Shine Shetty: ಸಣ್ಣ ಪೆಟ್ಟಿಗೆ ಅಂಗಡಿಯಂಥ ಹೋಟೆಲ್ ನಡೆಸುತ್ತಿದ್ದ ಈ ನಟ ಇಂದು ಎಂಥ ಉದ್ಯಮ ಆರಂಭಿಸಿದ್ದಾರೆ ನೋಡಿ; ಬಿಗ್ ಬಾಸ್ ಮನೆಯೇ ಇದಕ್ಕೆಲ್ಲಾ ಅಡಿಪಾಯ ಆಯ್ತಾ?!

Shine Shetty: ಬೆಂಗಳೂರಿನ ಬನಶಂಕರಿಯಲ್ಲಿ ಗಲ್ಲಿ ಕಿಚನ್ ಎನ್ನುವಂತಹ ಒಂದು ಮೊಬೈಲ್ ಕ್ಯಾಂಟೀನ್ ಇತ್ತು ಅದನ್ನ ಯಾರು ನಡೆಸುತ್ತಿದ್ದಾರೆ ಅದರ ಓನರ್ ಯಾರು ಎನ್ನುವುದು ಮೊದಲು ಯಾರಿಗೂ ಗೊತ್ತಿರಲಿಲ್ಲ. ಆ ಹೋಟೆಲ್ ಅಷ್ಟು ಫೇಮಸ್ ಕೂಡ ಆಗಿರಲಿಲ್ಲ. ಆದರೆ ಆತ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದೆ ತಡ, ಗಲ್ಲಿ ಕಿಚನ್ ಸಿಕ್ಕಾಪಟ್ಟೆ ಫೇಮಸ್ ಆಯ್ತು. ಯಾಕಂದ್ರೆ ಅವರೇ ಅದರ ಓನರ್. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಅನ್ನೋದು ಈಗ ನಿಮಗೆ ಗೊತ್ತಾಗಿರಬಹುದು, ಅವರೇ. ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ.

ಶೈನ್ ಶೆಟ್ಟಿ ಕರಾವಳಿ ಮೂಲದವರು.   ಇವರಿಗೆ ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಆಸೆ ಬಹಳ ಇತ್ತು ಆದರೆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಕಿರುತೆರೆಯಿಂದ ಅವರಿಗೆ ಅವಕಾಶಗಳು ಬಂದರೂ ಕೂಡ ಸಿನಿಮಾ ಮಾಡಬೇಕು ಎನ್ನುವ ಉದ್ದೇಶದಿಂದ ಕಿರುತೆರೆಯಲ್ಲಿ ಅಭಿನಯಿಸಲಿಲ್ಲ ಆದರೆ ಆರ್ಥಿಕ ಸಂಕಷ್ಟ ಎದುರಾಗಿತ್ತು ಹಾಗಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಬೇಕಾಯಿತು.

ನಂತರ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿಂದ ಶೈನ್ ಶೆಟ್ಟಿ ಇನ್ನಷ್ಟು ಶೈನ್ ಆದರು ಎಂದು ಹೇಳಬಹುದು. ಬಿಗ್ ಬಾಸ್ ಟೈಟಲ್ ವಿನ್ ಆದಮೇಲೆ ಶೈನ್ ಶೆಟ್ಟಿಯವರ ಲಕ್ ತಿರುಗಿತು. ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ರಿಯಾಲಿಟಿ ಶೋ ಹೋಸ್ಟ್ ಕೂಡ ಆಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಶೈನ್ ಶೆಟ್ಟಿ ಇರುವಾಗ ಅವರ ತಾಯಿಯೇ ಗಲ್ಲಿ ಕಿಚನ್ ನಡೆಸುತ್ತಿದ್ದರು. ಅಲ್ಲಿಂದ ಅವರಿಗೆ ವ್ಯಾಪಾರವೂ ಹೆಚ್ಚಾಗಲು ಆರಂಭವಾಯಿತು.

ಬಿಗ್ ಬಾಸ್ ಬಳಿಕ ಶೈನ್ ಶೆಟ್ಟಿ ಅವರಿಗೆ ಸಿನಿಮಾದಲ್ಲೂ ಅವಕಾಶಗಳು ಸಿಗುತ್ತಿವೆ. ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ನಲ್ಲಿ ಕೂಡ ಅವರ ಸ್ನೇಹಿತನ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಕಾಂತಾರ ಸಿನಿಮಾದಲ್ಲಿಯೂ ಸಣ್ಣ ಪಾತ್ರವೊಂದನ್ನು ಶೈನ್ ಶೆಟ್ಟಿ ನಿಭಾಯಿಸಿದ್ದಾರೆ.

ಆದ್ರೆ ಶೈನ್ ಶೆಟ್ಟಿ ಅವರಿಗೆ ಸಿನಿಮಾಕ್ಕಿಂತ ಉದ್ಯಮದ ಕಡೆಗೇ ಒಲವು ಹೆಚ್ಚಾದಂತೆ ಇದೆ. ಸಿನಿಮಾ ಮಾಡುತ್ತಿದ್ದರು ಅದರ ಜೊತೆಯಲ್ಲಿ ತಮ್ಮ ಫುಡ್ ಉದ್ಯಮವನ್ನು ಹೆಚ್ಚಿಸುತ್ತಿದ್ದಾರೆ. ಇದೀಗ ಗಲ್ಲಿ ಕಿಚನ್ ಹೊಸ ಬ್ರಾಂಚ್ ಓಪನ್ ಮಾಡಿದ್ದಾರೆ. ಬೆಂಗಳೂರಿನ ಆರ್ ಅರ್ ನಗರದಲ್ಲಿ ಇನ್ನೊಂದು ಗಲ್ಲಿ ಕಿಚನ್ ಓಪನ್ ಮಾಡಲಾಗಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟನೆ ಮಾಡಿದ್ದಾರೆ. ಸದ್ಯ ಚಿತ್ರರಂಗದ ಎಲ್ಲರೂ ಶೈನ್ ಶೆಟ್ಟಿ ಅವರಿಗೆ ಅಲ್ ದಿ ಬೆಸ್ಟ್ ಹೇಳಿದ್ದಾರೆ. ನೀವು ಆರ್ ಆರ್ ನಗರಕ್ಕೆ ಹೋದರೆ ತಪ್ಪದೆ ಗಲ್ಲಿ ಕಿಚನ್ ಗೆ ಒಂದು ವಿಸಿಟ್ ಕೊಟ್ಟು ಬನ್ನಿ..

galli kitchenshine shetty