Kannada Bigg Boss Season 9: ಸನ್ಯಾ ಅಯ್ಯರ್ ರೂಪೇಶ್ ಶೆಟ್ಟಿಗೆ ಕಳುಹಿಸಿಕೊಡುವ ಬಟ್ಟೆ ರೂಪೇಶ್ ಗೆ ತಲುಪುತ್ತಿಲ್ಲ ಯಾಕೆ? ಬಿಗ್ ಬಾಸ್ ವಿರುದ್ಧ ಗರಂ ಆದ ಸಾನ್ಯಾ ಅಯ್ಯರ್!

Kannada Bigg Boss Season 9: ಬಿಗ್ ಬಾಸ್ ಸೀಸನ್ -೯ ಆರಂಭಗೊಂಡು ಆಗಲೇ 70 ದಿನಗಳ ಕಳೆದುಹೋಗಿವೆ. ಕಳೆದ ವಾರ ಎಲ್ಲ ಸ್ಪರ್ಧಿಗಳ ಮನೆಯವರು ಆಗಮಿಸಿದ್ದರು. ಇದರಿಂದ ಸ್ಪರ್ಧಿಗಳ ಜೊತೆ ನೋಡುವವರು ಸಹ ಖುಷಿಗೊಂಡಿದ್ದರು. ಬಿಗ್ ಬಾಸ್ ಸ್ಪರ್ಧಿಗಳು ಸಹ ತಮ್ಮ ಮನೆಯವರನ್ನು ನೋಡಿ ಸಖತ್ ಖುಷಿ ಪಟ್ಟಿದ್ದರು. ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಯ ಅದ್ಧೂರಿಯನ್ನು ನೋಡಿ ಕೆಲವರು ದಂಗಾಗಿ ಹೋಗಿದ್ದರು. ಅದನ್ನು ನೇರವಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಸಾನ್ಯಾ ಅಯ್ಯರ್ ಅವರು ಬಿಗ್ ಬಾಸ್ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.

Kannada Bigg Boss Season 9: ಸನ್ಯಾ ಅಯ್ಯರ್ ರೂಪೇಶ್ ಶೆಟ್ಟಿಗೆ ಕಳುಹಿಸಿಕೊಡುವ ಬಟ್ಟೆ ರೂಪೇಶ್ ಗೆ ತಲುಪುತ್ತಿಲ್ಲ ಯಾಕೆ? ಬಿಗ್ ಬಾಸ್ ವಿರುದ್ಧ ಗರಂ ಆದ ಸಾನ್ಯಾ ಅಯ್ಯರ್! https://sihikahinews.com/amp/sanya-iyer-complaint-on-bigg-boss-team/

ಬಿಗ್ ಬಾಸ್ ಸೀಸನ್ -9ರಲ್ಲಿ 18 ಜನರನ್ನು ಮನೆಯ ಒಳಗೆ ಕಳುಹಿಸಿದ್ದರು. ದೀಪಿಕಾ ದಾಸ್, ಅರುಣ ಸಾಗರ್, ನೇಹಾ ಗೌಡ, ಅನುಪಮಾ ಗೌಡ, ಅಮೂಲ್ಯ ಗೌಡ, ಕಾವ್ಯಶ್ರೀ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ವಿನೋದ್ ಗೊಬ್ಬರಗಾಲ, ಆರ್ಯವರ್ಧನ್ ಗುರೂಜಿ, ಪ್ರಶಾಂತ ಸಂಬರ್ಗಿ, ರೂಪೇಶ ರಾಜಣ್ಣ, ನವಾಜ್, ದರ್ಶ್ ಚಂಗಪ್ಪ, ದಿವ್ಯ ಉರುಡುಗ, ಐಶ್ವರ್ಯ ಪಿಸೆ, ಮಯೂರಿ, ರಾಕೇಶ್ ಅಡಿಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಈಗಾಗಲೇ 9 ಜನರು ಎಲಿಮಿನೇಟ್ ಆಗಿದ್ದಾರೆ. ೯ನೇಯವರಾಗಿ ಕಾವ್ಯಶ್ರೀ ಗೌಡ ಮನೆಗೆ ವಾಪಾಸು ಬಂದಿದ್ದಾರೆ. ಈ ವಾರ ರೂಪೇಶ್ ರಾಜಣ್ಣ ಅವರು ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಎಲ್ಲ ಆಟಗಳ ಜೊತೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ಅವರ ಗೆಳೆತನ ಕೂಡ ಹೈಲೈಟ್ ಎಂದರೆ ತಪ್ಪಾಗಲಾರದು. ಸಾನ್ಯಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುವ ವೇಳೆ ಅವರಿಗೆ ರೂಪೇಶ್ ಅವರು ಬಟ್ಟೆ ಕಳುಹಿಸಿಕೊಡುವಂತೆ ಹೇಳಿದ್ದರು. ಮೊದಲ ವಾರ ಕೈಸೇರಿದ ನಂತರ ಮತ್ತೆ ರೂಪೇಶ್ ಅವರಿಗೆ ಬಟ್ಟೆಗಳು ಸೇರಿದಂತೆ ಕಂಡು ಬರುತ್ತಿಲ್ಲ. ಹಾಗಾಗಿ ಈ ದುಃಖವನ್ನು ಸಾನ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾನ್ಯಾ ಅಯ್ಯರ್ ಅವರು 6ನೇ ವಾರಕ್ಕೆ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಹೊರ ಬಂದ ನಂತರ ಒಂದು ವಾರ ಮಾತ್ರ ಕೆಂಪು ಬಣ್ಣದ ಬಟ್ಟೆ ರೂಪೇಶ್ ಅವರ ಕೈ ಸೇರಿತ್ತು. ನಂತರ ಯಾವ ಬಟ್ಟೆ ಕೂಡ ಕೈ ಸೇರಿಲ್ಲ ಎನ್ನಲಾಗಿದೆ. ಇದನ್ನು ವೀಕ್ಷಕರು ಕೂಡ ಲೆಕ್ಕಾಚಾರ ಮಾಡಿದ್ದರು. ಆದರೆ ಇದಕ್ಕೆಲ್ಲ ಸಾನ್ಯಾ ಉತ್ತರ ನೀಡಿದ್ದಾರೆ.

ರೂಪಿ ನೀನು ಸ್ಟ್ರಾಂಗ್ ಆಗಿ ಇರು. ನಾನು  ಕಳುಹಿಸುತ್ತಿರುವ ಶರ್ಟ್ ಗಳು ನಿನಗೆ ತಲುಪಿಸಲಾಗುತ್ತಿಲ್ಲ. ಆದರೆ ಪಾರ್ಸಲ್ ಸ್ವೀಕರಿಸುವುದಾಗಿ ಸಂದೇಶ ಬಂದಿದೆ. ಆದರೆ ನಾನು ನನ್ನ ಪಾಸಿಟಿವಿಟಿ ಹಾಗೂ ಬೆಂಬಲವನ್ನು ಶರ್ಟ್ ಮೂಲಕ ಕಳುಹಿಸುತ್ತಿದ್ದೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೆ ನನ್ನ ಬೆಸ್ಟಿ ಯಾವಾಗಲೂ ಶೈನ್ ಆಗುತ್ತಿರಬೇಕು ಎಂದು ಬರೆದುಕೊಂಡಿದ್ದಾರೆ.

bigg boss kannada season 9Rupesh shettysanya iyer