Kannada Film: ಮತ್ತೆ ದೈವದ ಮೊರೆ ಹೋದ ರಿಷಬ್ ಶೆಟ್ಟಿ; ‘ಕಾಂತರಾ -2’  ಚಿತ್ರೀಕರಣಕ್ಕೆ ಅಣ್ಣಪ್ಪ ಪಂಜುರ್ಲಿ ದೈವ ನೀಡಿತೇ ಅನುಮತಿ?

Kannada Film: ಕನ್ನಡ ಸಿನಿಮಾ ಇಂಡಸ್ಟ್ರಿ (Kannda Film Industry) ಯಲ್ಲಿ ಹಿಸ್ಟರಿ (History) ಕ್ರಿಯೇಟ್ ಮಾಡಿದ ಚಿತ್ರ ಕಾಂತಾರ (Kantara)ದ ಮೊದಲ ಭಾಗದ ಅದ್ಭುತ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ಕಾಂತಾರದ ಎರಡನೇ ಭಾಗವನ್ನ ನಿರ್ಮಾಣ (Production)  ಮಾಡುವುದಕ್ಕೆ ಮುಂದಾಗಿದೆ. ಕಾಂತಾರ ಸಿನಿಮಾದಲ್ಲಿ ದೈವದ ಬಗ್ಗೆ ಸಾಕಷ್ಟು ವಿಷಯಗಳನ್ನ ಹೇಳಲಾಗಿದೆ ಹಾಗಾಗಿ ಸಿನಿಮಾ ನಿರ್ಮಾಣಕ್ಕೂ ಮೊದಲು ರಿಷಬ್ ಶೆಟ್ಟಿ (Rishab Shetty) ದಕ್ಷಿಣ ಕನ್ನಡ ಭಾಗದ ದೈವಗಳ ಅನುಮತಿ ಕೇಳಿದರಂತೆ. ದೈವದ ಅನುಮತಿಯ ಮೇರೆಗೆ ರಿಷಬ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡಿ ಎಂದು ಇಷ್ಟು ದೊಡ್ಡ ಯಶಸ್ಸನ್ನ ಕಾಣುವಂತಾಗಿತ್ತು. ಇದನ್ನೂ ಓದಿ:Kannada Film: <strong>ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿರಸಿಕರಿಗೆ ‘ಕಾಕ್ಟೇಲ್’(Cocktail) ನೀಡಿದ ವೀರೇನ್ ಕೇಶವ್</strong>

ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾದ ನಿರ್ಮಾಣದಿಂದ ಕೊನೆಯ ಹಂತದ ವರೆಗೂ ದೈವಗಳಿಗೆ ಯಾವುದೇ ರೀತಿಯು ಘಾಸಿಯಾಗದಂತೆ ಧರ್ಮ, ನಂಬಿಕೆಗಳಿಗೆ ಚ್ಯುತಿ  ಬರದಂತೆ ಚಿತ್ರೀಕರಣ ಮಾಡಿ ಮುಗಿಸಿದ್ದರು. ಹಾಗಾಗಿ ಕಾಂತರಾ ಸಿನಿಮಾ ಅಷ್ಟರಮಟ್ಟಿಗೆ ಹಿಟ್ ಕೂಡ ಆಗಿತ್ತು. ಇದೀಗ ಕಾಂತರಾದ ಎರಡನೇ ಭಾಗ ನಿರ್ಮಾಣ ಮಾಡುವುದಕ್ಕೆ ಮುಂದಾಗಿರುವ ರಿಷಬ್ ಶೆಟ್ಟಿ ಅವರು ಮತ್ತೆ ದೈವದ ಅನುಮತಿ ಕೇಳಿದ್ದಾರೆ. ದೈವದ ಅನುಮತಿ ಸಿಕ್ಕೀತೇ ?

ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಮಡಿವಾಳ ಸಮುದಾಯದ ಮನೆ ಒಂದರಲ್ಲಿ ಅಣ್ಣಪ್ಪ ಪಂಜುರ್ಲಿ ಕೋಲಾ ನಡೆಸಿಕೊಟ್ಟಿದ್ದು ಕಾಂತಾರಾ ಚಿತ್ರತಂಡ. ಈ ಸಮಯದಲ್ಲಿ ರಿಷಬ್ ಶೆಟ್ಟಿ ನಿರ್ಮಾಪಕ ವಿಜಯ್ ಕಿರಂದೂರು ಸೇರಿದಂತೆ ಚಿತ್ರದ ಬಹುತೇಕ ಎಲ್ಲರೂ ಭಾಗವಹಿಸಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ಅಣ್ಣಪ್ಪ ಪಂಜುರ್ಲಿ ಕೋಲ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ಅವರು ಕಾಂತಾರ ಎರಡನೇ ಭಾಗ ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಕೋರಿದ್ದಾರೆ.

ರಿಷಬ್ ಶೆಟ್ಟಿ ಅವರ ಕೋರಿಕೆಗೆ ಇಲ್ಲ ಎನ್ನದ ದೈವ ಕೆಲವು ಮುನ್ಸೂಚನೆಗಳನ್ನು, ಎಚ್ಚರಿಕೆಗಳನ್ನು, ಸಲಹೆಗಳನ್ನೂ ನೀಡಿ ಕಾಂತರಾ ಭಾಗ ಎರಡು ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ದೈವದ ಒಪ್ಪಿಗೆಯ ಮೇರೆಗೆ ಕಾಂತರಾ ಭಾಗ ಎರಡು ಇದೆ ಬರುವ ಮಳೆಗಾಲದ ಸಮಯದಲ್ಲಿ ಚಿತ್ರೀಕರಣ ಮಾಡುವ ಸಾಧ್ಯತೆ ಇದೆ. ಈ ಚಿತ್ರದಲ್ಲಿಯೂ ಕಾಂತಾರ ಮೊದಲ ಭಾಗದಲ್ಲಿ ಅಭಿನಯಿಸಿದ ಬಹುತೇಕ ನಟರು ಅಭಿನಯಿಸಬಹುದು. ಈ ಬಾರಿಯೂ ದೈವಗಳಿಗೆ ಅಥವಾ ದಕ್ಷಿಣ ಕನ್ನಡ ಭಾಗದ ಆಚರಣೆಗಳಿಗೆ ಯಾವುದೇ ರೀತಿಯ ಧಕ್ಕೆ ಆಗದ ರೀತಿಯಲ್ಲಿ ಸಿನಿಮಾ ನಿರ್ಮಾಣ ಮಾಡುವುದು ರಿಷಭ ಶೆಟ್ಟಿ ಅವರ ಮುಂದಿರುವ ಬಹುದೊಡ್ಡ ಜವಾಬ್ದಾರಿ ಹಾಗೂ ಸವಾಲು.

Kannada FilmKantara FilmRishab Shettyಕನ್ನಡ ಸಿನಿಮಾ