Team India: ಭಾರತದ ಪಿಚ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಆಸ್ಟ್ರೇಲಿಯಾ ಆಟಗಾರ. ಒಂದೇ ಮಾತಿನಲ್ಲಿ ರವಿಚಂದ್ರನ್ ಅಶ್ವಿನಿ ಹೇಳಿದ್ದೇನು ಗೊತ್ತೇ??

Team India: ಆಸ್ಟ್ರೇಲಿಯನ್ ಪ್ಲೇಯರ್ಸ್ (Australian Players) ಮೈಂಡ್ ಗೇಮ್ (Mind Game) ಆಡುತ್ತಾರೆ ಅದೇ ಅವರಿಗೆ ಬಹಳ ಪ್ರೀತಿ ಅಂತ ಖಡಕ್ ಆಗಿ ಆರ್ ಅಶ್ವಿನಿ ಹೇಳಿಕೆ ನೀಡಿದ್ದಾರೆ. ಇದೇ ಬರುವ ಫೆಬ್ರುವರಿ 9 ರಿಂದ ಬಾರ್ಡರ್ -ಗವಾಸ್ಕರ್ (border gavaskar trophy) ಟೆಸ್ಟ್ ಸರಣಿ ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ನಡುವೆ ನಡೆಯಲಿದೆ. ಇದೀಗ ಹೆಚ್ಚು ನಿರೀಕ್ಷೆ ಇರುವ ಈ ಟೆಸ್ಟ್ ಸರಣಿಯ ಬಗ್ಗೆ ಆಟಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗೆ ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್ ಕೀಪರ್ ಇಯಾನ್ ಹೀಲಿ (Ian Healy) ಭಾರತದ ಪಿಚ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಕ್ಕೆ ಆರ್. ಅಶ್ವಿನ್ (R.Ashwin)  ಸರಿಯಾದ ಟಾಂಗ್ ಕೊಟ್ಟಿದ್ದಾರೆ.

ಹೀಲಿ ಹೇಳಿದ್ದೇನು?

ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಭಾರತ ತಂಡ ಪ್ರಾಮಾಣಿಕವಾಗಿ ಪಿಚ್ ತಯಾರಿಸಿದ್ದರೆ, ಅದು ಉತ್ತಮ ಬ್ಯಾಟಿಂಗ್ ಪಿಚ್ ಆಗಿದ್ದರೆ ಪಂದ್ಯ ಕೊನೆಯವರೆಗೂ ಸಾಗುತ್ತದೆ, ಜೊತೆಗೆ ಆಸ್ಟ್ರೇಲಿಯಾ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತದೆ. ಕಳೆದ ಬಾರಿ ಸರಣಿ ಮ್ಯಾಚ್ ನಲ್ಲಿ ಅನ್ಯಾಯವಾದ ರೀತಿಯಲ್ಲಿ ಪಿಚ್ ತಯಾರಿಸಲಾಗಿತ್ತು. ಬಾಲ್ ಪುಟಿಯುತ್ತಿತ್ತು. ಒಟ್ಟಿನಲ್ಲಿ ಮೊದಲ ದಿನದಿಂದಲೇ ಪಂದ್ಯ ಕುತೂಹಲ ಕಳೆದುಕೊಂಡಿತ್ತು. ಅಷ್ಟೇ ಅಲ್ಲ ಆಸ್ಟ್ರೇಲಿಯಾ ಆಟಗಾರರು ಭಾರತದಲ್ಲಿ ಅಭ್ಯಾಸ ಪಂದ್ಯಗಳನ್ನು ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಅಭ್ಯಾಸಕ್ಕೆ ಸಿಗುವ ಪಿಚ್ ಗೂ ಅವರು ಆಟ ಆಡುವ ಪಿಚ್ ಗೂ ಸಂಬಂಧವೇ ಇರುವುದಿಲ್ಲ ಎಂಬುದಾಗಿ ಬಾಯಿಗೆ ಬಂದ ರೀತಿಯಲ್ಲಿ ಹೇಳಿಕೆ ನೀಡಿದ್ದರು ಹೀಲಿ. ಇದನ್ನೂ ಓದಿ: Adani loss in one Week: ಅದಾನಿ, ಕೇವಲ ಒಂದು ವಾರದಲ್ಲಿ ಕಳೆದುಕೊಂಡದ್ದು ಎಷ್ಟು ಗೊತ್ತೇ?? ಹೊಸ ಲೆಕ್ಕಾಚಾರ ಎಷ್ಟು ಲಕ್ಷ ಕೋತಿ ಗೊತ್ತೇ??

