Sleep: ಇದನ್ನ ಹೆಂಗಸರು ಗಂಡಸರಿಗಿಂತ ಹೆಚ್ಚಾಗಿ ಮಾಡ್ಬೇಕಂತೆ ಯಾಕೆ ಗೊತ್ತಾ? ಗೊತ್ತಾದ್ರೆ ನೀವ್ ಶಾಕ್ ಆಗೋದ್ ಗ್ಯಾರಂಟಿ!

Sleep: ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನಿದ್ರೆ ಎನ್ನುವುದು ಅತ್ಯಂತ ಪ್ರಮುಖ ಎಂಬುದಾಗಿ ಪರಿಗಣಿಸಲಾಗುತ್ತದೆ ಹೀಗಾಗಿ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ದಿನದಲ್ಲಿ ನಿದ್ರೆ ಮಾಡಲೇಬೇಕು ಇದರಿಂದಾಗಿ ಮೆದುಳಿಗೆ ಶಾಂತಿ ಹಾಗೂ ವಿಶ್ರಾಮ ಸಿಗುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದರಿಂದಾಗಿ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ಕೂಡ ಲವಲವಿಕೆ ಕಂಡು ಬರುತ್ತದೆ. ಆದರೆ ವೈದ್ಯಲೋಕ ಹೇಳುವಂತೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಹೆಚ್ಚಿನ ಸಮಯಗಳ ಕಾಲ ನಿದ್ರೆ ಮಾಡಬೇಕು ಎಂಬುದಾಗಿ ತಿಳಿಸಲಾಗುತ್ತದೆ.

ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಸ್ವಲ್ಪಮಟ್ಟಿಗೆ ಹೆಚ್ಚಿನ ಕಾಲದ ನಿದ್ರೆಯ ಅವಶ್ಯಕತೆ ಇರುತ್ತದೆ ಎಂಬುದಾಗಿ ಪರಿಣಿತ ವೈದ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆರೋಗ್ಯಕ್ಕೆ ನಿದ್ರೆಯ ಅವಶ್ಯಕತೆ ಅತ್ಯಂತ ಬೇಕಾಗಿರುವಂತಹ ವಿಚಾರವಾಗಿದ್ದು ಇದರಿಂದಾಗಿ ನಿಮ್ಮ ಮಾನಸಿಕ ಆರೋಗ್ಯಕ್ಕೆ ಕೂಡ ಲಾಭವಿದೆ. ಜೀವನದಿಂದ ಖಿನ್ನತೆಯನ್ನು ದೂರ ಮಾಡುವುದಕ್ಕೆ ಆರೋಗ್ಯ ಸಮಸ್ಯೆಯಿಂದ ಬಚಾವ್ ಆಗೋದಕ್ಕೆ ಹಾಗೂ ಅದರಲ್ಲೂ ವಿಶೇಷವಾಗಿ ಹೃದಯ ಸಮಸ್ಯೆಯಿಂದ ಹಿಂದೆ ಇರೋದಕ್ಕೆ ಸರಿಯಾದ ನಿದ್ರೆ ನಿಮಗೆ ಸಹಾಯ ಮಾಡುತ್ತದೆ.

ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿಗೆ ನಿದ್ರೆ ಯಾಕೆ ಬೇಕು?

ಪುಟ್ಟ ಮಕ್ಕಳಿಗೆ ಕನಿಷ್ಟ ಪಕ್ಷದ ದಿನಕ್ಕೆ 10 ಗಂಟೆಗಳ ನಿದ್ರೆ ಅವಶ್ಯಕತೆ ಆಗಿರಬೇಕು. ಇನ್ನು ವಯಸ್ಕರಿಗೆ ದಿನಕ್ಕೆ ಏಳರಿಂದ ಎಂಟು ಗಂಟೆಗಳ ನೀವು ನಿದ್ರೆ ಅತ್ಯಂತ ಅವಶ್ಯಕ. 40ನೇ ವಯಸ್ಸಿನ ನಂತರ ನಿದ್ರಾವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ ಎಂಬುದಾಗಿ ವೈದ್ಯರು ಕೂಡ ಸಲಹೆ ನೀಡುತ್ತಾರೆ.

