Sharavana Masa: ಶ್ರಾವಣ ಮಾಸದಲ್ಲಿ ಅಪ್ಪಿ ತಪ್ಪಿ ಮಾಂಸಹಾರ ಸೇವಿಸಿದ್ರೆ ಏನಾಗತ್ತೆ ಗೊತ್ತಾ? ಇಲ್ಲಿದೆ ನೊಡಿ ಸಿಕ್ರೇಟ್!

Sharavana Masa: ಆಗಸ್ಟ್ 5 ರಿಂದ ಪ್ರಾರಂಭವಾಗಿರುವಂತಹ ಶ್ರಾವಣ ಮಾಸ ಹಿಂದೂ ಸಂಸ್ಕೃತಿಯ ಅತ್ಯಂತ ಪವಿತ್ರವಾದ ಸ್ಥಾನವನ್ನು ಹೊಂದಿದೆ. ಶಿವಪಮಾತ್ಮ ಹಾಗೂ ಶಿವಭಕ್ತರಿಗೆ ಈ ಮಾಸ ಅತ್ಯಂತ ಪವಿತ್ರ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಈ ತಿಂಗಳಿನಲ್ಲಿ ಕೆಲವೊಂದು ಪ್ರಮುಖ ಆಚರಣೆಗಳನ್ನು ಪರಿ ಪಾಲಿಸುವುದು ಕೂಡ ಪ್ರಮುಖವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಈ ತಿಂಗಳಿನಲ್ಲಿ ಪ್ರಮುಖವಾಗಿ ಮಾಂಸಹಾರದಿಂದ ದೂರ ಇರುತ್ತಾರೆ. ಇದರ ಹಿಂದಿನ ನಿಜವಾದ ಕಾರಣ ಏನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಬಹುತೇಕ ಪ್ರತಿದಿನ ಮಾಂಸಹಾರವನ್ನು ಸೇವಿಸುವವರು ಕೂಡ ಶ್ರಾವಣ ಮಾಸದಲ್ಲಿ ಅದನ್ನ ಮುಟ್ಟೋದೆ ಇಲ್ಲ. ಅವರನ್ನು ನೋಡಿದರೆ ಜೀವನದಲ್ಲಿ ಯಾವತ್ತೂ ಅವರು ಮಾಂಸಹಾರ ತಿನ್ನೋದಿರ್ಲಿ ನೋಡಿದ್ದು ಕೂಡ ಇಲ್ಲ ಅನ್ನೋ ರೀತಿಯಲ್ಲಿ ಇರ್ತಾರೆ. ಕೆಲವರು ಶ್ರಾವಣ ಮಾಸದಲ್ಲಿ ಮಾತ್ರ ವ್ರತವನ್ನು ಪಾಲಿಸುವುದಕ್ಕಾಗಿ ಮಾಂಸಹಾರವನ್ನು ತ್ಯಜಿಸುತ್ತಾರೆ. ಇನ್ನು ಕೆಲವರು ಪೂಜೆಗಳಲ್ಲಿ ಅಶುದ್ಧಿ ಆಗಬಾರದು ಎನ್ನುವ ಕಾರಣಕ್ಕಾಗಿ ಆ ಸಮಯದಲ್ಲಿ ಮಾತ್ರ ಸಸ್ಯಹಾರಿಗಳಾಗುತ್ತಾರೆ.

