತಾಂಶ ಹೊರಗೆ ಬರುತ್ತದೆ ಹಾಗೂ ಮಾರನೇ ದಿನ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತದೆ. ಇದಾದ ಒಂದು ವಾರಕ್ಕೆ ಮತ್ತೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಲಾಗುತ್ತದೆ. ಈಗಾಗಲೇ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರ ರೇಷನ್ ಕಾರ್ಡ್ ಅನ್ನು ಅವರಿಗೆ ತಲುಪಿಸುವಂತಹ ಕೆಲಸವನ್ನು ಕೂಡ ಮಾಡಲಾಗುವುದು. ಈ ಮಧ್ಯ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸುವ ಕಾರಣಕ್ಕಾಗಿ ಸಾಕಷ್ಟು ಗ್ರಾಹಕರಿಗೆ ಅವಕಾಶ ಮಾಡಿಕೊಳ್ಳಲಾಗುತ್ತಿತ್ತು ಆದರೆ ಸರ್ವ ಸಮಸ್ಯೆಯಿಂದ ಇದು ಕೂಡ ಸಂಪೂರ್ಣವಾಗಿ ನಡೆಯುತ್ತಿಲ್ಲ.

ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಯಾವ ರೀತಿಯಲ್ಲಿ ಇದೆ ಅನ್ನೋದನ್ನ ತಿಳಿದುಕೊಳ್ಳಲು ನೀವು ಅಧಿಕೃತ ವೆಬ್ಸೈಟ್ ಆಗಿರುವ https://ahara.kar.nic.in/WebForms/Show_RationCard.aspx ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Ration Card