Kannada Film: ತಮಿಳಿನ ಸ್ಟಾರ್ ನಟ ಧನುಷ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಕರುನಾಡ ಚಕ್ರವರ್ತಿ; ಶಿವಣ್ಣ ನಿಭಾಯಿಸಲಿರುವ ಪಾತ್ರ ಯಾವುದು ಗೊತ್ತೇ?

Kannada Film: ವಯಸ್ಸು 60ಕ್ಕೆ ಕಾಲಿಟ್ಟರೂ ನಮ್ಮ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ (Shivaraj kumar) ಅವರು ಸಿಕ್ಕಾಪಟ್ಟೆ ಬ್ಯಸಿಯಾಗಿರುತ್ತಾರೆ. ವರ್ಷಕ್ಕೆ 4-5 ಸಿನೆಮಾಗಳನ್ನು ಮಾಡುತ್ತಾರೆ. ಕನ್ನಡದಲ್ಲಿ ಅವರ 125ನೇ ಸಿನೆಮಾ ವೇದ ಬಿಡುಗಡೆಗೆ ತಯಾರಾಗುತ್ತಿದೆ. ಈ ಸಿನೆಮಾವನ್ನು ಗೀತಾ (Geeta) ಶಿವರಾಜ್ ಕುಮಾರ್ ಅವರು ನಿರ್ಮಾಣ ಮಾಡುತ್ತಿರುವುದು ಮತ್ತೊಂದು ವಿಶೇಷ. ಇದೀಗ ಶಿವರಾಜ್ ಕುಮಾರ್ ಅವರು ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. ಈಗಾಗಲೇ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರ ಜೈಲರ್ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರ ಮಾಜಿ ಅಳಿಯ, ತಮಿಳಿನ ಸ್ಟಾರ್ ನಟ ಧನುಷ್ (Danush) ಅವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ದೊಡ್ಮನೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Kannada Film: ತಮಿಳಿನ ಸ್ಟಾರ್ ನಟ ಧನುಷ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಕರುನಾಡ ಚಕ್ರವರ್ತಿ; ಶಿವಣ್ಣ ನಿಭಾಯಿಸಲಿರುವ ಪಾತ್ರ ಯಾವುದು ಗೊತ್ತೇ? https://sihikahinews.com/amp/shivanna-in-dhanush-film/

ರಜನಿಕಾಂತ್ ಅವರ ಜೊತೆ ಜೈಲರ್ (jailer) ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗಾಗಲೇ ಶಿವಣ್ಣ ಅವರು ಹೈದರಾಬಾದ್ (Hyderabad) ಗೆ ತೆರಳಿ ಈಗಾಗಲೇ ಶೂಟಿಂಗ್ನಲ್ಲಿ ಭಾಗವಹಿಸಿ ತಮ್ಮ ಭಾಗದ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಈಗ ಧನುಷ್ ಅವರ ಸಿನೆಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಸದ್ಯದಲ್ಲೇ ಅದರ ಶೂಟಿಂಗ್ (Shooting) ಸಹ ಆರಂಭಿಸಲಾಗುತ್ತಿದೆ. ಧನುಷ್ ಹಾಗೂ ಅರುಣ ಮಲ್ಲೇಶ್ವರನ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನೆಮಾದಲ್ಲಿ ಡಾ. ಶಿವರಾಜ್ ಕುಮಾರ್ ಅವರು ನಟಿಸಲಿದ್ದಾರೆ. ಕಳೆದ ಸಪ್ಟೆಂಬರ್ನಲ್ಲಿ ಈ ಸಿನೆಮಾ ಲಾಂಚ್ ಆಗಿದೆ. ಚಿತ್ರಿಕರಣ ಸಹ ಆರಂಭಗೊಂಡಿದೆ. ಇದೀಗ ಕ್ಯಾಪ್ಟನ್ ಮಿಲ್ಲರ್ ಸಿನೆಮಾ ತಂಡ ಸೇರಿಕೊಳ್ಳಲಿದ್ದಾರೆ. ಎರಡನೇ ಸಿನೆಮಾ ಚಿತ್ರಿಕರಣ ಸಹ ಮುಗಿಸಲಿದ್ದಾರೆ. ಇದನ್ನೂ ಓದಿ: Kannada Bigg Boss Season 9: ಸನ್ಯಾ ಅಯ್ಯರ್ ರೂಪೇಶ್ ಶೆಟ್ಟಿಗೆ ಕಳುಹಿಸಿಕೊಡುವ ಬಟ್ಟೆ ರೂಪೇಶ್ ಗೆ ತಲುಪುತ್ತಿಲ್ಲ ಯಾಕೆ? ಬಿಗ್ ಬಾಸ್ ವಿರುದ್ಧ ಗರಂ ಆದ ಸಾನ್ಯಾ ಅಯ್ಯರ್!

ಧನುಷ್ ಅವರ ಸಿನೆಮಾದಲ್ಲಿ ನಮ್ಮ ಹ್ಯಾಟ್ರಿಕ್ ಹಿರೋ ಅಭಿನಯಿಸುವುದು ಬಹುತೇಕ ಪಕ್ಕಾ ಆಗಿದೆ. ಇದುವರೆಗೂ ಈ ಸಿನೆಮಾದಲ್ಲಿ ಯಾವ ರೀತಿಯ ಪಾತ್ರ ನಿರ್ವಹಿಸಲಿದ್ದಾರೆ ಎಂದು ತಿಳಿದಿರಲಿಲ್ಲ. ಆದರೆ ಅದು ಈಗ ಬಹಿರಂಗಗೊಂಡಿದೆ. ಈ ಸಿನೆಮಾದಲ್ಲಿ ಡಾ. ಶಿವರಾಜ್ ಕುಮಾರ್ ಅವರು ಧನುಷ್ ಅವರ ಅಣ್ಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕ್ಯಾಪ್ಟನ್ ಮಿಲ್ಲರ್ ಸಿನೆಮಾದಲ್ಲಿ ಧನುಷ್ ಅವರ ಪಾತ್ರದ ಲುಕ್ ರಿವಿಲ್ ಆಗಿದೆ. ಹಾಗಾಗಿ ಶಿವಣ್ಣ ಅವರು ಕ್ಲಾಸ್ ಆಗಿ ಕಾಣುತ್ತಾರೋ, ಮಾಸ್ ಆಗಿ ಕಾಣುತ್ತಾರೋ ಎನ್ನುವುದು ಸದ್ಯದ ಕುತೂಹಲವಾಗಿದೆ.

DhanushKannada FilmShivannaShivaraj Kumarಕನ್ನಡ ಸಿನಿಮಾ