ಶ್ರಾವಣಮಾಸ ಎಂದರೆ ಮಳೆಗಾಲ ಇರುವುದರಿಂದಾಗಿ ದೇಹದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆ ಅಷ್ಟೊಂದು ಚುರುಕಾಗಿರುವುದಿಲ್ಲ. ಸಸ್ಯಹಾರಕ್ಕೆ ಹೋಲಿಸಿದರೆ ಮಾಂಸಾಹಾರ ಸ್ವಲ್ಪಮಟ್ಟಿಗೆ ಕಠಿಣ ಆಹಾರವಾಗಿರುತ್ತದೆ ಹಾಗೂ ಜೀರ್ಣಕ್ರಿಯೆಗೆ ಕೂಡ ಸ್ವಲ್ಪ ಮಟ್ಟಿಗೆ ಕಷ್ಟಕರವಾಗಿರುವಂತಹ ಆಹಾರವಾಗಿದೆ. ಇದೇ ಕಾರಣಕ್ಕಾಗಿ ಶ್ರಾವಣ ಮಾಸದಲ್ಲಿ ಮಾಂಸಹರಕ್ಕಿಂತ ಸಸ್ಯಹಾರ ಅತ್ಯಂತ ಉತ್ತಮ ಎಂಬುದನ್ನು ವೈಜ್ಞಾನಿಕವಾಗಿ ಕೂಡ ನಾವು ಹೇಳಬಹುದಾಗಿದೆ. ಇನ್ನು ಮಳೆಗಾಲದಲ್ಲಿ ನೀರು ಕಲುಷಿತವಾಗುವುದರಿಂದಾಗಿ ಅದರಿಂದ ನೀವು ಸೇವಿಸುವಂತಹ ಮಾಂಸಹಾರದ ಜೀವಿಗಳು ಕೂಡ ಕಲುಷಿತವಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಹೀಗಾಗಿ ವೈಜ್ಞಾನಿಕವಾಗಿ ಶ್ರಾವಣ ಮಾಸದಲ್ಲಿ ಸಸ್ಯಹಾರವೇ ಸೂಕ್ತ ಎಂಬುದು ತಜ್ಞರ ಅಭಿಪ್ರಾಯ.

ಇನ್ನು ವಿಶೇಷವಾಗಿ ಮೀನುಗಳನ್ನು ಸೇವಿಸುವಂತಹ ಜನರಿಗೆ ಹೇಳುವಂತಹ ವಿಚಾರ ಅಂದ್ರೆ ಮಳೆಗಾಲದ ಸಂದರ್ಭ ಮೀನುಗಳ ಸಂತಾನೋತ್ಪತ್ತಿಯ ಸಂದರ್ಭ ಆಗಿರುತ್ತದೆ ಹೀಗಾಗಿ ಈ ಸಮಯದಲ್ಲಿ ಮೀನಿನ ಸೇವನೆ ಮಾಡೋದು ಅಷ್ಟೊಂದು ಸರಿ ಅಲ್ಲ ಎನ್ನುವುದು ಕೂಡ ತಜ್ಞರ ಅಭಿಪ್ರಾಯ ಆಗಿರುತ್ತದೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಿರ್ದಿಷ್ಟವಾಗಿ ಮೀನಿನ ಸೇವನೆ ಮಾಡುವವರು ಕೂಡ ಆಹಾರವನ್ನು ಸೇವನೆ ಮಾಡದೆ ಇರುವುದು ಒಳ್ಳೆಯದು ಎಂಬುದು ತಜ್ಞರ ಅಭಿಪ್ರಾಯ. ಇದು ಪ್ರಕೃತಿಯ ಸಂತುಲನವನ್ನು ತಪ್ಪಿಸುವಂತಹ ಸಾಧ್ಯತೆ ಕೂಡ ಇರೋದ್ರಿಂದಾಗಿ ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುವ ಸಲುವಾಗಿ ಶ್ರಾವಣ ಮಾಸದಲ್ಲಿ ಮಾಂಸಹಾರದ ಸೇವನೆ ಕಡಿಮೆ ಮಾಡುವುದು ಒಳ್ಳೆಯದು ಎಂಬುದು ಕೂಡ ಇಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವಂತ ವಿಚಾರವಾಗಿದೆ. ಹೀಗಾಗಿ ಇದು ಆಚರಣೆ ಅಥವಾ ಸಂಸ್ಕೃತಿಯ ಒಂದು ಭಾಗ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ, ಆದರೆ ನಿಜವಾಗಿ ವೈಜ್ಞಾನಿಕ ರೂಪದಲ್ಲಿ ಕೂಡ ಇದೊಂದು ಅರ್ಥವತ್ತಾಗಿರುವಂತಹ ಆಚರಣೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ನೀವು ಕೂಡ ಈ ಕ್ರಮವನ್ನು ಪಾಲಿಸುತ್ತಾ ಇದ್ದರೆ ತುಂಬಾ ಒಳ್ಳೆಯ ಅಭ್ಯಾಸ ಎಂದು ಹೇಳಬಹುದಾಗಿದೆ.