Salt Vastu Benefits: ಅದೆಷ್ಟು ಕಷ್ಟಗಳನ್ನು ಉಪ್ಪು ಬಳಸಿ ನಿವಾರಣೆ ಮಾಡಬಹುದು ಗೊತ್ತೇ? ಉಪ್ಪು ಈ ರೀತಿ ಬಳಸಿದರೆ ಏನಾಗುತ್ತದೆ ಗೊತ್ತೇ? ತಿಳಿದರೆ ಇಂದೇ ಬಳಸ್ತೀರಾ

Salt Vastu Benefits: ಊಟದಲ್ಲಿ ಉಪ್ಪು ಎಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಬಹುತೇಕ ಎಲ್ಲಾ ಆಹಾರ ಪದಾರ್ಥಗಳಲ್ಲಿ ಉಪ್ಪು ಇರಲೇಬೇಕು. ಆದರೂ ಉಪ್ಪೇ ಮುಪ್ಪು ಎಂದು ಹೇಳಲಾಗುತ್ತೆ. ಇನ್ನು ಉಪ್ಪು ಅತಿಯಾದರೆ ಕೂಡ ಒಳ್ಳೆಯದಲ್ಲ. ಹಾಗಂತ ಉಪ್ಪು ಇಲ್ಲದೆ ಊಟ ಮಾಡುವುದಕ್ಕೂ ಆಗುತ್ತಿಲ್ಲ. ಊಟದ ವಿಷಯ ಹಾಗಿರಲಿ ಉಪ್ಪಿನಿಂದ ಎಷ್ಟೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಗೊತ್ತೇ ?

ಉಪ್ಪಿನಿಂದ ಸಾಕಷ್ಟು ಪ್ರಯೋಜನಗಳು ಇವೆ. ವಾಸ್ತು ಶಾಸ್ತ್ರದಲ್ಲಿ ಉಪ್ಪಿನ ಬಗ್ಗೆ ಹೆಚ್ಚಾಗಿ ಹೇಳಲಾಗಿದೆ. ನಮ್ಮಲ್ಲಿರುವಂತಹ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದಕ್ಕೆ ಉಪ್ಪನ್ನು ಬಳಸಿಕೊಳ್ಳಬಹುದು. ಹೌದು ವಾಸ್ತುದೋಷಗಳನ್ನು ಹೋಗಲಾಡಿಸಲು ನೀವು ಈ ರೀತಿಯಾಗಿ ಉಪ್ಪನ್ನು ಬಳಸಿದರೆ ಉತ್ತಮ. ಇದನ್ನೂ ಓದಿ: Viral Video: ವಿಮಾನ ಹಾರಾಟದ ನಡುವೆ ಅರೆ ಬರೆ ಬಟ್ಟೆ ಹಾಕಿಕೊಂಡು ಮುಜುಗರ ಉಂಟುಮಾಡಿದ ಮಹಿಳೆ, ಸಿಬ್ಬಂದಿ ಮುಖಕ್ಕೆ ಉಗಿದು ಹಲ್ಲೆ; ಇಷ್ಟಕ್ಕೂ ಆಕೆ ಹೀಗೆ ವರ್ತಿಸಿದ್ದು ಯಾಕೆ ಗೊತ್ತಾ?

ಉಪ್ಪನ್ನು ಪರಿಸರ ಶುದ್ಧೀಕಾರಕ ಎಂದು ಹೇಳಲಾಗುತ್ತೆ. ಹಾಗಾಗಿ ಉಪ್ಪಿನಿಂದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಕಂಡುಕೊಳ್ಳಬಹುದು. ಆಯಾಸ, ಖಿನ್ನತೆ ಅಥವಾ ನಕಾರಾತ್ಮಕ ಶಕ್ತಿಯಿಂದ ಬಳಲುತ್ತಿದ್ದರೆ ಉಪ್ಪು ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು. ಸ್ನಾನ ಮಾಡುವಾಗ ನೀರಿಗೆ ಚಿಟಿಕೆ ಉಪ್ಪನ್ನ ಹಾಕಿಕೊಂಡು ಸ್ನಾನ ಮಾಡಿದರೆ ಪುನರ್ ಯೌವ್ವನದ ಭಾವನೆ ನಿಮ್ಮಲ್ಲಿ ಮರುಕಳಿಸುತ್ತದೆ.

