Relationship: ಹೊಸದಾಗಿ ಅಪರಿಚಿತ ಮಹಿಳೆಯನ್ನು ಕಂಡಾಗ ಖಡಕ್ ಪುರುಷ ಏನು ಆಲೋಚನೆ ಮಾಡುತ್ತಾನೆ ಗೊತ್ತೇ??

Relationship:ಈ ಲೇಖನದ ಮೂಲಕ ನಾವು ನಿಮಗೆ ಸೈಕಾಲಜಿಯ ಪ್ರಕಾರ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳುವುದಕ್ಕೆ ಹೊರಟಿದ್ದೇವೆ. ಒಬ್ಬ ಪುರುಷ ಅಪರಿಚಿತ ಮಹಿಳೆಯನ ಮೊದಲ ಬಾರಿಗೆ ನೋಡಿದಾಗ ಮನಸ್ಸಿನಲ್ಲಿ ಯಾವ ಭಾವನೆಗಳು ಹುಟ್ಟಿಕೊಳ್ಳುತ್ತವೆ ಅಥವಾ ಯಾವ ರೀತಿಯಲ್ಲಿ ಆತ ಅಂದುಕೊಳ್ಳುತ್ತಾನೆ ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು. ಇನ್ನು ಈ ಭಾವನೆಗಳು ಅಥವಾ ಅಭಿಪ್ರಾಯಗಳು ವಿವಾಹಿತ ಹಾಗೂ ಅವಿವಾಹಿತ ಪುರುಷರಲ್ಲಿ ಬೇರೆ ಬೇರೆ ರೀತಿ ಆಗಿರುತ್ತದೆ ಅನ್ನೋದನ್ನ ಕೂಡ ನಾವು ತಿಳಿದುಕೊಳ್ಳಬೇಕಾಗಿದೆ.

  • ವಿವಾಹಿತ ಅಥವಾ ಅವಿವಹಿತ ಪುರುಷರೇ ಆಗಿರಲಿ ಅಪರಿಚಿತ ಮಹಿಳೆಯನ್ನ ಮೊದಲಿಗೆ ನೋಡಿದಾಗ ಆಕೆಯ ವಿವರಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಕುತೂಹಲ ಭರಿತರಾಗಿರುತ್ತಾರೆ. ಆಕೆಯ ಹೆಸರು ಊರಿನ ವಿವರವನ್ನು ತಿಳಿದುಕೊಳ್ಳಬೇಕು ಎನ್ನುವಂತಹ ಕುತೂಹಲ ಅವರ ಮನಸ್ಸಿನಲ್ಲಿ ಇರುತ್ತದೆ.
  • ಇನ್ನು ಆಕೆಯ ಜೊತೆಗೆ ಇನ್ನಷ್ಟು ನಿಕಟ ಮಾತುಗಾರಿಕೆಯನ್ನು ಹೊಂದಬೇಕು ಎನ್ನುವಂತಹ ಆಸೆ ಕೂಡ ಆ ಸಂದರ್ಭದಲ್ಲಿ ಪುರುಷರ ಮನಸ್ಸಿನಲ್ಲಿ ಮೂಡುತ್ತದೆ. ಇದೇ ಕಾರಣಕ್ಕಾಗಿ ತಮ್ಮನ್ನು ತಾವು ಅವರಿಗೆ ಪರಿಚಯ ಮಾಡಿ ಕೊಳ್ಳುವುದಕ್ಕೆ ಕೂಡ ಈ ಸಂದರ್ಭದಲ್ಲಿ ಪ್ರಯತ್ನ ಪಡುತ್ತಾರೆ. ಒಟ್ಟಾರೆಯಾಗಿ ಹೇಗಾದರೂ ಮಾಡಿ ಆಕೆಯ ಜೊತೆಗೆ ಮಾತನ್ನು ಆರಂಭಿಸಬೇಕು ಎನ್ನುವಂತಹ ಆಲೋಚನೆ ಅವರಲ್ಲಿ ಇರುತ್ತದೆ.
