Kannada Recipe: ಕೇವಲ 5 ನಿಮಿಷಗಳಲ್ಲಿ ಲಂಚ್ ಬಾಕ್ಸ್ ರೆಡಿ ಆಗ್ಬೇಕಾ? ರಾತ್ರಿ ಅನ್ನ ಇದ್ರೂ ಸಾಕು, ರುಚಿಕರ ತಿಂಡಿ ರೆಡಿ ಆಗತ್ತೆ ನೋಡಿ!

Kannada Recipe:  ಸ್ನೇಹಿತರೆ, ದಿನ ಅಮ್ಮಂದಿರಿಗೆ ಮಕ್ಕಳ ಲಂಚ್ ಬಾಕ್ಸ್ (Lunch box) ಗೆ ಏನು ತಿಂಡಿ ಮಾಡಿ ಕಳುಹಿಸಬೇಕು ಎನ್ನುವುದೇ ಚಿಂತೆ, ಆರೋಗ್ಯಕರವಾಗಿಯೂ ಇರಬೇಕು, ರುಚಿಯಾಗಿಯೂ ಇರಬೇಕು. ಅದರಲ್ಲೂ ಮಕ್ಕಳಿಗೆ ಪ್ರೋಟಿನ್ (Protein)  ಹೆಚ್ಚಾಗಿರುವ ಸೊಪ್ಪನ್ನು ಕೂಡ ಆಹಾರವಾಗಿ ಕೊಡಬೇಕು. ಮಕ್ಕಳು (Kid) ಆರೋಗ್ಯವಾಗಿದೆ ಅಂದ ಕೂಡಲೆ ತಿನ್ನಲ್ಲ. ಟೇಸ್ಟಿ ಆಗಿದ್ರೆ ಮಾತ್ರ ತಿಂತಾರೆ. ಹಾಗಾಗಿ ದಿಢೀರ್ ಅಂತ ಮಾಡಿಕೊಳ್ಳಬಹುದಾದ ಒಂದು ರುಚಿಕರ ರೈಸ್ ಬಾತ್ (Rice bath) ರೆಸಿಪಿ ಇಲ್ಲಿದೆ ನೋಡಿ.

Kannada Recipe: ಕೇವಲ 5 ನಿಮಿಷಗಳಲ್ಲಿ ಲಂಚ್ ಬಾಕ್ಸ್ ರೆಡಿ ಆಗ್ಬೇಕಾ? ರಾತ್ರಿ ಅನ್ನ ಇದ್ರೂ ಸಾಕು, ರುಚಿಕರ ತಿಂಡಿ ರೆಡಿ ಆಗತ್ತೆ ನೋಡಿ! https://sihikahinews.com/amp/sabbasige-soppu-ricebath-easy-recipe/

ಸಬ್ಬಸ್ಸಿಗೆ ಸೊಪ್ಪಿನ ರೈಸ್ ಬಾತ್:

ಸಬ್ಬಸ್ಸಿಗೆ ಒಂದು ಕಟ್ಟು (ಸ್ವಚ್ಛಗೊಳಿಸಿ ಸಣ್ಣದಾಗಿ ಹೆಚ್ಚಿಕೊಳ್ಳಿ

ದೊಡ್ಡ ಗಾತ್ರ ಈರುಳ್ಳಿ ಒಂದು (ಹೆಚ್ಚಿಟ್ಟುಕೊಳ್ಳಿ)

ಹೆಚ್ಚಿದ ಹಸಿಮೆಣಸು – ಒಂದರಿಂದ ಎರಡು

ತಲಾ ಒಂದು ಚಮಚ – ಉದ್ದಿನ ಬೇಳೆ, ಸಾಸಿವೆ, ಕಾಳುಮೆಣಸು, ಜೀರಿಗೆ

ಎರಡು ಚಮಚ ಶೇಂಗಾ ಅಥವಾ ನೆಲಗಡಲೆ

ಗೋಡಂಬಿ ಸ್ವಲ್ಪ

ಅಡುಗೆ ಎಣ್ಣೆ ನಾಲ್ಕು ಚಮಚದಷ್ಟು

ರುಚಿಗೆ ಉಪ್ಪು

ಒಂದು ಬೌಲ್ ಉದುರುದುರಾಗಿ ಮಾಡಿಕೊಂಡ ಅನ್ನ

ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ. ಅದು ಬಿಸಿ ಆದ ಕೂಡಲೆ ಉದ್ದಿನ ಬೇಳೆ, ಸಾಸಿವೆ, ಜೀರಿಗೆ ಹಾಕಿ ಬಾಡಿಸಿ. ನಂತರ ಕಾಳುಮೆಣಸು ಹಾಕಿ ಹುರಿಯಿರಿ. ಈಗ ಹೆಚ್ಚಿಟ್ಟುಕೊಂಡ ಹಸಿಮೆಣಸು ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿ. ಇದನ್ನೂ ಓದಿ: Diabetes: ಡಯಾಬಿಟಿಸ್ ಇದ್ಯಾ? ಹಾಗಾದ್ರೆ ಬೆಳಗಿನ ಉಪಹಾರಕ್ಕೆ ಈ ವಸ್ತುವನ್ನು ಸೇವಿಸಿ; ನಿಮಗೆ ಶುಗರ್ ಇರುವುದನ್ನೇ ಮರೆತುಬಿಡಿ;ಏನು ಗೊತ್ತೇ?

ಈರುಳ್ಳಿ ಸ್ವಲ್ಪ ಫ್ರೈ ಆಗುತ್ತಿದ್ದ ಹಾಗೆ ಹೆಚ್ಚಿಟ್ಟುಕೊಂಡ ಸಬ್ಬಸ್ಸಿಗೆ ಸೊಪ್ಪನ್ನು ಹಾಕಿ. ಸೊಪ್ಪು ಬೆಂದ ನಂತರ ಅದಕ್ಕೆ ಉಪ್ಪು ಹಾಗೂ ಅನ್ನವನ್ನು ಸೇರಿಸಿ ಮಿಕ್ಸ್ ಮಾಡಿ. ಬೇಕಿದ್ದರೆ ನಿಂಬೆರಸ ಸೇರಿಸಬಹುದು. ಕೊನೆಯಲ್ಲಿ ಎಣ್ಣೆ ಅಥವಾ ತುಪ್ಪದಲ್ಲಿ ಶೇಂಗಾ ಹಾಗೂ ಗೋಡಂಬಿಯನ್ನು ಹುರಿದು, ಮಿಶ್ರಣ ಮಾಡಿದ ಅನ್ನಕ್ಕೆ ಸೇರಿಸಿದರೆ ರುಚಿಯಾದ ಸಬ್ಬಸ್ಸಿಗೆ ಅನ್ನ ರೆಡಿ. ಸಬ್ಬಸ್ಸಿಗೆ ಸ್ವಲ್ಪ ಬೇರೆಯದೇ ವಾಸನೆ ಇರುತ್ತೆ. ಹಾಗಾಗಿ ಈ ರೀತಿ ಮಾಡಿದರೆ ಮಕ್ಕಳೂ ಕೂಡ ಖುಷಿಯಿಂದಲೇ ಸೇವಿಸುತ್ತಾರೆ.

Kannada RecipeLifestyleRice bathsabbasige soppuರೆಸಿಪಿ ಅಡುಗೆ ಮನೆ