ಆರ್ ಅಶ್ವಿನ್ ತಿರುಗೇಟು:

ಹೀಲಿ ನೀಡಿರುವ ಹೇಳಿಕೆಗೆ ಆರ್ ಅಶ್ವಿನಿ ಕೂಡ ತಿರುಗೇಟು ನೀಡಿದ್ದಾರೆ. “ಆಸಿಸ್, ಪಂದ್ಯ ಆರಂಭವಾಗುವುದಕ್ಕೂ ಮೊದಲೇ ಮೈಂಡ್ ಗೇಮ್ಸ್ ಶುರು ಮಾಡುತ್ತೆ ಮೈಂಡ್ ಗೇಮ್ಸ್ ಅಂದರೆ ಆಟಗಾರರಿಗೆ ಬಲು ಪ್ರೀತಿ. ಅವರು ಕ್ರಿಕೆಟ್ ಆಡುವ ಶೈಲಿಯೇ ಹಾಗೆ” ಎಂದು ಹೇಳಿದ್ದಾರೆ. ಆಸ್ಟ್ರೇಲಿಯನ್ ಬ್ಯಾಟ್ಮ್ಯಾನ್ ಗಳು ನಮಗಾಗಿ ವಿಕೆಟ್ ನೀಡುವುದಿಲ್ಲ. ಅದು ಪಂದ್ಯದ ಸಮಯ, ಸ್ಥಿತಿ ಹಾಗೂ ಸಾಮರ್ಥ್ಯದ ಮೇಲೆ ನಿರ್ಧಾರಿತವಾಗುತ್ತೆ. ಪಂದ್ಯ ಆರಂಭವಾಗುವುದಕ್ಕೂ ಮೊದಲೇ ಈ ರೀತಿ ಹೇಳಿಕೆ ನೀಡುವುದು ಅಸಿಸ್ ಆಟಗಾರರಿಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಅಶ್ವಿನಿ ಹೇಳಿದ್ದಾರೆ. ಇದನ್ನೂ ಓದಿ: Team India: ಇದೇನಾಯ್ತು ಟೀಮ್ ಇಂಡಿಯಾದವರಿಗೆ? ಕುಂಕುಮ ಇಡಲು ಹೋದರೆ, ಆಟಗಾರರು ಹಿಂದೆ ಸರಿದಿದ್ದು ಯಾಕೆ ಗೊತ್ತೇ?? ಹಿಂದಿರುವ ಕಾರಣ ಏನು ಗೊತ್ತೇ??

ಆರ್ ಅಶ್ವಿನ್ ದಾಖಲೆ;

ಕ್ರಿಕೆಟರ್ ಆರ್ ಅಶ್ವಿನ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯ ಸೃಷ್ಟಿಯತ್ತ ಗಮನಹರಿಸಿದ್ದಾರೆ. ಯಾಕಂದ್ರೆ ಇನ್ನು ಅಶ್ವಿನಿ ಒಂದು ವಿಕೆಟ್ ಪಡೆದರೆ ಅನಿಲ್ ಕುಂಬ್ಳೆ (Anil Kumble) ಅವರ ದಾಖಲೆಯನ್ನೇ ಮುರಿಯುತ್ತಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ವೇಗವಾಗಿ 450 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಹಾಗೂ ವಿಶ್ವದ ಎರಡನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಅನಿಲ್ ಕುಂಬ್ಳೆ ಟೆಸ್ಟ್ ಆಡಿ 450 ವಿಕೆಟ್ ಗಳಿಸಿ ದಾಖಲೆ ಸೃಷ್ಟಿಸಿದರು.

Border Gavaskar TrophyCricketCricket newsR.AshwinTeam India