School Rules: ಇನ್ಮುಂದೆ ಈ ರೀತಿಯ ಮಕ್ಕಳು ಶಾಲೆಗೆ ಸೇರೋ ಹಾಗಿಲ್ಲ. ಹೊಸ ನಿಯಮ ಜಾರಿಗೆ!

School Rules: ಸದ್ಯದ ಮಟ್ಟಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಾಲೆಯ ಮಕ್ಕಳಿಗೆ ಬೇಸಿಗೆ ರಜೆಯನ್ನು ನೀಡಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ 2024 ಹಾಗೂ 25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಹಾಗೂ ಶಾಲೆಗಳು ಕೂಡ ತೆರೆದುಕೊಳ್ಳಲಿವೆ. ಮಕ್ಕಳ ದಾಖಲಾತಿ ಪ್ರಕ್ರಿಯೆ ಕೂಡ ಪ್ರಾರಂಭವಾಗಲಿವೆ. ಇನ್ನು ಒಂದನೇ ತರಗತಿಗೂ ಕೂಡ ಮಕ್ಕಳನ್ನು ಸೇರಿಸುವುದಕ್ಕೆ ಶಿಕ್ಷಣ ಇಲಾಖೆಯಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ಪಡೆದುಕೊಳ್ಳೋಣ ಬನ್ನಿ.

ಈ ರೀತಿಯ ಮಕ್ಕಳನ್ನ ಶಾಲೆಗೆ ಸೇರಿಸುವುದಕ್ಕೆ ಬದಲಾಯಿತು ನೋಡಿ ಹೊಸ ನಿಯಮ!

ಶಿಕ್ಷಣ ಇಲಾಖೆ 2024 ಹಾಗೂ 25ನೇ ಶೈಕ್ಷಣಿಕ ವರ್ಷದ ಸಾಲಿನಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ ಎಂಬುದಾಗಿ ತಿಳಿದು ಬಂದಿದೆ.

ನ್ಯಾಷನಲ್ ಎಜುಕೇಶನ್ ಪಾಲಿಸಿಯ ನಿಯಮದ ಅಡಿಯಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕು ಇದೆ. ಒಂದನೇ ತರಗತಿಗೆ ಮಕ್ಕಳನ ಸೇರಿಸಿಕೊಳ್ಳುವುದಕ್ಕಿಂತ ಮುಂಚೆ ಆ ಮಕ್ಕಳಿಗೆ ಆರು ವರ್ಷ ಆಗಿರುವುದು ಅತ್ಯಂತ ಕಡ್ಡಾಯ ಎನ್ನುವುದಾಗಿ ದೇಶದ ಎಲ್ಲಾ ಕಡೆಗಳಲ್ಲಿ ಕೂಡ ಕೇಂದ್ರ ಶಿಕ್ಷಣ ಇಲಾಖೆ ನಿಯಮವನ್ನು ಜಾರಿಗೆ ತಂದಿದೆ. ಹೀಗಾಗಿ ಜೂನ್ ಒಂದರಿಂದ ಅನ್ವಯ ಆಗುವಂತೆ ದೇಶದ ಪ್ರತಿಯೊಂದು ಕಡೆಗಳಲ್ಲಿ ಹಾಗೂ ರಾಜ್ಯದಲ್ಲಿ ಕೂಡ ಒಂದನೇ ತರಗತಿಗೆ ಮಗುವನ್ನು ಸೇರಿಸಿಕೊಳ್ಳಬೇಕು ಅಂದರೆ ಆರು ಅಥವಾ ಆರು ವರ್ಷಕ್ಕಿಂತ ಹೆಚ್ಚಾಗಿರಬೇಕು ಅನ್ನೋದನ್ನ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ.

ಪೋಷಕರು ಏನ್ ಹೇಳ್ತಾರೆ?

2024 ಹಾಗೂ 25ನೇ ಶೈಕ್ಷಣಿಕ ವರ್ಷಕ್ಕೆ ಅನ್ವಯ ಆಗುವ ರೀತಿಯಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಆ ಮಕ್ಕಳಿಗೆ ಆರು ವರ್ಷ ಅಥವಾ ಕಡ್ಡಾಯವಾಗಿ ಆರು ವರ್ಷಕ್ಕಿಂತ ಹೆಚ್ಚು ಆಗಿರಬೇಕು ಅನ್ನೋದನ್ನ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಪೋಷಕರಿಂದ ಈ ನಿಯಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಯಾಕೆಂದ್ರೆ ಒಂದು ದಿನ ಕಡಿಮೆಯಾಗಿದ್ದರೂ ಕೂಡ ಮಕ್ಕಳಿಗೆ ಶಾಲೆಗೆ ಸೇರೋದಕ್ಕೆ ಆಗೋದಿಲ್ಲ ಹಾಗೂ ಒಂದು ವರ್ಷ ವೇಸ್ಟ್ ಆಗುತ್ತದೆ ಅನ್ನುವುದಾಗಿ ಪೋಷಕರು ಈ ನಿಯಮದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದು ಸ್ವಲ್ಪಮಟ್ಟಿಗೆ ವಯೋಮಿತಿಯ ಸಡಿಲಿಕೆಯನ್ನು ಮಾಡಬೇಕು ಎನ್ನುವಂತಹ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆ ಪೋಷಕರ ಈ ಕೋರಿಕೆಯನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತದೆ ಹಾಗೂ ಮುಂದಿನ ದಿನಗಳಲ್ಲಿ ನಿಯಮಗಳಲ್ಲಿ ಯಾವುದಾದರು ಬದಲಾವಣೆಯನ್ನು ಮಾಡುತ್ತ ಅನ್ನೋದನ್ನು ಕೂಡ ಕಾದು ನೋಡಬೇಕಾಗಿದೆ.

School Rules