Shani Jayanti: ನಿಮ್ಮ ರಾಶಿ ಪ್ರಕಾರ ಶನಿ ಜಯಂತಿಯ ದಿನ ಈ ವಸ್ತುಗಳನ್ನು ದಾನವನ್ನು ಮಾಡಿ ಶನಿ ದೋಷ ದೂರವಾಗುತ್ತದೆ!

Shani Jayanti: ಶನಿಯನ್ನು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನ್ಯಾಯ ದಾತ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಜೂನ್ 6ನೇ ದಿನಾಂಕವನ್ನು ಶನಿ ಜಯಂತಿ ಎಂಬುದಾಗಿ ಪರಿಗಣಿಸಲಾಗುತ್ತದೆ ಈ ವಿಶೇಷ ದಿನದಂದು ನೀವು ಪ್ರತಿ ರಾಶಿ ಅವರು ಕೂಡ ವಿಭಿನ್ನವಾಗಿ ಕೆಲವೊಂದು ವಸ್ತುಗಳನ್ನು ದಾನ ಮಾಡುವ ಮೂಲಕ ಶನಿಯ ದೋಷದಿಂದ ಪಾರಾಗಬಹುದಾಗಿದ್ದು ಶನಿಯ ಆಶೀರ್ವಾದ ಕೂಡ ನಮ್ಮ ಮೇಲೆ ಇರುತ್ತದೆ. ಹಾಗಿದ್ರೆ ನಿಮ್ಮ ರಾಶಿ ಅನುಗುಣವಾಗಿ ನೀವು ಏನೆಲ್ಲ ದಾನ ಮಾಡಬೇಕಾಗಿರುತ್ತದೆ ಅನ್ನೋದನ್ನ ತಿಳಿಯೋಣ ಬನ್ನಿ.

  • ಮೇಷ ರಾಶಿಯವರು ಶನಿಯ ಮನಸ್ಸಿನ ಗೆಲ್ಲಲು ಕಪ್ಪು ಎಳ್ಳು, ಕಬ್ಬಿಣದ ವಸ್ತು ಹಾಗೂ ಉದ್ದಿನಬೇಳೆಯನ್ನು ಇಲ್ಲವೇ ನೀಲಿ ವಸ್ತುಗಳನ್ನು ದಾನ ಮಾಡೋದು ಒಳ್ಳೆಯದು. ವಿಶೇಷವಾಗಿ ಕಪ್ಪು ನಾಯಿಗಳಿಗೆ ಆಹಾರ ಅಥವಾ ಬಿಸ್ಕೆಟ್ ನೀಡುವುದು ಇನ್ನಷ್ಟು ಉತ್ತಮವಾಗಿರುತ್ತದೆ.
  • ವೃಷಭ ರಾಶಿಯವರು ಅಗತ್ಯ ಇರುವವರಿಗೆ ತುಪ್ಪ ಬೆಲ್ಲ ಎಣ್ಣೆ ಹಾಗೂ ಕಪ್ಪು ವಸ್ತ್ರಗಳನ್ನು ದಾನ ಮಾಡುವುದು ಒಳ್ಳೆಯದು. ಹಸುವಿಗೆ ಹುಲ್ಲಿನ ಆಹಾರವನ್ನು ನೀಡುವುದು ಇನ್ನಷ್ಟು ಉತ್ತಮ ಲಾಭವನ್ನು ನೀಡುತ್ತದೆ.
  • ಮಿಥುನ ರಾಶಿಯವರು ಶನಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಬೆಳ್ಳಿ ಮೊಸರು ಮಜ್ಜಿಗೆ ಕರಿಮೆಣಸು ಹಾಗೂ ನೀಲಿ ವಸ್ತುಗಳನ್ನು ದಾನ ಮಾಡುವುದರ ಜೊತೆಗೆ ಕಾಗೆಗೆ ಆಹಾರ ನೀಡುವುದು ಕೂಡ ಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ.
  • ನೀಲಿ ಬಣ್ಣದ ವಸ್ತುಗಳ ಜೊತೆಗೆ ಹಾಲು ಅಕ್ಕಿ ಮೊಸರು ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಕರ್ಕ ರಾಶಿಯವರಿಗೆ ಶನಿಯ ಆಶೀರ್ವಾದ ಸಿಗುವ ಹಾಗೆ ಮಾಡುತ್ತದೆ.
  • ಗೋಧಿ ತುಪ್ಪದ ಜೊತೆಗೆ ಕೆಂಪು ಹಾಗೂ ಕೇಸರಿ ಬಣ್ಣದ ವಸ್ತುಗಳನ್ನು ಮತ್ತು ಚಿನ್ನವನ್ನು ದಾನ ಮಾಡುವುದರಿಂದ ಸಿಂಹ ರಾಶಿಯವರಿಗೆ ಶನಿಯ ಆಶೀರ್ವಾದ ಸಿಗಲಿದೆ. ಈ ದಿನ ಶನಿಯ ಜೊತೆಗೆ ಹನುಮಂತನ ಪೂಜೆ ಕೂಡ ನಡೆಯಬೇಕು.