ಇನ್ನು ಜೀವನದಲ್ಲಿ ಬೇಕಾದ ಫಲಿತಾಂಶ ಸರಿಯಾಗಿ ಸಿಗದೇ ಇದ್ದಾಗ ಪ್ರತಿದಿನ ಬೆಳಿಗ್ಗೆ ಕೈಯಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ನಿಮ್ಮ ತಲೆಗೆ ಐದು ಅಥವಾ ಏಳು ಬಾರಿ ಸುತ್ತಿ ನಂತರ ಆ ಉಪ್ಪನ್ನ ನೀರಿನಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ ಉಪ್ಪು ನಮ್ಮಲ್ಲಿರುವಂತಹ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದನ್ನೂ ಓದಿ: Loan for Business: ಭರ್ಜರಿ ಯೋಜನೆ, ಬಡವರಿಗೆಂದು ಇರುವ ಯೋಜನೆ ಬಳಸಿ, 50 ಸಾವಿರ ಹಣ ಪಡೆಯುವುದು ಹೇಗೆ ಗೊತ್ತೇ?

ಇನ್ನು ಮನೆಯಲ್ಲಿ ಹಣದ ಸಮಸ್ಯೆ ಇದ್ರೆ ಮನೆಯ ನೈರುತ್ಯ ಮೂಲೆಯಲ್ಲಿ ಒಂದು ಲೋಟ ಉಪ್ಪನ್ನು ಇಡಬೇಕು ಇದರಿಂದ ಧನ ಪ್ರಾಪ್ತಿಯಾಗುತ್ತೆ ಜೊತೆಗೆ ಆರ್ಥಿಕ ಸಮಸ್ಯೆ ನಿವಾರಣೆಯು ಆಗುತ್ತೆ.

ಇನ್ನು ಮನೆಯಲ್ಲೂ ಸ್ವಚ್ಛಗೊಳಿಸುವಾಗ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಶುಚಿಗೊಳಿಸಿದರೆ ಮನೆ ಸ್ವಚ್ಛವಾಗುವುದರ ಜೊತೆಗೆ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯು ಕೂಡ ಹೋಗುತ್ತದೆ. ಹಾಗೆಯೇ ಮನೆಯಲ್ಲಿ ವಸ್ತುಗಳನ್ನ ಉಪ್ಪು ನೀರಿನಿಂದ ಸ್ವಚ್ಛಗೊಳಿಸುವುದು ಒಳ್ಳೆಯದು ಅಂದರೆ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿ ವಸ್ತುಗಳನ್ನು ಸ್ವಚ್ಛಗೊಳಿಸಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಬೆಳೆಯುತ್ತದೆ.

ಇನ್ನು ಕೊನೆಯದಾಗಿ ಸ್ನಾನಗ್ರಹದಲ್ಲಿ ವಾಸ್ತು ದೋಷ ಇದ್ದರೆ ಉಪ್ಪನ್ನು ಬಳಸುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆ ಆಗುತ್ತೆ. ಅರೇ, ಉಪ್ಪಿನಿಂದ ಇಷ್ಟೊಂದು ಪ್ರಯೋಜನಗಳು ಇರುವಾಗ ಯಾಕೆ ಒಮ್ಮೆ ಉಪ್ಪನ್ನ ಬಳಸಿ ನೋಡಬಾರದು ಅಲ್ವೇ.

12 zodiac signsAstrologysaltsalt benefitsvastuಉಪ್ಪುಜ್ಯೋತಿಷ್ಯಾಸ್ತ್ರವಾಸ್ತು