Sonu Gowda: ಸೋನು ಗೌಡ ಅವರು ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಗೊತ್ತಿರುವ ಹೆಸರು. ಸೋನು ಗೌಡ ಅವರ ಟಿಕ್ ಟಾಕ್ ಸ್ಟಾರ್ ಆಗಿ ಫೇಮಸ್ (Famous) ಆಗಿ ನಂತರ ಇನ್ಸ್ಟಾಗ್ರಾಮ್ (Instagram) ಇಂದಲೂ ಪಾಪ್ಯುಲರ್ ಆಗಿದ್ದರು. ಜೊತೆಗೆ, ಬಿಗ್ ಬಾಸ್ (Big Boss) ಕನ್ನಡ ಓಟಿಟಿ (OTT) ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ನಂತರ ಇವರ ಜನಪ್ರಿಯತೆ ಇನ್ನು ಹೆಚ್ಚಾಯಿತು ಎಂದು ಹೇಳಬಹುದು. ಸೋನು ಗೌಡ ಅವರು ಮದುವೆ ಯಾವಾಗ ಆಗುತ್ತಾರೆ? ಅವರು ಮದುವೆ ಆಗುವ ಹುಡುಗ ಹೇಗಿರಬೇಕಂತೆ ಗೊತ್ತಾ? ಇದನ್ನೂ ಓದಿ: Agriculture: ಅಡಿಕೆ ತೋಟದಲ್ಲಿ ಕಳೆನಾಶಕಗಳನ್ನು ಬಳಸಿದ್ರೆ ಕಳೆ ಮಾತ್ರವಲ್ಲ, ಜೀವ, ತೋಟ ಎರಡನ್ನೂ ಕಳೆದುಕೊಳ್ಳಬೇಕಾಗುತ್ತೇ ಎಚ್ಚರ, ಸಂಶೋಧಕರಿಂದ ಹೊರಬಿತ್ತು ಭಯಾನಕ ಸುದ್ದಿ!
ಬಿಗ್ ಬಾಸ್ ಮನೆಯೊಳಗೆ ಸೋನು ಇದ್ದಾಗ, ಹೆಚ್ಚಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಇವರು ಕೊಡುವ ಒಂದೊಂದು ಹೇಳಿಕೆಗಳು ಕೂಡ ವೈರಲ್ ಆಗುತ್ತಿದ್ದವು. ಬಿಗ್ ಬಾಸ್ ಮನೆಯ ಕಂಟೆಂಟ್ ಕ್ವೀನ್ ಎಂದೇ ಸೋನು ಅವರನ್ನು ಕರೆಯುತ್ತಿದ್ದರು. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ರಾಕೇಶ್ ಅಡಿಗ ಅವರ ಮೇಲೆ ಸೋನು ಅವರಿಗೆ ವಿಶೇಷವಾದ ಭಾವನೆ ಇತ್ತು, ರಾಕೇಶ್ ಅವರನ್ನು ತುಂಬಾ ಹಚ್ಚಿಕೊಂಡಿದ್ದರು. ಇದನ್ನೂ ಓದಿ:
ಲವ್ ಮಾಡುತ್ತಿರುವುದಾಗಿಯೂ ಹೇಳಿದ್ದರು, ಆದರೆ ರಾಕೇಶ್, ಸೋನು ಗೌಡ ಅವರಿಗೆ ಅರ್ಥ ಮಾಡಿಸಿ, ಇಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ಇನ್ನು ಬಿಗ್ ಬಾಸ್ ಮನೆಯ ಒಳಗೆ ಕೂಡ ಸೋನು ಗೌಡ ಅವರು ಮದುವೆ ಹಾಗೂ ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಮಾತನಾಡಿದ್ದರು, ಇದೀಗ ಇತ್ತೀಚಿನ ಇಂಟರ್ವ್ಯೂ ಒಂದರಲ್ಲಿ ತಾವು ಪ್ರೀತಿಸುವ ಹುಡುಗ ಹೇಗಿರಬೇಕು, ಮದುವೆ ಆಗೋದು ಯಾವಾಗ ಎಂದು ಸೋನು ರಿವೀಲ್ ಮಾಡಿದ್ದಾರೆ.
“ಜೀವನದಲ್ಲಿ ನನಗೆ ಕೆಲವು ಕನಸುಗಳು ಆಸೆಗಳು ಇದೆ, ಅದೆಲ್ಲವು ನೆರವೇರಿದೆ ಮಾತ್ರ ಮದುವೆ ಆಗುತ್ತೇನೆ, ಒಂದು ವೇಳೆ ನೆರವೇರಿಲ್ಲ ಎಂದರೆ ಎಷ್ಟೇ ವರ್ಷ ಆದರೂ ಮದುವೆ ಆಗುವುದಿಲ್ಲ.. ಮನೆಯಲ್ಲಿ ನನ್ನನ್ನ ತುಂಬಾ ಪ್ರೀತಿ ಮಾಡ್ತಾರೆ, ಅವರಿಗಿಂತ ಹೆಚ್ಚು ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುವ ಹುಡುಗ ನನಗೆ ಸಿಗಬೇಕು. ಹಾಗೆಯೇ ಪ್ರಾಮಾಣಿಕವಾಗಿ ಇರಬೇಕು ಅಷ್ಟೇ ನನ್ನ ಬೇಡಿಕೆ.. ಇನ್ನೇನು ಇಲ್ಲ.. ಹುಡುಗ ಬೆಳ್ಳಗೆ ಇರಬೇಕು ಅಂತ ಯಾವುದೇ ನಿರೀಕ್ಷೆ ಇಲ್ಲ..” ಎಂದು ಹೇಳಿದ್ದಾರೆ ಸೋನು ಗೌಡ. ಇದನ್ನೂ ಓದಿ: TCS Job: ಟಿಸಿಎಸ್ ಗೆ 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೇಕಂತೆ; ಉತ್ತಮ ಸಂಬಳ, ಫ್ರೆಶರ್ಸ್ ಗೆ ಆದ್ಯತೆ; ಕೂಡಲೇ ಅರ್ಜಿ ಸಲ್ಲಿಸಿದ್ರೆ ಇಲ್ಲಿ ಕೆಲಸ ಪಕ್ಕಾ ಫಿಕ್ಸ್!