  • ಕನ್ಯಾ ರಾಶಿಯವರು ಶನಿಯ ಆಶೀರ್ವಾದವನ್ನು ಪಡೆಯುವುದಕ್ಕಾಗಿ ಹಸಿರು ಬಣ್ಣದ ತರಕಾರಿ ಹಣ್ಣುಗಳನ್ನು ಮತ್ತು ಹಸುಗಳಿಗೆ ಹಸಿರು ಹುಲ್ಲನ್ನು ದಾನ ಮಾಡುವ ಮೂಲಕ ತಮ್ಮ ಪಾಪ ಕರ್ಮಗಳನ್ನು ಕಳೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಮುತ್ತನ್ನು ಕೂಡ ದಾನ ಮಾಡಬಹುದಾಗಿದೆ.
  • ತುಲಾ ರಾಶಿಯ ಜನರು ಈ ಸಂದರ್ಭದಲ್ಲಿ ಎಣ್ಣೆ ತುಪ್ಪಗಳ ಜೊತೆಗೆ ಬಡ ಹೆಣ್ಣು ಮಕ್ಕಳಿಗೆ ಬಟ್ಟೆಯನ್ನು ದಾನ ಮಾಡುವ ಮೂಲಕ ಕೂಡ ಶನಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದಾದಂತಹ ಅವಕಾಶವನ್ನು ಹೊಂದಿದ್ದಾರೆ. ಈ ಸಮಯದಲ್ಲಿ ತಾಮ್ರದ ಪಾತ್ರಗಳನ್ನ ನೀಡುವುದು ಕೂಡ ಅವರಿಗೆ ಶುಭವಾಗಿ ಕಾಣಿಸಿಕೊಳ್ಳಲಿದೆ.
  • ವೃಶ್ಚಿಕ ರಾಶಿಯ ಜನರು ಬಡವರಿಗೆ ಕಪ್ಪು ಬಟ್ಟೆಗಳನ್ನು ದಾನ ಮಾಡಬೇಕು ಹಾಗೂ ಬೇಳೆ ಕಾಳಿನ ಜೊತೆಗೆ ಕೆಂಪು ಬಣ್ಣದ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು.
  • ಧನುರಾಶಿಯ ಜನರು ಹಳದಿ ಬಣ್ಣದ ಆಹಾರ ವಸ್ತುಗಳಾಗಿರುವಂತಹ ಬೇಳೆ ಅರಿಶಿಣ ಹಾಗೂ ಕಡಲೆ ಬೇಳೆಗಳನ್ನು ದಾನ ಮಾಡಿ ಹಾಗೂ ಹಳದಿ ಬಣ್ಣದ ಹಣ್ಣುಗಳಾಗಿರುವಂತಹ ಮಾವಿನ ಹಣ್ಣು ಅಥವಾ ಬಾಳೆಹಣ್ಣುಗಳನ್ನು ದಾನ ಮಾಡುವುದು ಕೂಡ ನಿಮಗೆ ಶುಭವಾಗಿರುತ್ತದೆ.
  • ಮಕರ ರಾಶಿಯ ಜನರು ಶನಿಯ ಆಶೀರ್ವಾದವನ್ನು ಪಡೆದುಕೊಳ್ಳಲು ನೀಲಿ ಬಣ್ಣದ ವಸ್ತು ಅಥವಾ ಬಟ್ಟೆಗಳನ್ನು ದಾನ ಮಾಡಬೇಕು ಇದರ ಜೊತೆಗೆ ಕಬ್ಬಿಣದ ವಸ್ತುಗಳನ್ನು ದಾನ ಮಾಡೋದು ಕೂಡ ಒಳ್ಳೆಯದನ್ನು ಮಾಡುತ್ತದೆ.
  • ಕುಂಭ ರಾಶಿಯ ಜನರು ಶನಿ ದೇವಾಲಯಕ್ಕೆ ಹೋಗಿ ಪೂಜಿ ಸಲ್ಲಿಸಬೇಕು ಹಾಗೂ ನೀಲಿ ವಸ್ತುಗಳನ್ನ ದಾನ ಮಾಡಬೇಕು. ಇನ್ನು ಹಾಲು ಮಜ್ಜಿಗೆ ಅಂತಹ ವಸ್ತುಗಳನ್ನು ದಾನ ಮಾಡುವುದು ಕೂಡ ಒಳ್ಳೆಯದು ಮಾಡುತ್ತದೆ
  • ಮೀನ ರಾಶಿಯವರು ಕೂಡ ಹಳದಿ ಬಣ್ಣದ ಆಹಾರ ವಸ್ತು ಹಾಗೂ ಬೇರೆ ರೀತಿಯ ಹಳದಿ ಬಣ್ಣದ ವಸ್ತುಗಳನ್ನು ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದರಿಂದ ಶನಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ.
Shani Jayanti