ದೈನಂದಿನ ಚಟುವಟಿಕೆಗಳಲ್ಲಿ ಚೇತರಿಸಿಕೊಳ್ಳುವುದಕ್ಕಾಗಿ ಮಹಿಳೆಯರಿಗೆ ಪುರುಷರಿಗಿಂತ ಕನಿಷ್ಠಪಕ್ಷ ಇಪ್ಪತ್ತು ನಿಮಿಷಗಳ ಹೆಚ್ಚಿನ ನಿದ್ರೆಯ ಅವಶ್ಯಕತೆ ಇರುತ್ತದೆ ಎಂಬುದಾಗಿ ವೈದ್ಯರು ತಿಳಿಸುತ್ತಾರೆ. ಮಹಿಳೆಯರು ನಿದ್ರೆಯನ್ನು ಕಡಿಮೆ ಮಾಡಿದರೆ ಅವರು ಶಾರಿರಿಕವಾಗಿ ಇನ್ನಷ್ಟು ಕೊರತೆಯನ್ನು ಕಾಣುತ್ತಾರೆ. ಹಾರ್ಮೋನುಗಳ ಕೊರತೆ ಕೂಡ ಉಂಟಾಗುತ್ತೆ ಹಾಗೂ ಬೇಗನೆ ಅನಾರೋಗ್ಯ ಉಂಟಾಗುತ್ತದೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ ಹೀಗಾಗಿ ಅವರಿಗೆ ನಿದ್ರೆಯ ಅವಶ್ಯಕತೆ ಅತ್ಯಂತ ಅಗತ್ಯವಾಗಿರುತ್ತದೆ ಆದರೆ ಸಾಕಷ್ಟು ಬಾರಿ ಅವರಿಗೆ ನಿದ್ರೆಯಲ್ಲಿ ಕಡಿಮೆ ಕೊರತೆ ಉಂಟಾಗುತ್ತದೆ.

ಒಂದು ವೇಳೆ ಕಡಿಮೆ ನಿದ್ರೆ ಎನ್ನುವುದು ಮಹಿಳೆಯರನ್ನು ಆವರಿಸಿಕೊಂಡರೆ ಅವರ ನಡವಳಿಕೆಯಲ್ಲಿ ಕೂಡ ಅದು ಸಾಕಷ್ಟು ನೆಗೆಟಿವ್ ಪರಿಣಾಮವನ್ನು ಬೀರುವಂತೆ ಮಾಡುತ್ತದೆ ಉದಾಹರಣೆಗೆ ವೇಗವಾಗಿ ಕೋಪ ಮಾಡಿಕೊಳ್ಳುವುದು ಹಾಗೂ ಬೇರೆ ಕೆಲಸಗಳಲ್ಲಿ ಅವರಿಗೆ ಕಾಳಜಿ ಇಲ್ಲದೆ ಇರುವುದು ಕೂಡ ನಡೆಯುತ್ತದೆ. ಆದಷ್ಟು ಬೇಗ ಮಲಗುವುದಕ್ಕೆ ಹಾಗೂ ಒಂದೇ ಸಮಯದಲ್ಲಿ ಮಲಗಿ ಒಂದೇ ಸಮಯದಲ್ಲಿ ಎದ್ದೇಳುವಂತಹ ರೂಢಿಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಮಲಗುವ ವಾತಾವರಣವನ್ನು ಚೆನ್ನಾಗಿ ಇಟ್ಟುಕೊಳ್ಳುವುದನ್ನ ಪ್ರಾರಂಭಿಸಿ ನಿಮಗೆ ನಿದ್ರೆ ಚೆನ್ನಾಗಿ ಬರುತ್ತೆ. ಮಲಗುವ ಸಂದರ್ಭದಲ್ಲಿ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಬಳಸುವುದಕ್ಕೆ ಹೋಗಬೇಡಿ.

Sleep