Karnataka Politics: ಉಚಿತ ಅಕ್ಕಿ ಯೋಜನೆಯ ಬೆನ್ನಲ್ಲೇ ರಾಜ್ಯದ ಜನತೆಗೆ ಬಿಗ್ ಬಿಗ್ ಶಾಕ್- ಕೊಂಡು ತಿನ್ನುವವರ ಪರಿಸ್ಥಿತಿ ಯಾರಿಗೂ ಬೇಡ. ಏನಾಗಿದೆ ಗೊತ್ತೇ?

Karnataka Politics: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (congress govt) ಅಧಿಕಾರಕ್ಕೆ ಬಂದಾಗಿನಿಂದ, ಉಚಿತ ಯೋಜನೆಗಳು ಜಾರಿಗೆ ತರುವುದರ ಜೊತೆಗೆ ಜನರಿಗೆ ಒಂದಲ್ಲಾ ಒಂದು ಶಾಕ್ ಗಳು ಸಿಗುತ್ತಲೇ ಇದೆ. ಇತ್ತೀಚೆಗೆ ವಿದ್ಯುತ್ ಬೆಲೆ ಏರಿಕೆ ಆಗಿರುವುದಕ್ಕೆ ರಾಜ್ಯದ ಜನತೆ ಸರ್ಕಾರದ ಮೇಲೆ ಗರಂ ಆಗಿದ್ದಾರೆ. ಅದರ ಬೆನ್ನಲ್ಲೇ ಈಗ ರಾಜ್ಯದಲ್ಲಿ ಅಕ್ಕಿ ಬೆಲೆ ಏರಿಕೆ ಆಗುತ್ತದೆ ಎಂದು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ (Karnataka Rice Millers Federation) ಮಾಹಿತಿ ನೀಡಿದೆ. ಇದರಿಂದ ರಾಜ್ಯದ ಜನತೆಗೆ ಮತ್ತೊಂದು ದೊಡ್ಡ ಶಾಕ್ ಸಿಕ್ಕಿದೆ. ಇದನ್ನೂ ಓದಿ: kashi yatra: ಬಿಜೆಪಿ ಜಾರಿಗೆ ತಂದ ಎಲ್ಲಾ ಯೋಜನೆಗಳಿಗೆ ಬ್ರೇಕ್ ಹಾಕಿದ್ದ ಕಾಂಗ್ರೆಸ್, ಇದೊಂದನ್ನು ಮಾತ್ರ ಮುಂದುವರಿಕೆಗೆ ನಿರ್ಧಾರ? ಭೇಷ್ ಎಂದ ನೆಟ್ಟಿಗರು!

ಕಾಂಗ್ರೆಸ್ ಸರ್ಕಾರವು ಅನ್ನ ಭಾಗ್ಯ ಯೋಜನೆ(Anna bhagya Yojana) ಯ ಮೂಲಕ, ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗು ತಿಂಗಳಿಗೆ 10ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿದ್ದು, ಈ ಯೋಜನೆಯನ್ನು ಜಾರಿಗೆ ತರಬೇಕಿದೆ, ಆದರೆ ಈ ಯೋಜನೆಯ ಬೆನ್ನಲ್ಲೇ, ಈಗ ಅಕ್ಕಿಯ ಬೆಲೆಯನ್ನು ಸಹ ಏರಿಸುವುದಾಗಿ ತಿಳಿಸಿದ್ದಾರೆ. ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಈ ಬಗ್ಗೆ ಮಾತನಾಡಿದ್ದು.. ಅಕ್ಕಿಯ ಬೆಲೆ ಒಂದು ಕೆಜಿಗೆ 5 ರಿಂದ 10 ರೂಪಾಯಿ ಜಾಸ್ತಿಯಾಗಬಹುದು..

ವಿದ್ಯುತ್ ಬೆಲೆ ಜಾಸ್ತಿ ಆಗಿರುವುದರಿಂದ, ಹೆಚ್ಚಿನ ಹೊಡೆತ ಬೀಳುತ್ತಿದೆ, ಎಪಿಎಂಸಿ ಟ್ಯಾಕ್ಸ್ (Tax) ಕಟ್ಟಬೇಕಿರುವುದು ಕಷ್ಟವಾಗಿದ್ದು, ರಾಜ್ಯದಲ್ಲಿ ಮಳೆ ಕೂಡ ಇಲ್ಲದೆ ಭತ್ತ ಕೂಡ ಸಿಗುತ್ತಿಲ್ಲ.  ಈ ಕಾರಣಗಳಿಂದ ಬೆಲೆ ಏರಿಕೆ ಮಾಡುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.. ಪ್ರಸ್ತುತ 1 ಕೆಜಿ ಅಕ್ಕಿ ಬೆಲೆ 45 ರೂಪಾಯಿ ಆಗಿದ್ದು, ಕೆಲಸದಲ್ಲಿ ಲೇಬರ್ ಖರ್ಚು, ವಿದ್ಯುತ್ ಬಿಲ್ ಇದೆಲ್ಲವೂ ಕಷ್ಟವಾಗಿದ್ದು ಈ ಕಾರಣಕ್ಕೆ ವಿದ್ಯುತ್ ಬೆಲೆ ಏರಿಸಲಾಗುತ್ತದೆ ಎನ್ನಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಅನೇಕ ವಿಚಾರಗಳಿಂದ ಜನರು ಕಂಗೆಟ್ಟಿದ್ದಾರೆ. ವಿದ್ಯುತ್ ಬೆಲೆ ಏರಿಕೆ ಒಂದೇ ಸಾರಿ ದೊಡ್ಡ ಶಾಕ್ ಆಗಿತ್ತು. ಅದೊಂದೆ ಅಲ್ಲದೆ ನಂದಿನಿ ಹಾಲಿನ ಬೆಲೆಯಲ್ಲಿ ಏರಿಕೆ ಮಾಡುವುದಾಗಿ ಕೆಎಂಎಫ್ ಹೇಳಿದ್ದು ಸಹ ಶಾಕ್ ತಂದಿತ್ತು, ಅದರ ಬೆನ್ನಲ್ಲೇ ಈಗ ಅಕ್ಕಿಯ ಬೆಲೆಯಲ್ಲಿ ಏರಿಕೆ, ಅದು ಕೂಡ ಒಂದು ಕೆಜಿಗೆ 5 ರಿಂದ 10 ರೂಪಾಯಿ ಏರಿಕೆ ಆಗಲಿದೆ, ಬಿಪಿಎಲ್ ಕಾರ್ಡ್ ಇರುವವರಿಗೆ ಪ್ರತಿಯೊಬ್ಬರಿಗೂ 10ಕೆಜಿ ಅಕ್ಕಿ ಸಿಗುತ್ತದೆ. ಆದರೆ ಹೆಲ್ ಏರಿಕೆಯಿಂದ ಮಧ್ಯಮವರ್ಗದ ಜನರಿಗೆ ಹೆಚ್ಚು ತೊಂದರೆ ಆಗುತ್ತದೆ. ಇದನ್ನೂ ಓದಿ: Fake App: ಅಬ್ಬಾ ಈ ಆಪ್ ಗಳನ್ನು ನೋಡಿದ್ರೆ ನಕಲಿ ಅಂತ ಅನ್ನಿಸಲ್ಲ, ಒಮ್ಮೆ ಡೌನ್ ಲೋಡ್ ಮಾಡಿದ್ರೆ ಮುಗಿತು ಜೀವನವೇ ಸರ್ವನಾಶ!

Best News in KannadaCongress partyKannada NewsKanratakaKarnataka PoliticsLive News KannadaNews in Kannadarice cost