SmartPhone:ಮೇಡ್ ಇನ್ ಇಂಡಿಯಾ ಅಡಿ ಭಾರತದಲ್ಲಿಯೇ ಸಿದ್ದವಾಗಿರುವ ಫೋನ್ ಹೇಗಿದೆ ಎಂದು ತಿಳಿದರೆ ಇಂದೇ ಫೋನ್ ಬಿಸಾಕಿ, ಇದನ್ನು ಕೊಂಡು ಕೊಳ್ತೀರಾ.

SmartPhone:ಮೊಬೈಲ್ (Mobile) ನಲ್ಲಿ ಕ್ರಾಂತಿ ಆಗಿದ್ದೆ ತಡ ಎಲ್ಲರ ಕೈಯಲ್ಲೂ ಒಂದಾದರೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಅಲ್ಲದೆ ಭಾರತದಲ್ಲಿ ಬಹುತೇಕರು ಡಿಜಿಟಲ್ ಪೇಮೆಂಟ್ ಮೋಡ್ ಉಪಯೋಗಿಸುತ್ತಿದ್ದಾರೆ. ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಲೇ ಇದೆ. ಹಾಗಾಗಿ ಮೊಬೈಲ್ ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕಂಪನಿಗಳು ಸಹ ಹಲವು ರೀತಿಯ ಆಫರ್ಗಳನ್ನು ನೀಡುತ್ತಿವೆ. ಇದೀಗ ನಮ್ಮ ಭಾರತದ್ದೆ ಕಂಪನಿಯೊಂದ ಮೊಬೈಲ್ ತಯಾರಿಸಿದ್ದು, ಮುಂದಿನ ವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಸ್ವದೇಶಿ ಕಂಪನಿ ಆಗಿರುವ ಲಾವಾ ಮುಂದಿನ ವಾರ ಹೊಸ ಮೊಬೈಲ್ ಫೋನ್ ಬಿಡುಗಡೆ ಮಾಡಲಿದೆ. ಇದರ ಹೆಸರು ಲಾವಾ ಎಕ್ಸ್ 3 ಆಗಿದೆ. ಇದನ್ನೂ ಓದಿ:Cricket News:ಆರ್ಸಿಬಿ ಈ ಬಾರಿ ಯಾವುದೇ ಟಾಪ್ ಆಟಗಾರನನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಯಾಕೆ ಗೊತ್ತೇ? ಹರಾಜಿಗೂ ಮುನ್ನವೇ ಆರ್ಸಿಬಿ ಫ್ಯಾನ್ಸ್ ಗೆ ಕಹಿ ಸುದ್ದಿ.
ಲಾವಾ ಎಕ್ಸ್ 3 ಮೊಬೈಲ್ ಫೀಚರ್ಗಳು
ಈ ಸ್ಮಾರ್ಟ್ ಫೋನ್ 6.53 ಇಂಚಿನ ಎಚ್ಡಿ+ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 16೦೦*720 ಪಿಕ್ಸಲ್ ರೆಸಲೂಶನ್ ಹೊಂದಿದೆ. ಈ ಡಿಸ್ಪ್ಲೇ 6೦ ಎಚ್ ಜಡ್ ರಿಫ್ರೆಶ್ ರೇಟ್ನೊಂದಿಗೆ ಬರುತ್ತದೆ. ಇನ್ನು ಡಿಸ್ಪ್ಲೇ ಶೇ81.76 ಸ್ಕ್ರೀನ್ ಟು ಬಾಡಿ ವಿನ್ಯಾಸವನ್ನು ಹೊಂದಿದೆ. ಇದರ ಜೊತೆ ಡಿಸ್ಪ್ಲೇ 270ಪಿಪಿಐ ಸಾಂದ್ರತೆಹೊಂದಿದೆ.
ಇನ್ನು ಈ ಸ್ಮಾರ್ಟ್ ಫೋನಿನ ಕ್ಯಾಮರಾ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ
ಈ ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮರಾ 8 ಎಂ.ಪಿ ಸೆನ್ಸಾರ್ ಜೊತೆಗೆ ವಿಜಿಎ ಸೆಕೆಂಡರಿ ಲೆನ್ಸ್ ಒಳಗೊಂಡಿದೆ. ಇದಲ್ಲದೆ ಫ್ರಂಟ್ ಕ್ಯಾಮರಾ 5 ಎಂ.ಪಿ. ಇದೆ.
ಬ್ಯಾಟರಿ ಸಾಮರ್ಥ್ಯ:
ಲಾವಾ ಎಕ್ಸ್3 ಸ್ಮಾರ್ಟ್ ಫೋನ್ 1೦ ಡಬ್ಲೂ ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. ಈ ಮೊಬೈಲ್ 4೦೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಮೊಬೈಲ್ ಒಮ್ಮೆ ಸಂಪೂರ್ಣ ಚಾರ್ಜ ಆಗಲು 2.5 ಗಂಟೆ ತೆಗೆದುಕೊಳ್ಳುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ವೈ-ಫೈ, 3.5 ಎಂ.ಎಂ. ಹೆಡ್ ಫೋನ್, ಜಿಪಿಎಸ್, ಬ್ಲೂಟೂತ್ ಅನ್ನು ಒಳಗೊಂಡಿದೆ.

ಇಷ್ಟೇಲ್ಲ ವಿಶೇಷತೆಗಳಿರುವ ಈ ಮೊಬೈಲ್ ರೇಟ್ ಎಂದು ಹೇಳುತ್ತೇವೆ ಕೇಳಿ
ಈ ಸ್ಮಾರ್ಟ್ ಫೋನ್ 6,999 ರೂ.ಗೆ ನಿಮಗೆ ಸಿಗಲಿದೆ. ಇದು ಅಮೇಜಾನ್ ಇಂಡಿಯಾದ ಅಧಿಕೃತ ವೆಬ್ಸೈಟ್ನಲ್ಲಿ ಡಿ.27 ರಂದು ಬಿಡುಗಡೆಯಾಗಲಿದೆ. ಈ ಫೋನ್ ಆರ್ಕ್ಟಿಟ್ ಬ್ಲೂ, ಚಾರ್ಕೋಲ್ ಬ್ಲಾಕ್, ಮತ್ತು ಲೂಸ್ಟರ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಫೋನ್ ಈಗಾಗಲೇ ಫ್ರೀ ಆರ್ಡರ್ ಮಾಡುವ ಗ್ರಾಹಕರಿಗೆ 2999 ರೂ. ಮೌಲ್ಯದ ಲಾವಾ ಪ್ರೊಬರ್ಡ್ಸ ಎನ್11 ಅನ್ನು ಉಚಿತವಾಗಿ ನೀಡಲಿದೆ.

lava x3 made in india best featuresless PriceMade in IndiamobileSmartPhome