  • ಇನ್ನು ಒಬ್ಬ ಅಪರಿಚಿತ ಮಹಿಳೆಯ ಜೊತೆಗೆ ಪುರುಷರು ಇದ್ದಾಗ ಆಕೆಯ ಹಾವಭಾವಗಳು ಯಾವ ರೀತಿಯಲ್ಲಿ ಇರುತ್ತೆ ಹಾಗೂ ನಡವಳಿಕೆ ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳುವುದಕ್ಕಾಗಿ ಆ ಮಹಿಳೆಯ ಗಮನಕ್ಕೆ ಬಾರದೆ ಅವರನ್ನು ಗುಪ್ತವಾಗಿಯೇ ಎಲ್ಲಾ ರೀತಿಯಲ್ಲಿ ತಿಳಿದುಕೊಳ್ಳುವ ಅಂತಹ ಕೆಲಸವನ್ನು ಮಾಡೋದಕ್ಕೆ ಹೋಗ್ತಾರೆ.
  • ಇನ್ನು ಅಂತಹ ಅಪರಿಚಿತ ಮಹಿಳೆ ನಿಮ್ಮ ಕಚೇರಿಯಲ್ಲೇ ಕೆಲಸ ಮಾಡ್ತಿದ್ದಾರೆ ಅಂತ ಅಂದ್ರೆ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳುವಂತಹ ಕುತೂಹಲ ಕೂಡ ಪುರುಷರಲ್ಲಿ ಹೆಚ್ಚಾಗುತ್ತದೆ ಅಥವ ಆ ಮಹಿಳೆಯೇ ತನ್ನ ಕುಟುಂಬದ ಬಗ್ಗೆ ಸಂಪೂರ್ಣ ವಿವರವಾಗಿ ಹೇಳಿಕೊಳ್ಳಲಿ ಎಂಬಂತಹ ಅಪೇಕ್ಷೆ ಕೂಡ ಪುರುಷರಲ್ಲಿ ಇರುತ್ತದೆ ಎಂಬುದಾಗಿ ಸೈಕಾಲಜಿ ಹೇಳುತ್ತದೆ.
  • ಇನ್ನು ಇಂತಹ ಪರಿಸ್ಥಿತಿಯಲ್ಲಿ ಆ ಮಹಿಳೆ ಏನಾದರೂ ಸಹಾಯವನ್ನು ತನ್ನ ಬಳಿ ಕೇಳಲಿ ಎನ್ನುವಂತಹ ಆಕಾಂಕ್ಷೆ ಪುರುಷನ ಬಳಿ ಇರುತ್ತದೆ. ಈ ಮೂಲಕ ಆಕೆಯ ಭರವಸೆಯನ್ನು ಗೆಲ್ಲಬಹುದು ಎನ್ನುವಂತಹ ಅಭಿಪ್ರಾಯ ಆತನದ್ದು ಎಂದು ಹೇಳಬಹುದಾಗಿದೆ. ಇಲ್ಲವಾದರೆ ತನ್ನ ಬಗ್ಗೆ ಇರುವಂತಹ ಅಭಿಪ್ರಾಯ ಹೋಗಬೇಕು ಅನ್ನೋದೇ ಪುರುಷರ ಆಸೆ ಆಗಿರುತ್ತೆ.
  • ಅನಗತ್ಯ ಮಾತುಗಳು ಹಾಸ್ಯ ಹರಟೆಗಳ ಮೂಲಕ ಒಟ್ಟಾರೆಯಾಗಿ ಆ ಅಪರಿಚಿತ ಮಹಿಳೆ ತನ್ನ ಕಡೆಗೆ ಸೆಳೆಯಬೇಕು ಎನ್ನುವಂತಹ ಆಸೆಯನ್ನು ಹಾಗೂ ಹಂಬಲವನ್ನು ಪುರುಷರು ಹೊಂದಿರುತ್ತಾರೆ ಎನ್ನುವುದಾಗಿ ಕೂಡ ಮನೋಶಾಸ್ತ್ರಜ್ಞರು ಹೇಳುತ್ತಾರೆ.
Relationship